ಶಾಮ್ಲಿ(ಉತ್ತರ ಪ್ರದೇಶ): ಶಾಮ್ಲಿ ಜಿಲ್ಲೆಯ ಕೈರಾನಾದಲ್ಲಿ ಮಕ್ಕಳ ಕಳ್ಳತನದ ಅನುಮಾನದ ಮೇಲೆ ಐದು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಪ್ರಕರಣ ವರದಿಯಾಗಿದೆ.
ಐದು ಮಹಿಳೆಯರು ಹಗ್ಗ ಮಾರಾಟ ಮಾಡಲು ಶಾಮ್ಲಿ ಜಿಲ್ಲೆಯ ಕೈರಾನಾಗೆ ಆಗಮಿಸಿದ್ದ ವೇಳೆ ಸ್ಥಳೀಯರು ಮಕ್ಕಳ ಕಳ್ಳರು ಎಂದು ಭಾವಿಸಿ ಈ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಿಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಪೊಲೀಸರು ಮಹಿಳೆಯರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಮಹಿಳೆಯರು ಇಲ್ಲಿ ಹಗ್ಗ ಮಾರಾಟ ಮಾಡುತ್ತಿದ್ದ ವೇಳೆ ಸ್ಥಳೀಯರು ಈ ಮಹಿಳೆಯರನ್ನು ಮಕ್ಕಳ ಕಳ್ಳರ ಗುಂಪು ಎಂದು ಭಾವಿಸಿ ಸುತ್ತಮುತ್ತಲಿನ ಜನರಿಗೆ ಸುದ್ದಿ ರವಾನಿಸಿದ್ದಾರೆ.
ತಕ್ಷಣ ಅಲರ್ಟ್ ಆದ ಸ್ಥಳೀಯರು ಹಗ್ಗ ಮಾರಾಟ ಮಾಡುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿದೆ. ಹಲ್ಲೆಗೊಳಗಾಗದ ಮಹಿಳೆಯರನ್ನು ಠಾಣೆಗೆ ಕರೆದೊಯ್ದರೂ ಸ್ಥಳೀಯರ ಕೋಪ ಕಡಿಮೆಯಾಗಿರಲಿಲ್ಲ. ನಂತರ ಪೊಲೀಸರು ಸಣ್ಣ ಪ್ರಮಾಣದಲ್ಲಿ ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಬೇಕಾಯಿತು.