ETV Bharat / bharat

ಭಾರತದಲ್ಲಿ ಆಹಾರ (ಅ)ಭದ್ರತೆ: ಹಸಿವು ನೀಗಿಸಲು ಸರ್ಕಾರದ ಕ್ರಮಗಳೇನು? - ಬಾಣಂತಿಯರ ಪೌಷ್ಠಿಕ ಆಹಾರ

ಜನರ ಹಸಿವು ನೀಗಿಸಲು ದೇಶದಲ್ಲಿ ಹಲವಾರು ಯೋಜನೆಗಳನ್ನ ಜಾರಿಗೆ ತರಲಾಗಿದೆ. ಆದರೆ, ಈಗಲೂ ಕೋಟ್ಯಂತರ ಮಕ್ಕಳು ಪೌಷ್ಠಿಕಯುಕ್ತ ಆಹಾರ ಸಿಗದೆ ಬಳಲುತ್ತಿವೆ. ಅಹಾರ ಅಭದ್ರತೆ ನೀಗಿಸಲು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಹೀಗಿದೆ.

food insecurity in india
ಭಾರತದಲ್ಲಿ ಆಹಾರ ಅಭದ್ರತೆ
author img

By

Published : Oct 5, 2020, 3:19 PM IST

1975 ರ ಹಿಂದೆಯೇ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ (ಐಸಿಡಿಎಸ್) ಕಾರ್ಯಕ್ರಮವನ್ನು ಪ್ರಾರಂಭಿಸಿದ ಕೆಲವೇ ದೇಶಗಳಲ್ಲಿ ಭಾರತವೂ ಒಂದು. 6 ವರ್ಷದೊಳಗಿನ ಮಕ್ಕಳು ಮತ್ತು ತಾಯಂದಿರಿಗೆ ಪೌಷ್ಠಿಕ ಆಹಾರ, ಶಾಲಾ ಪೂರ್ವ ಶಿಕ್ಷಣ, ಪ್ರಾಥಮಿಕ ಆರೋಗ್ಯ ಮತ್ತು ರೋಗ ನಿರೋಧಕ ಸೇವೆಗಳನ್ನು ಒದಗಿಸಲು ಈ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಆರಂಭದಲ್ಲಿ 5,000 ಅಂಗನವಾಡಿ ಕೇಂದ್ರಗಳೊಂದಿಗೆ ಯೋಜನೆ ಪ್ರಾರಂಭವಾಗಿತ್ತು.

ಆದರೆ 7,000 ಬ್ಲಾಕ್‌ಗಳಲ್ಲಿ 14,00,000 ಅಂಗನವಾಡಿ ಕೇಂದ್ರಗಳು ಕಣ್ತೆರೆದಿರುವ ಈಗಿನ ಸಂದರ್ಭದಲ್ಲಿ ಕೂಡ ಯೋಜನೆಯ ಮೂಲ ಧ್ಯೇಯ ಇನ್ನೂ ಪೂರ್ಣಗೊಂಡಿಲ್ಲ. ಆಫ್ರಿಕಾ ದೇಶಗಳಾದ ಘಾನಾ ಮತ್ತು ಟೊಬಾಗೊಗೆ ಹೋಲಿಸಿದರೆ, ಶಿಶು ಕಲ್ಯಾಣದಲ್ಲಿ ಭಾರತ ಏಕೆ ಕಳಪೆ ದರ ಹೊಂದಿದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ನೀಡಿರುವ ಇತ್ತೀಚಿನ ವರದಿ ಗುರುತಿಸಿದೆ. ಯೋಜನೆಯಡಿ ಅನುಮತಿಸದ ಚಟುವಟಿಕೆಗಳಿಗೆ ಐಸಿಡಿಎಸ್‌ ಹಣವನ್ನು ಬಳಸಿಕೊಂಡದ್ದಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವನ್ನು ಸಿಎಜಿ ವರದಿ ಟೀಕಿಸಿದೆ. ಕಳೆದ ಕೆಲವು ವರ್ಷಗಳಿಂದ, ಐಸಿಡಿಎಸ್​ಗೆ ವಿತರಿಸಲಾದ ಬಜೆಟ್ ಅಲ್ಪ ಮಟ್ಟದ್ದಾಗಿದೆ. 2016ರಲ್ಲಿ ಸುಮಾರು ಶೇ 50ರಷ್ಟು ನಿಧಿ ಕಡಿತವಾಗಿತ್ತು.

ಆತಂಕಕಾರಿ ಪೌಷ್ಠಿಕಾಂಶ ಸೂಚ್ಯಂಕಗಳ ಹೊರತಾಗಿಯೂ, 2020 ರ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಗೆ ಮೀಸಲಿಟ್ಟಿದ್ದ ನಿಧಿಯಲ್ಲಿ ಶೇ.19 ರಷ್ಟನ್ನು ಕಡಿತಗೊಳಿಸಲಾಯಿತು. ಕೆಲವು ರಾಜ್ಯಗಳು ತಮ್ಮ ಆಯವ್ಯಯದ ವಿವರಗಳನ್ನು ಸಲ್ಲಿಸಿದವು. ಆದರೆ ನಿಜವಾದ ಖರ್ಚು ಮತ್ತು ನಿಧಿಯ ಬಳಕೆ ನಡುವೆ ವ್ಯತ್ಯಾಸಗಳಿವೆ. ಸೆಪ್ಟೆಂಬರ್ 2019 ರಲ್ಲಿ ಪ್ರಕಟವಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ವರದಿಯ ಪ್ರಕಾರ 5 ವರ್ಷದೊಳಗಿನ ಮಕ್ಕಳ ಸಾವುಗಳಲ್ಲಿ ಶೇ.68 ರಷ್ಟು ಪ್ರಕರಣಗಳು ಅಪೌಷ್ಟಿಕತೆಯ ಕಾರಣದಿಂದ ಉಂಟಾಗುತ್ತಿವೆ. 5 ವರ್ಷದೊಳಗಿನ ಮಕ್ಕಳಲ್ಲಿ ಶೇ. 35ರಷ್ಟು ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದಾರೆ. ಅಸಮರ್ಪಕ ವಿತರಣೆ ಮತ್ತು ಕಳಪೆ ಮೇಲ್ವಿಚಾರಣೆ ಹೇಗೆ ಯೋಜನೆಯನ್ನು ಕುಂಠಿತಗೊಳಿಸಿದೆ ಎಂಬುದನ್ನು ಈ ಅಂಕಿ- ಸಂಖ್ಯೆಗಳು ತಿಳಿಸುತ್ತವೆ.

6 ವರ್ಷದೊಳಗಿನ 8.5 ಕೋಟಿ ಮಕ್ಕಳು ಮತ್ತು 1.90 ಕೋಟಿ ಬಾಣಂತಿಯರ ಪೌಷ್ಠಿಕಾಂಶದ ಅಗತ್ಯಗಳನ್ನು ಈಡೇರಿಸುವಲ್ಲಿ ಅಂಗನವಾಡಿ ಕೇಂದ್ರಗಳು ತೊಡಗಿವೆ ಎಂದು ಅಧಿಕೃತ ಅಂಕಿ- ಅಂಶಗಳು ತಿಳಿಸಿವೆ. ರೋಗ ನಿರೋಧಕ ಮತ್ತು ಪೌಷ್ಠಿಕಾಂಶದ ಕಾರ್ಯಕ್ರಮಗಳನ್ನು ಜಾರಿಗೆ ತರಲು ದೇಶದೆಲ್ಲೆಡೆ 17 ಲಕ್ಷ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲು 2001 ರಲ್ಲಿ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಆದೇಶ ನೀಡಿತ್ತು. ರಾಜ್ಯ ಸರ್ಕಾರಗಳಿಂದ ಅಗತ್ಯ ಅನುದಾನಗಳನ್ನು ಪಡೆದ ನಂತರವೂ ಸಾವಿರಾರು ಕೇಂದ್ರಗಳು ಇನ್ನೂ ಕಾರ್ಯ ನಿರ್ವಹಿಸುತ್ತಿಲ್ಲ. ಇದಲ್ಲದೆ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಅನೇಕ ಗ್ರಾಮೀಣ ಮಕ್ಕಳ ಆರೈಕೆ ಕೇಂದ್ರಗಳ ಕಾರ್ಯನಿರ್ವಹಣೆ ಕುಂಠಿತಗೊಂಡಿದೆ. ಇತ್ತೀಚೆಗೆ, ‘ಹಸಿವಿನ ರೋಗ’ ಎಲ್ಲೆಡೆ ಹಬ್ಬುವುದನ್ನು ತಡೆಯಲು ಅಂಗನವಾಡಿ ಕೇಂದ್ರಗಳನ್ನು ಪುನಃ ತೆರೆಯುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.

ಕೋವಿಡ್ -19 ಸಮಯದಲ್ಲಿ ದೂರದ ಕುಗ್ರಾಮಗಳಲ್ಲಿ ಬುಡಕಟ್ಟು ಮಹಿಳೆಯರ ಕಲ್ಯಾಣಕ್ಕಾಗಿ ಅಧಿಕಾರಿಗಳು ಶ್ರಮಿಸಿದ ಉದಾಹರಣೆಗಳಿದ್ದರೂ, ಅವು ಸಾಮಾನ್ಯ ಪ್ರಕರಣಗಳಿಗೆ ಹೋಲಿಸಿದರೆ ವಿರಳ ಸಂಖ್ಯೆಯಲ್ಲಿವೆ. 2019 ರ ಡಿಸೆಂಬರ್‌ನಲ್ಲಿ ವಿಶೇಷವಾಗಿ ಪುದುಚೇರಿ, ಪಶ್ಚಿಮ ಬಂಗಾಳ, ಬಿಹಾರ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳ ಅಂಗನವಾಡಿ ಕೇಂದ್ರಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಭಾರಿ ಸಂಖ್ಯೆಯ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಕೇಂದ್ರಗಳು ಗುತ್ತಿಗೆದಾರರ ಬಿಲ್‌ ಪಾವತಿಸುತಿಲ್ಲ, ಸಿಬ್ಬಂದಿಗೆ ಸಂಬಳವನ್ನೂ ನೀಡುತ್ತಿಲ್ಲ. ಎಂ.ಎಸ್.ಸ್ವಾಮಿನಾಥನ್ ಹೇಳಿದಂತೆ ಭಾರತ ಪೌಷ್ಠಿಕಾಂಶ ಸುರಕ್ಷತೆ ಬಗ್ಗೆ ಏಕೆ ಗಮನಹರಿಸಬೇಕು ಎಂಬುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರ್ಥಮಾಡಿಕೊಳ್ಳಬೇಕು. ಭಾರತದ ಎಳೆಯ ಪ್ರಜೆಗಳಿಗೆ ಆಹಾರ ಸುರಕ್ಷತೆ ಒದಗಿಸಲು ಐಸಿಡಿಎಸ್ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.