ETV Bharat / bharat

ಜಗನ್ ಸರ್ಕಾರದ‌ ಸುಗ್ರೀವಾಜ್ಞೆ ರದ್ದು‌; ಎಸ್‌ಇಸಿ ಆಗಿ ರಮೇಶ್‌ ಕುಮಾರ್‌ ಮತ್ತೆ ನೇಮಕ - ವೈಎಸ್ ಜಗನ್‌ ರೆಡ್ಡಿ

ಆಂಧ್ರ ಹೈಕೋರ್ಟ್‌ನಲ್ಲಿ ಸಿಎಂ ಜಗನ್‌ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದೆ. ಎಸ್‌ಇಸಿ ನೇಮಕ ವಿಷಯದಲ್ಲಿ ನಿಯಮಗಳನ್ನು ಬದಲಾಯಿಸಿ ಸರ್ಕಾರ ತಂದಿದ್ದ ಸುಗ್ರೀವಾಜ್ಞೆಯನ್ನು ಕೋರ್ಟ್‌ ರದ್ದು ಮಾಡಿ ಮಹತ್ವದ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ರಾಜ್ಯ ಚುನಾವಣಾ ಆಯುಕ್ತರಾಗಿ ನಿಮ್ಮಗಡ್ಡ ರಮೇಶ್‌ ಕುಮಾರ್‌ ಮತ್ತೆ ಅಧಿಕಾರ ಸ್ವೀಕಾರಿಸಿದ್ದಾರೆ. ಈ ಪ್ರಕರಣದ ಸಂಪೂರ್ಣ ಮಾಹಿತಿ ಇಲ್ಲಿದೆ.

following-hc-order-ramesh-kumar-resumes-charge-as-andhra-pradesh-sec
ಸಿಎಂ ಜಗನ್ ಸರ್ಕಾರದ‌ ಸುಗ್ರೀವಾಜ್ಞೆ ರದ್ದುಗೊಳಿಸಿದ ಹೈಕೋರ್ಟ್‌; ಎಸ್‌ಇಸಿಯಾಗಿ ರಮೇಶ್‌ ಕುಮಾರ್‌ ಮತ್ತೆ ಅಧಿಕಾರಕ್ಕೆ
author img

By

Published : May 29, 2020, 7:38 PM IST

ಅಮರಾವತಿ(ಆಂಧ್ರಪ್ರದೇಶ): ಆಂಧ್ರ ಚುನಾವಣಾ ಆಯುಕ್ತರ ವಿಚಾರದಲ್ಲಿ ಅಲ್ಲಿನ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದೆ. ಎಸ್‌ಇಸಿ ನೇಮಕ ವಿಷಯದಲ್ಲಿ ನಿಯಮಗಳನ್ನು ಬದಲಾಯಿಸಿ ಸರ್ಕಾರ ತಂದಿದ್ದ ಸುಗ್ರೀವಾಜ್ಞೆಯನ್ನು ಆ ರಾಜ್ಯದ ಉನ್ನತ ಮಟ್ಟದ ನ್ಯಾಯಾಲಯ ರದ್ದು ಮಾಡಿದೆ. ರಮೇಶ್‌ ಕುಮಾರ್‌ ಅವರನ್ನು ಮತ್ತೆ ಕಮಿಷನರ್‌ ಆಗಿ ನೇಮಕ ಮಾಡಬೇಕು ಎಂದು ಆದೇಶ ನೀಡಿದೆ. ಆರ್ಟಿಕಲ್‌ 213 ಪ್ರಕಾರ ಸದ್ಯದ ಪರಿಸ್ಥಿತಿಯಲ್ಲಿ ಸುಗ್ರೀವಾಜ್ಞೆ ತರುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

ವಿವಾದ ಶುರುವಾಗಿದ್ದು ಇಲ್ಲಿಂದಲೇ

ಕೊರೊನಾ ವೈರಸ್‌ ಹರಡುತ್ತಿದೆ ಎಂದು ಮಾರ್ಚ್‌ 15 ರಂದು ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣಾ ಅವಧಿಯನ್ನು ಮುಂದೂಡಿ ಆಯುಕ್ತ ರಮೇಶ್‌ ಕುಮಾರ್‌ ಆದೇಶ ನೀಡಿದ್ದರು. ಈ ನಿರ್ಧಾರವನ್ನು ಎಪಿ ಸಿಎಂ ಜಗನ್‌ ಮೋಹನ್‌ ರೆಡ್ಡಿ ಖುದ್ದು ಸುದ್ದಿಗೋಷ್ಠಿ ನಡೆಸಿ ಚುನಾವಣಾ ಆಯುಕ್ತರ ನಿರ್ಧಾರವನ್ನು ವಿರೋಧಿಸಿದ್ದರು. ಮಾತ್ರವಲ್ಲದೇ, ಸಚಿವರು, ಆಡಳಿತ ಪಕ್ಷದ ಶಾಸಕರು ತಮ್ಮ ದಾಟಿಯಲ್ಲಿ ಎಸ್‌ಇಸಿ ನಿರ್ಧಾರವನ್ನು ಖಂಡಿಸಿದ್ದರು. ಸರ್ಕಾರ, ಆರೋಗ್ಯ ಇಲಾಖೆಯನ್ನು ಸಂಪರ್ಕಿಸದೇ ಏಕಪಕ್ಷೀಯವಾಗಿ ಅದೇಗೆ ನಿರ್ಧಾರ ಕೈಗೊಂಡರು ಎಂದು ಪ್ರಶ್ನೆ ಮಾಡಿದ್ದರು. ರಾಜ್ಯ ಚುನಾವಣಾ ಆಯುಕ್ತ ರಮೇಶ್‌ ಕುಮಾರ್‌ ಅವರನ್ನು ಆ ಹುದ್ದೆಯಿಂದ ಹೇಗೆ ತೊಲಗಿಸಬೇಕು ಎಂಬುದು ತಮಗೆ ಗೊತ್ತಿದೆ ಎಂದು ಸರ್ಕಾರದ ಸಲಹೆಗಾರ ಸಜ್ಜಲ, ಶಾಸಕ ಅಂಬಟಿ ರಾಂಬಾಬು ಹೇಳಿದ್ರು.

ಅಧಿಕಾರದ ಅವಧಿ ಕಡಿತದ ಸುಗ್ರೀವಾಜ್ಞೆ

ನಿಮ್ಮಗಡ್ಡ ರಮೇಶ್ ಕುಮಾರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪಣತೊಟ್ಟ ಸರ್ಕಾರ ಅದರಂತೆ ಅವರನ್ನು ಹುದ್ದೆಯಿಂದ ಕೆಳಗಿಳಿಸಿತ್ತು. ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಸೆಕ್ಷನ್‌ 200ರನ್ನು ಬದಲಾವಣೆ ಮಾಡಿ ಅದಕ್ಕೆ ಸುಗ್ರೀವಾಜ್ಞೆ ತಂದಿತ್ತು. ನಿಯಗಳನ್ನು ಬದಲಾಯಿಸಿ ಜಿಒ-617 ಮೂಲಕ ನೋಟಿಫಿಕೇಷನ್‌ ಬಿಡುಗಡೆ ಮಾಡಿತ್ತು. ಹೊಸ ನಿಬಂಧನೆಗಳ ಪ್ರಕಾರ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದವರು ಮಾತ್ರ ರಾಜ್ಯ ಚುನಾವಣಾ ಆಯುಕ್ತರಾಗಬೇಕು ಎಂಬ ನಿಯಮ ಜಾರಿ ಮಾಡಿತ್ತು. ಜೊತೆಗೆ ಇವರ ಸೇವಾ ಅವಧಿಯನ್ನು 5 ರಿಂದ 3 ವರ್ಷಕ್ಕೆ ಇಳಿಸಿತ್ತು. ಮೂರು ವರ್ಷ ಸೇವೆ ಸಲ್ಲಿಸಿದರೆ ಮುಂದಿನ ಮೂರು ವರ್ಷಗಳ ವರೆಗೆ ಸೇವೆ ವಿಸ್ತರಿಸಬಹುದು. ಆದ್ರೆ 6 ವರ್ಷ ಹುದ್ದೆಯಲ್ಲಿದ್ದವರು ಮುಂದುವರಿಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಅಧಿಕಾರದ ಅವಧಿ ಮುಗಿದಿದೆ

ಸರ್ಕಾರದ ಪ್ರಕಾರ, ರಾಜ್ಯ ಚುನಾವಣಾ ಆಯುಕ್ತ ನಿಮ್ಮಗಡ್ಡ ರಮೇಶ್‌ ಕುಮಾರ್‌ ಅಧಿಕಾರದ ಅವಧಿ ಅರ್ಧಕ್ಕೆ ಮುಗಿದಿದೆ. ಸುಗ್ರೀವಾಜ್ಞೆ, ನೋಟಿಫಿಕೇಷನ್‌ ಪ್ರಕಾರ ಆಯುಕ್ತರ ಅವಧಿ ಮುಗಿದಿದೆ ಎಂದು ಆದೇಶ ನೀಡಿದೆ. ಪಂಚಾಯತ್‌ ರಾಜ್‌ ಚುನಾವಣೆಗೆ ಸಂಬಂಧಿಸಿದ ರಾಜ್ಯದ ಚುನಾವಣಾ ಆಯುಕ್ತರು ನಿರ್ಧಾರಗಳಿಗೂ ಬ್ರೇಕ್‌ ನೀಡಿತ್ತು.

ಸರ್ಕಾರದ ನಿರ್ಧಾರಗಳಿಗೆ ಗರ್ವನರ್‌ ಸ್ಪಂದನೆ

ರಾಜ್ಯ ಚುನಾವಣಾ ಆಯುಕ್ತರ ಸಂಬಂಧ ಸಿಎಂ ಜಗನ್‌ ಅಧ್ಯಕ್ಷತೆಯಲ್ಲಿ ಉತನ್ನ ಮಟ್ಟದ ಸಭೆ ನಡೆಸಲಾಗಿತ್ತು. ಸಿಎಂ ಕಾರ್ಯದರ್ಶಿ ಪ್ರವೀಣ್‌ ಪ್ರಕಾಶ್‌, ರಾಜ್ಯಪಾಲರನ್ನು ಭೇಟಿಯಾಗಿ ಸಭೆಯ ಮಾಹಿತಿಯನ್ನು ವಿವರಿಸಿದ್ದಾರೆ. ಆ ಬಳಿಕ ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ಈ ಎಲ್ಲ ಪ್ರಕ್ರಿಯೆಗಳು ಅತಿ ವೇಗವಾಗಿ ನಡೆದು ಹೋಗಿವೆ. ಬಳಿಕ ಹೊಸ ಚುನಾವಣಾ ಆಯುಕ್ತರನ್ನಾಗಿ ತಮಿಳುನಾಡಿನ ವಿಶ್ರಾಂತ ಹೈಕೋರ್ಟ್‌ ನ್ಯಾಯಮೂರ್ತಿ ಕನಗರಾಜ್‌ ಅವರ ಹೆಸರನ್ನು ಸೂಚಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದೆ. ಕೂಡಲೇ ರಾಜ್ಯಪಾಲರು ಇದಕ್ಕೆ ಸಹಿ ಹಾಕಿದ್ದಾರೆ.

ಕೋರ್ಟ್‌ ಮೊರೆ ಹೋದ ನಿಮ್ಮಗಡ್ಡ

ಎಸ್‌ಇಸಿ ಹುದ್ದೆಯಿಂದ ತಮ್ಮನ್ನು ಕೆಳಗಿಳಿಸಿದ್ದನ್ನು ಪ್ರಶ್ನಿಸಿ ನಿಮ್ಮಗಡ್ಡ ರಮೇಶ್‌ ಕುಮಾರ್‌ ಆಂಧ್ರ ಹೈಕೋರ್ಟ್‌ ಮೆಟ್ಟಿಲೇರಿದ್ದರು. ದುರುದ್ದೇಶದಿಂದ ತಮ್ಮ ಜವಾಬ್ದಾರಿಯನ್ನು ತಪ್ಪಿಸಿದ್ದಾರೆ ಎಂದು ಅರ್ಜಿಯಲ್ಲಿ ದೂರಿದ್ದರು. ನಿಷ್ಪಕ್ಷಪಾತವಾಗಿ ಚುನಾವಣಾ ನಡೆಸಲು ಸುಗ್ರೀವಾಜ್ಞೆ ತಂದಿದ್ದೇವೆ ಎಂಬ ಸರ್ಕಾರದ ವಾದದಲ್ಲಿ ವಾಸ್ತವತೆ ಇಲ್ಲ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಎಸ್ಇಸಿ ಹುದ್ದೆಯ ಅವಧಿಯ ಬಗ್ಗೆ ರಾಜ್ಯ ಸರ್ಕಾರ ಮಾಡಿದ್ದ ಅಫಿಡವಿಟ್‌ಗೆ ಹೈಕೋರ್ಟ್‌ನಲ್ಲಿ ಬಿಜೆಪಿ ನಾಯಕ ಕಾಮಿನೇನಿ ಶ್ರೀನಿವಾಸ್‌ ರಿಪ್ಲೆ ಅಫಿಡವಿಟ್‌ ಸಲ್ಲಿಸಿದ್ದರು. ಎಸ್‌ಇಸಿ ಹುದ್ದೆಯ ಅವಧಿಯನ್ನು ಕಡಿತ ಮಾಡಿರುವ ಸುಗ್ರೀವಾಜ್ಞೆ ರಾಜ್ಯಾಂಗಕ್ಕೆ ವಿರುದ್ಧವಾಗಿದೆ ಎಂದು ಅಫಿಡವಿಟ್‌ನಲ್ಲಿ ಹೇಳಿದ್ದಾರೆ. ಸೇವಾ ನಿಯಮ, ಹುದ್ದೆಯ ಕಾಲಾವಧಿಗೆ ರಾಜ್ಯಾಂಗದ ರಕ್ಷಣೆ ಇರುತ್ತದೆ ಎಂದು ಪ್ರಸ್ತಾಪ ಮಾಡಿದ್ದರು.

ನೂತನ ಎಸ್ಇಸಿ ಜಸ್ಟಿಸ್‌ ವಿ.ಕನಗರಾಜ್‌ ಪರ ಹಿರಿಯ ವಕೀಲ ಎಸ್‌.ಎಸ್‌.ಪ್ರಸಾದ್‌ ವಾದ ಮಂಡಿಸಿದರು. ರಾಜ್ಯ ಚುನಾವಣಾ ಆಯುಕ್ತರ ವಿಷಯದಲ್ಲಿ ಸುಗ್ರೀವಾಜ್ಞೆ ತರುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಕೋರ್ಟ್‌ನಲ್ಲಿ ವಾದ ಮಾಡಿದ್ದಾರೆ. ಸರ್ಕಾರ ತಂದಿದ್ದ ಸುಗ್ರೀವಾಜ್ಞೆ ಕಾನೂನು ನಿಯಮಗಳಿಗೆ ಒಳಪಡುತ್ತದೆ ಎಂದು ವಿವರಿಸಿದ್ರು. ರಾಜ್ಯ ಸರ್ಕಾರದ ನಿರ್ಧಾರವನ್ನು ಸರ್ಕಾರದ ಪರ ವಕೀಲರು ಸಮರ್ಥನೆ ಮಾಡಿಕೊಳ್ಳುವ ಮೂಲಕ ವಾದ ಮಂಡಿಸಿದ್ರು.

ನಿಮ್ಮಗಡ್ಡ ರಮೇಶ್‌ ಕುಮಾರ್‌ ಪರ ಹಿರಿಯ ವಕೀಲ ಡಿವಿ ಸೀತಾರಾಮಮೂರ್ತಿ, ಇತರ ಅರ್ಜಿದಾರರ ಪರ ಹಿರಿಯ ವಕೀಲ ವೆಂಕಟರಮಣ, ಎ.ಸತ್ಯಪ್ರಸಾದ್‌, ಪಿ.ವೀರಾರೆಡ್ಡಿ ಪ್ರತಿವಾದಿಗಳಾಗಿ ವಾದ ಮಂಡಿಸಿದ್ದಾರೆ. ಸುಗ್ರೀವಾಜ್ಞೆಯ ಅತ್ಯವಶ್ಯಕತೆ ಇರಲಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ತನ್ನ ನಿರ್ಧಾರವನ್ನು ಯಾಕೆ ಸಮರ್ಥಿಸಿಕೊಳ್ಳುತ್ತಿದೆ ಎಂದು ಪ್ರಶ್ನಿಸಿದ್ದಾರೆ. ರಮೇಶ್‌ ಕುಮಾರ್‌ ಅವರನ್ನು ಚುನಾವಣಾ ಆಯುಕ್ತ ಹುದ್ದೆಯಿಂದ ಇಳಿಸುವ ಸಲುವಾಗಿಯೇ ಈ ನಿರ್ಧಾರಕ್ಕೆ ಬಂದಿದ್ದಾರೆ. ಸುಗ್ರೀವಾಜ್ಞೆ, ಆನಂತರದ ಆದೇಶಗಳನ್ನೂ ರದ್ದು ಮಾಡಬೇಕು ಎಂದು ಮನವಿ ಮಾಡಿದ್ದರು..

ಸಂಚಲನದ ಆದೇಶ

ವಾದ ಪ್ರತಿವಾದಗಳನ್ನು ಆಲಿಸಿದ್ದ ಹೈಕೋರ್ಟ್‌ ಆದೇಶ ಕಾಯ್ದಿರಿಸಿತ್ತು. ಇಂದು ಅಂತಿಮ ಆದೇಶವನ್ನು ಆಂಧ್ರ ಹೈಕೋರ್ಟ್‌ ನೀಡಿದೆ. ಹೈಕೋರ್ಟ್‌ ಮುಖ್ಯನಾಯಮೂರ್ತಿ ಜೆಕೆ ಮಹೇಶ್ವರಿ, ನ್ಯಾಯಮೂರ್ತಿಗಳಾದ ಸತ್ಯನಾರಾಯಣಮೂರ್ತಿ ನೇತೃತ್ವದ ಪೀಠ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ರದ್ದು ಮಾಡಿದೆ. ನೂತನ ಚುನಾವಣಾ ಆಯುಕ್ತರನ್ನು ನೇಮಕ ಮಾಡಬೇಡಿ ಎಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಆಯುಕ್ತರಾಗಿ ನಿಮ್ಮಗಡ್ಡ ರಮೇಶ್‌ ಕುಮಾರ್‌ ಅವರನ್ನು ಮುಂದುವರಿಸಿ ಎಂದು ಆದೇಶ ನೀಡಿದೆ.

ಮತ್ತೆ ಅಧಿಕಾರಕ್ಕೇರಿದ ರಮೇಶ್‌ ಕುಮಾರ್‌

ಕೋರ್ಟ್‌ ತೀರ್ಪು ನೀಡಿದ ಕೆಲವೇ ಸಮಯದಲ್ಲಿ ರಮೇಶ್‌ ಕುಮಾರ್‌ ಮತ್ತೆ ರಾಜ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದಿನಂತೆಯ ಮಾದರಿಯಾಗಿ, ನಿಷ್ಪಕ್ಷಪಾತವಾಗಿ ತಮ್ಮ ಕೆಲಸವನ್ನು ಮಾಡುವುದಾಗಿ ಹೇಳಿದ್ದಾರೆ. ಆಂಧ್ರ ಹೈಕೋರ್ಟ್‌ ನೀಡಿದ ತೀರ್ಪಿನಿಂದ ನಾವು ಮತ್ತೆ ಅಧಿಕಾರ ವಹಿಸಿಕೊಂಡಿದ್ದೇನೆ ಎಂದು ನಿಮ್ಮಗಡ್ಡ ರಮೇಶ್‌ ಕುಮಾರ್‌ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.