ತಮಿಳುನಾಡು: ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ಮಾಜಿ ಸಂಸದ ಕೆ ಅರ್ಜುನನ್ ಹಲ್ಲೆ ನಡೆಸಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕಾರಿನಲ್ಲಿ ಬಂದ ಅರ್ಜುನನ್ ಹತ್ತಿರ ಟೋಲ್ ಗೇಟ್ ಬಳಿ ಪೊಲೀಸರು ಇ-ಪಾಸ್ ತೋರಿಸುವಂತೆ ಕೇಳಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿ ಹಾಗೂ ಅರ್ಜುನನ್ ನಡುವೆ ವಾಗ್ವಾದ ನಡೆದಿದೆ. ಘಟನೆಯ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ.
ಇದರಲ್ಲಿ ಪೊಲೀಸ್ ಅಧಿಕಾರಿಗೆ ಅರ್ಜುನನ್ ಕಾಲಿನಿಂದ ಒದೆಯುವುದು, ಕೆಟ್ಟ ಪದಗಳಿಂದ ನಿಂದಿಸಿರುವುದು ಕಂಡುಬರುತ್ತದೆ. ಕೋಪಗೊಂಡ ಪೊಲೀಸ್ ಕೂಡ ಅರ್ಜುನನ್ರನ್ನು ತಳ್ಳಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ತಮಿಳುನಾಡಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆ ಲಾಕ್ಡೌನ್ ಕ್ರಮಗಳನ್ನು ಬಿಗಿಗೊಳಿಸಲಾಗಿದ್ದು, ಒಂದು ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣಿಸುವಾಗ ಇ - ಪಾಸ್ ಕಡ್ಡಾಯವಾಗಿದೆ.