ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಕಸ್ಟಡಿ ಇಂದಿಗೆ ಅಂತ್ಯವಾಗಿದ್ದು, ಚಿದಂಬರಂ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಚಿದು ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದು, ತಮ್ಮ ಕಕ್ಷಿದಾರರಿಗೆ ಮಧ್ಯಂತರ ರಕ್ಷಣೆ ನೀಡಬೇಕು ಮತ್ತು ಅವರು ದೇಶ ತೊರೆಯುವುದಿಲ್ಲ ಎಂದಿದ್ದಾರೆ. ಒಂದು ವೇಳೆ ಚಿದಂಬರಂ ಅವರನ್ನು ತಿಹಾರ್ ಜೈಲಿಗೆ ಕಳುಹಿಸಿದರೆ, ಅರ್ಜಿ ಮಹತ್ವ ಕಳೆದುಕೊಳ್ಳಲಿದೆ ಎಂದು ಕಪಿಲ್ ಸಿಬಲ್ ಕೋರ್ಟ್ನಲ್ಲಿ ಹೇಳಿದ್ದಾರೆ.
-
P Chidambaram's lawyer Kapil Sibal in Supreme Court during hearing against Chidambaram's police remand & issuance of non-bailable warrant: He is a 74-year-old man, put him under house arrest, no prejudice will be caused to anyone. #INXMediacase pic.twitter.com/CZHyareC1H
— ANI (@ANI) September 2, 2019 " class="align-text-top noRightClick twitterSection" data="
">P Chidambaram's lawyer Kapil Sibal in Supreme Court during hearing against Chidambaram's police remand & issuance of non-bailable warrant: He is a 74-year-old man, put him under house arrest, no prejudice will be caused to anyone. #INXMediacase pic.twitter.com/CZHyareC1H
— ANI (@ANI) September 2, 2019P Chidambaram's lawyer Kapil Sibal in Supreme Court during hearing against Chidambaram's police remand & issuance of non-bailable warrant: He is a 74-year-old man, put him under house arrest, no prejudice will be caused to anyone. #INXMediacase pic.twitter.com/CZHyareC1H
— ANI (@ANI) September 2, 2019
ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ನ್ಯಾಯಾಂಗ ಬಂಧನವನ್ನು ಮತ್ತೆ ಮೂರು ದಿನ ವಿಸ್ತರಿಸಿದೆ. ಮಧ್ಯಂತರ ಜಾಮೀನು ನೀಡಿ ಇಲ್ಲವೇ ಗೃಹಬಂಧನದಲ್ಲಿರಿಸಿ ಎನ್ನುವ ಚಿದಂಬರಂ ಪರ ವಕೀಲರ ಮನವಿಗೆ ಕೋರ್ಟ್ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶಿಸಿದೆ.
ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಮಾಜಿ ವಿತ್ತ ಸಚಿವ ಚಿದಂಬರಂ ಅವರನ್ನು ಸಿಬಿಐ ಆಗಸ್ಟ್ 21ರ ರಾತ್ರಿ ಬಂಧಿಸಿತ್ತು. ಆ ಬಳಿಕ ಎರಡು ಬಾರಿ ತಲಾ ಐದು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು.