ಲಾಹೋರ್(ಪಾಕಿಸ್ತಾನ) : ಕೊರೊನಾ ಸೋಂಕಿನಿಂದ ಪಾಕಿಸ್ತಾನದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ರಿಯಾಜ್ ಶೇಖ್ (51) ಮೃತಪಟ್ಟಿದ್ದಾರೆ. ಈ ಮೂಲಕ ಪಾಕ್ನಲ್ಲಿ ಕೊರೊನಾ ವೈರಸ್ಗೆ ಎರಡನೇ ಕ್ರಿಕೆಟರ್ ಬಲಿಯಾಗಿದ್ದಾರೆ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಈ ಸುದ್ದಿಯನ್ನು ಟ್ವಿಟ್ಟರ್ನಲ್ಲಿ ದೃಢಪಡಿಸಿದ್ದು, ಶೇಖ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುವಂತೆ ಟ್ವಿಟ್ಟರ್ನಲ್ಲಿ ಮನವಿ ಮಾಡಿದ್ದಾರೆ.
-
إِنَّا لِلّهِ وَإِنَّـا إِلَيْهِ رَاجِعُونَ ہمارے قریبی ساتھی کرکٹر ریاض شیخ خالق حقیقی سے جا ملے ۔ اللہ تعالی ان کے درجات بلند فرمائے اور آپ لوگوں سے درخواست ہے کہ انکی مغفرت کے لیئے دعا کریں آمین ۔ pic.twitter.com/xjsVFjX3zh
— Rashid Latif 🇵🇰 (@iRashidLatif68) June 2, 2020 " class="align-text-top noRightClick twitterSection" data="
">إِنَّا لِلّهِ وَإِنَّـا إِلَيْهِ رَاجِعُونَ ہمارے قریبی ساتھی کرکٹر ریاض شیخ خالق حقیقی سے جا ملے ۔ اللہ تعالی ان کے درجات بلند فرمائے اور آپ لوگوں سے درخواست ہے کہ انکی مغفرت کے لیئے دعا کریں آمین ۔ pic.twitter.com/xjsVFjX3zh
— Rashid Latif 🇵🇰 (@iRashidLatif68) June 2, 2020إِنَّا لِلّهِ وَإِنَّـا إِلَيْهِ رَاجِعُونَ ہمارے قریبی ساتھی کرکٹر ریاض شیخ خالق حقیقی سے جا ملے ۔ اللہ تعالی ان کے درجات بلند فرمائے اور آپ لوگوں سے درخواست ہے کہ انکی مغفرت کے لیئے دعا کریں آمین ۔ pic.twitter.com/xjsVFjX3zh
— Rashid Latif 🇵🇰 (@iRashidLatif68) June 2, 2020
ಶೇಖ್ 1987ರಲ್ಲಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು, 2005ರ ತನಕ 43 ಪ್ರಥಮ ದರ್ಜೆ ಪಂದ್ಯಗಳು ಮತ್ತು 25 ಲಿಸ್ಟ್-ಎ ಪಂದ್ಯಗಳನ್ನು ಆಡಿದ್ದಾರೆ. ನಂತರ ಮೊಯಿನ್ ಖಾನ್ ಕ್ರಿಕೆಟ್ ಅಕಾಡೆಮಿಯಲ್ಲಿ ಮುಖ್ಯ ತರಬೇತುದಾರರಾಗಿಯೂ ಕೆಲಸ ಮಾಡುತ್ತಿದ್ದರು.
ಇದಕ್ಕೂ ಮೊದಲು ಪಾಕ್ನ ಮತ್ತೊಬ್ಬ ಕ್ರಿಕೆಟಿಗ ಜಾಫರ್ ಸರ್ಫರಾಜ್ ಏಪ್ರಿಲ್‌ನಲ್ಲಿ ಕೊರೊನಾ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದರು. ಈಗ ಸದ್ಯಕ್ಕೆ ಪಾಕಿಸ್ತಾನದಲ್ಲಿ ಒಟ್ಟು 76,106 ಸೋಂಕಿತರು ಪತ್ತೆಯಾಗಿದ್ದು, 1,599 ಮಂದಿ ಸಾವನ್ನಪ್ಪಿದ್ದಾರೆ. 27,110 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.