ETV Bharat / bharat

ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್ ನೇಣಿಗೆ ಶರಣು - ನಾಗಾಲ್ಯಾಂಡ್ ಮಾಜಿ ಗವರ್ನರ್​​ ಅಶ್ವಿನಿ ಕುಮಾರ್ ಆತ್ಮಹತ್ಯೆ

ಮಾಜಿ ಐಪಿಎಸ್​ ಅಧಿಕಾರಿಯಾಗಿದ್ದ ಅಶ್ವನಿ ಕುಮಾರ್ ಅವರು, ಹಿಮಾಚಲದ ಸಿರ್ಮೌರ್ ಜಿಲ್ಲೆಯವರಾಗಿದ್ದಾರೆ.

Ashwani Kumar dead
Ashwani Kumar dead
author img

By

Published : Oct 7, 2020, 10:00 PM IST

ಶಿಮ್ಲಾ( ಹಿಮಾಚಲ ಪ್ರದೇಶ): ಮಣಿಪುರ ಹಾಗೂ ನಾಗಲ್ಯಾಂಡ್​ ಮಾಜಿ ಗವರ್ನರ್​​ ಹಾಗೂ ಕೇಂದ್ರಿಯ ತನಿಖಾ ದಳದ ಮಾಜಿ ನಿರ್ದೇಶಕ ಅಶ್ವನಿ ಕುಮಾರ್​​(69) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿನ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸ್​ ಸೂಪರಿಡೆಂಟ್​ ಮೋಹಿತ್​ ಚಾವ್ಲಾ ತಿಳಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಖಿನ್ನತೆಗೊಳಗಾಗಿದ್ದರು ಎಂಬ ಮಾಹಿತಿ ಕೂಡ ಬಹಿರಂಗಗೊಂಡಿದೆ. ಇವರು ಶಿಮ್ಲಾ ವಿಶ್ವವಿದ್ಯಾಲಯದಿಂದ ಪಿಹೆಚ್​ಡಿ ಪಡೆದುಕೊಂಡಿದ್ದರು.

ಸ್ಥಳದಲ್ಲಿ ಡೆತ್​ ನೋಟ್​ ಸಿಕ್ಕಿದೆ. ಈಗಿನ ಪರಿಸ್ಥಿತಿ ಹಾಗೂ ಮುಂದಿನ ಜೀವನದ ಬಗ್ಗೆ ಜಿಗುಪ್ಸೆಗೊಂಡು ಈ ರೀತಿಯಾಗಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಅದರಲ್ಲಿದೆ. ಇದರ ಬಗ್ಗೆ ಅವರ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಮೃತದೇಹವನ್ನ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿ​ಗೆ ತೆಗೆದುಕೊಂಡು ಹೋಗಲಾಗಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.

ಅಶ್ವಿನಿ ಕುಮಾರ್​ ಕೇಂದ್ರ ಸರ್ಕಾರ ಹಾಗೂ ಹಿಮಾಚಲ ಪ್ರದೇಶದಲ್ಲಿ ಬರೋಬ್ಬರಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 1973ರ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿ ಆಯ್ಕೆಯಾಗಿದ್ದ ಇವರು ಹಿಮಾಚಲ ಪ್ರದೇಶದಲ್ಲಿ 2006ರಲ್ಲಿ ಡಿಜಿಪಿ ಆಗಿ ಸೇವೆ ಸಲ್ಲಿಸಿದ್ದರು. ಇದಾದ ಬಳಿಕ ಸಿಬಿಐ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದರು. 2013ರಲ್ಲಿ ಮಣಿಪುರ ಹಾಗೂ 2014ರ ಅವಧಿಯಲ್ಲಿ ನಾಗಾಲ್ಯಾಂಡ್​ ರಾಜ್ಯಪಾಲರಾಗಿ ಇವರು ಕಾರ್ಯ ನಿರ್ವಹಿಸಿದ್ದಾರೆ. 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.