ಭೋಪಾಲ್: ಕೆಲ ದಿನಗಳಿಂದ ಮಧ್ಯ ಪ್ರದೇಶದಲ್ಲಿ ಸೃಷ್ಟಿಯಾಗಿರೋ ರಾಜಕೀಯ ಬಿಕ್ಕಟ್ಟಿಗೆ ಇಂದು ತೆರೆ ಬೀಳು ಸಾಧ್ಯತೆ ಇದೆ. ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ಸಿಎಂ ಕಮಲ್ನಾಥ್ ವಿಶ್ವಾಸ ಮತಯಾಚಿಸಲು ಸಜ್ಜಾಗಿದ್ದಾರೆ.
ನಿನ್ನೆ ಮಧ್ಯ ಪ್ರದೇಶ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಕಮಲ್ನಾಥ್, ರಾಜ್ಯಪಾಲ ಲಾಲ್ಜಿ ಟಂಡನ್ರನ್ನು ಭೋಪಾಲ್ನ ರಾಜಭವನದಲ್ಲಿ ಭೇಟಿಯಾಗಿದ್ದರು. ವಿಧಾನಸಭೆ ಕಲಾಪ ಆರಂಭವಾಗಿದ್ದು, ಕಮಲ್ನಾಥ್ ಅವರು ಈಗ ವಿಶ್ವಾಸಮತ ಯಾಚಿಸಬೇಕಿದೆ.
ಈ ಎಲ್ಲಾ ಬೆಳವಣಿಗೆಯ ನಡುವೆ ಬಹಳ ಎಚ್ಚರಿಕೆಯ ನಡೆ ಇಟ್ಟಿರುವ ಬಿಜೆಪಿ, ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ತನ್ನೆಲ್ಲಾ ಶಾಸಕರಿಗೆ ವಿಪ್ ಜಾರಿಗೊಳಿಸಿದೆ.
ಮಧ್ಯಪ್ರದೇಶ ಕಾಂಗ್ರೆಸ್ನ 22 ಶಾಸಕರು ಬಂಡಾಯವೆದ್ದು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಪಕ್ಷದ ಪ್ರಬಲ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅದಾಗಲೇ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.