ಬಿಕಾನೇರ್ (ರಾಜಸ್ಥಾನ): ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇಲ್ಲಿನ ಮಾಜಿ ಮಹಾರಾಣಿ ಪದ್ಮಾ ಕುಮಾರಿ ಅವರು ಹಲ್ದಿರಾಮ್ ಮೂಲ್‌ಚಂದ್ ಹಾರ್ಟ್ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾದರು.
ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ನಿನ್ನೆ ತಡರಾತ್ರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ಕರೆ ತರುವ ಮುನ್ನವೇ ಅವರ ಅರೋಗ್ಯ ಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಚಿಕಿತ್ಸೆ ಆರಂಭಿಸಿದ ಸ್ವಲ್ಪ ಸಮಯದಲ್ಲೇ ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮಾಜಿ ರಾಣಿ ಹಿಮಾಚಲ ಪ್ರದೇಶದ ಚಂಬಾ ರಾಜಮನೆತನಕ್ಕೆ ಸೇರಿದವರು. 2003ರಲ್ಲಿ ನಿಧನ ಹೊಂದಿದ ಮಾಜಿ ಬಿಕಾನೇರ್ ಮಹಾರಾಜ ನರೇಂದ್ರ ಸಿಂಗ್ ಅವರನ್ನು ವಿವಾಹವಾಗಿದ್ದರು. ಅವರ ಮಗಳು ಸಿಧಿ ಕುಮಾರಿ ಅವರು ಹಾಲಿ ಬಿಜೆಪಿ ಶಾಸಕಿಯಅಗಿದ್ದಾರೆ.
ಮಾಜಿ ರಾಣಿಯ ಅಂತಿಮ ವಿಧಿವಿಧಾನಗಳು ಇಂದು ನಡೆಯಲಿವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.