ತಿರುಮಲ (ಆಂಧ್ರಪ್ರದೇಶ): ಬಾಲಾಜಿ ದೇಗುಲದಲ್ಲಿ ಬಾಯ್ಲರ್ನಿಂದ ಬಿಸಿನೀರು ಸೋರಿಕೆಯಾಗಿ ಐವರು ಕಾರ್ಮಿಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಮಿಕ ವರದರಾಜುಲು ‘ನಿನ್ನೆ ಮಧ್ಯಾಹ್ನ ನಾವು ಅಡುಗೆ ಮನೆಗೆ ಹೋದಾಗ ಬಾಯ್ಲರ್ನಿಂದ ನೀರು ಸೋರಿಕೆಯಾಗಿದೆ. ಬಿಸಿ ನೀರು ನಮ್ಮ ಬೆನ್ನ ಮೇಲೆ ಬಿದ್ದು ಗಾಯಗಳಾಗಿವೆ, ಅಪಾಯವೇನಿಲ್ಲ ಎಂದಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಟಿಟಿಡಿ, ಇಂದು ಅಡುಗೆ ಮನೆಯಲ್ಲಿ ಬಾಯ್ಲರ್ನಿಂದ ನೀರು ಸೋರಿಕೆಯಾಗಿ ಐವರು ಕೆಲಸಗಾರರಿಗೆ ಗಾಯಗಳಾಗಿವೆ. ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದೆ.