ನವದೆಹಲಿ: ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವ ಕುಟುಂಬಸ್ಥರು ನಾಳೆ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿರುವ ಔತಣಕೂಟದಲ್ಲಿ ಭಾಗಿಯಾಗ್ತಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ದೇಶದ ವಿವಿಧ ನಾಯಕರಿಗೂ ಆಹ್ವಾನ ನೀಡಲಾಗಿದೆ.
ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಔತಣಕೂಟದಲ್ಲಿ ಮಾಜಿ ಪ್ರಧಾನಿ, ಕಾಂಗ್ರೆಸ್ ಹಿರಿಯ ಮುಖಂಡ ಡಾ. ಮನಮೋಹನ್ ಸಿಂಗ್ ಹಾಗೂ ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿಲ್ಲ ಎಂದು ತಿಳಿದು ಬಂದಿದೆ.
-
Sources: Former Prime Minister Manmohan Singh and Leader of Opposition in Rajya Sabha, Ghulam Nabi Azad will not attend the dinner banquet at the Rashtrapati Bhavan tomorrow. (file pics) pic.twitter.com/tz6Xh8uha1
— ANI (@ANI) February 24, 2020 " class="align-text-top noRightClick twitterSection" data="
">Sources: Former Prime Minister Manmohan Singh and Leader of Opposition in Rajya Sabha, Ghulam Nabi Azad will not attend the dinner banquet at the Rashtrapati Bhavan tomorrow. (file pics) pic.twitter.com/tz6Xh8uha1
— ANI (@ANI) February 24, 2020Sources: Former Prime Minister Manmohan Singh and Leader of Opposition in Rajya Sabha, Ghulam Nabi Azad will not attend the dinner banquet at the Rashtrapati Bhavan tomorrow. (file pics) pic.twitter.com/tz6Xh8uha1
— ANI (@ANI) February 24, 2020
ಭಾಗಿಯಾದಿರುವುದಕ್ಕೆ ಕಾರಣ?
ಎಐಸಿಸಿ ಮಧ್ಯಂತರ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಅವರಿಗೆ ಔತಣಕೂಟಕ್ಕೆ ಆಹ್ವಾನ ನೀಡದಿರುವುದು ಇವರ ಆಕ್ರೋಶಕ್ಕೆ ಕಾರಣವಾಗಿದ್ದು, ತಾವು ಇದರಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಟ್ರಂಪ್ ಜತೆಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಪ್ರತಿಪಕ್ಷದ ಯಾವುದೇ ನಾಯಕರಿಗೂ ಆಹ್ವಾನ ನೀಡಿಲ್ಲ, ಇಂದು ಕಾಂಗ್ರೆಸ್ ಪಕ್ಷದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಲಾಗ್ತಿದೆ.
ನಾಳೆ ಮೆಲಾನಿಯಾ ಟ್ರಂಪ್ ದೆಹಲಿಯಲ್ಲಿನ ಶಾಲೆವೊಂದಕ್ಕೆ ಭೇಟಿ ನೀಡಲಿದ್ದು, ಇದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಸಿಸೋಡಿಯಾ ಅವರಿಗೂ ಸಹ ಆಹ್ವಾನ ನೀಡಿಲ್ಲ ಎಂದು ತಿಳಿದುಬಂದಿದೆ.