ಜಮ್ಶೆಡ್ಪುರ: ಜಾರ್ಖಂಡ್‌ನ ಜಮ್ಶೆಡ್ಪುರದಲ್ಲಿ 17 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿ ಬಾಗ್‌ಬೆರಾ ಪ್ರದೇಶದಲ್ಲಿ ಬಾಲಕಿ ತನ್ನ ಗೆಳೆಯನೊಂದಿಗೆ ಹೊರಗೆ ಬಂದಿದ್ದಾಗ ಸ್ಥಳಕ್ಕೆ ಬಂದ ಆರೋಪಿಗಳು ಆಕೆಯನ್ನು ಬಲವಂತವಾಗಿ ಗಡಿಯಾ ಪಾಯಿಂಟ್‌ನಲ್ಲಿರುವ ಕಲಿಯಾಡಿ ಗೋಶಾಲೆಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. ಈ ವೇಳೆ ವೇಳೆ ಆಕೆಯ ಗೆಳೆಯನನ್ನು ಕಟ್ಟಿ ಹಾಕಿ ಕೃತ್ಯವೆಸಗಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ತಮಿಳು ವನನ್ ತಿಳಿಸಿದ್ದಾರೆ.
ಬಂಧನಕ್ಕೊಳಗಾದವರಲ್ಲಿ ಅಪ್ರಾಪ್ತ ವಯಸ್ಕನಾದ ಒಬ್ಬನನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಇತರ ನಾಲ್ಕು ಅರೋಪಿಗಳಾದ ಶಂಕರ್ ಟಿಯು, ರೋಶನ್ ಕುಜೂರ್, ಸೂರಜ್ ಪತ್ರೋ ಮತ್ತು ಸನ್ನಿ ಸೊರೆನ್ ರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಬಂಧಿತರಿಂದ ದೇಶೀಯ ನಿರ್ಮಿತ ಪಿಸ್ತೂಲ್ ಮತ್ತು ಎರಡು ಲೈವ್ ಕಾರ್ಟ್ರಿಜ್ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.