ಮುಂಬೈ: ಸರ್ಕಾರಿ ನೌಕರರಿಗೆ ಮಹಾರಾಷ್ಟ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ವಾರದಲ್ಲಿ ಐದು ದಿನಗಳು ಮಾತ್ರ ಕೆಲಸ ಮಾಡುವ ನಿಯಮಕ್ಕೆ ಮಹಾ ಸರ್ಕಾರ ಒಪ್ಪಿಗೆ ನೀಡಿದೆ.
ಹೌದು, ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ವಾರದಲ್ಲಿ ಐದು ದಿನಗಳು ಮಾತ್ರ ಕೆಲಸ ಮಾಡಲಿದ್ದಾರೆ. ಉಳಿದ ಎರಡು ದಿನಗಳು ಅವರಿಗೆ ರಜೆ ನೀಡಲಾಗಿದೆ. ಈ ಹೊಸ ಇದೇ ಫೆ.29ರಿಂದ ಜಾರಿಯಾಗಲಿದೆ ಎಂದು ಮಹಾ ಸರ್ಕಾರ ಬುಧವಾರ ತಿಳಿಸಿದೆ.
ಬುಧವಾರ ಸಿಎಂ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಇನ್ನು ಮಹಾರಾಷ್ಟ್ರದಲ್ಲಿ ಸರ್ಕಾರ, ಅರೆ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಸೇರಿದಂತೆ ಒಟ್ಟು 20 ಲಕ್ಷಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದಾರೆ.
ರಾಜ್ಯ ಇಲಾಖೆಗಳಾದ ಒಬಿಸಿಗಳು, ಎಸ್‌ಇಬಿಸಿಗಳು (ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು), ವಿಜೆಎನ್‌ಟಿಗಳು (ವಿಮುಕ್ತ ಜಾತಿ ಮತ್ತು ಅಲೆಮಾರಿ ಬುಡಕಟ್ಟು) ಮತ್ತು ವಿಶೇಷ ಹಿಂದುಳಿದವರು ತರಗತಿಗಳನ್ನು ಈಗ 'ಬಹುಜನ ಕಲ್ಯಾಣ್ ಇಲಾಖೆ' ಎಂದು ಕರೆಯಲಾಗುತ್ತದೆ ಅಂತಾ ಸಂಪುಟ ಸಭೆಯಲ್ಲಿ ನಿರ್ಧರಿಸಿದೆ.