ಢಾಕಾ(ಬಾಂಗ್ಲಾದೇಶ): ಬಂಗಬಂಧು ಹಾಗೂ ಬಾಂಗ್ಲಾದ ಸಂಸ್ಥಾಪಕ ಶೇಖ್ ಮುಜಿಬುರ್ ರಹಮಾನ್ ಅವರನ್ನು ಕೊಂದ ಆರೋಪದಲ್ಲಿಅಲ್ಲಿನ ಮಿಲಿಟರಿಯ ಮಾಜಿ ನಾಯಕ ಅಬ್ದುಲ್ ಮಜೀದ್ನನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾದ ಗೃಹ ಮಂತ್ರಿ ಅಸಾದುಜ್ಮಾನ್ ಖಾನ್ ಕಮಲ್ ಸ್ಪಷ್ಟಪಡಿಸಿದ್ದಾರೆ.
ತಲೆ ಮರೆಸಿಕೊಂಡಿದ್ದ ಆರು ಮಂದಿ ಮಿಲಿಟರಿಯ ಮಾಜಿ ಅಧಿಕಾರಿಗಳಲ್ಲಿ ಮಜೀದ್ ಕೂಡಾ ಒಬ್ಬನಾಗಿದ್ದ. ಈಗ ಆತನನ್ನು ಬಂಧಿಸಲಾಗಿದ್ದು ವಿಚಾರಣೆಯ ಬಳಿಕ ಕಠಿಣ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.
ಕೆಲವು ದಿನಗಳ ಹಿಂದೆ ಗೃಹ ಮಂತ್ರಿ ಅಸಾದುಜ್ಮಾನ್ ಖಾನ್ ಕಮಲ್ ಅವರು ಮಜೀದ್ ಭಾರತದಲ್ಲಿ ಅಡಗಿದ್ದ, ಈಗ ಭಾರತದಿಂದ ಢಾಕಾಗೆ ವಾಪಸ್ ಬಂದಾಗ ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಮಜೀದ್ ತಾನು ಬಂಗಬಂಧು ಮುಜಿಬುರ್ ರಹಮಾನ್ ಅನ್ನು 1975 ಆಗಸ್ಟ್ 15ರಂದು ಅವರ ನಿವಾಸದಲ್ಲಿ ಧನಮಂಡಿ ನಿವಾಸದಲ್ಲಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಅದರ ಜೊತೆಗೆ ರಾಷ್ಟ್ರದ ನಾಲ್ವರು ನಾಯಕರನ್ನು ನವೆಂಬರ್ 3ರಂದು ಬಿಗಿ ಭದ್ರತೆಯ ನಡುವೆಯೇ ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಗೃಹ ಸಚಿವ ಅಸಾದುಜ್ಮಾನ್ ಖಾನ್ ಕಮಲ್ ಸ್ಪಷ್ಟನೆ ನೀಡಿದ್ದಾರೆ.