ಲೋಗರ್(ಅಫ್ಘಾನಿಸ್ತಾನ್): ಅಫ್ಘಾನಿಸ್ತಾನದ ಬರಾಕ್-ಎ-ಬರಾಕ್ ಜಿಲ್ಲೆಯ ಶೇನಾ ಖಾಲಾ ಗ್ರಾಮದಲ್ಲಿ ಐದು ತಾಲಿಬಾನ್ ಉಗ್ರರನ್ನು ಅಫ್ಘಾನ್ ಪೊಲೀಸರು ಹತ್ಯೆ ಮಾಡಿದ್ದಾರೆ.
ಮಧ್ಯೆ ಲೋಗರ್ನ ಈ ಗ್ರಾಮದಲ್ಲಿ ಅಫ್ಘಾನ್ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದ್ದು, ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಅದಲ್ಲದೇ ಈ ಕಾರ್ಯಚರಣೆಯಲ್ಲಿ ಉಗ್ರರ ಬಳಿ ಇದ್ದ ಕೆಲವು ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ತಾಲಿಬಾನ್ ಸಂಘಟನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಕಾರ್ಯಾಚರಣೆ ನಂತರ ಜಘಾಟು ಜಿಲ್ಲೆಯ ಘಜನಿ ಪ್ರಾಂತ್ಯದಲ್ಲಿ ಅಡಗಿಸಿ ಇಡಲಾಗಿದ್ದ ಎರಡು ಸ್ಫೋಟಕ ವಸ್ತುಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದು, ಸುರಕ್ಷಿತ ಸ್ಥಳದಲ್ಲಿ ಸ್ಫೋಟಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.