ನವದೆಹಲಿ: ಸಿನಿಮಾದಿಂದ ರಾಜಕೀಯ ಅಖಾಡಕ್ಕೆ ಧುಮುಕಿ ಚೊಚ್ಚಲ ಬಾರಿಗೆ ಸಂಸತ್ ಪ್ರವೇಶಿಸಿರುವ ಸಂಸದೆ ನುಸ್ರತ್ ಜಹಾನ್ ಟರ್ಕಿಯಲ್ಲಿ ಉದ್ಯಮಿ ನಿಖಿಲ್ ಜೈನ್ ಎಂಬವರನ್ನು ವರಿಸಿದ್ದಾರೆ.
ಬುಧವಾರ ಟರ್ಕಿಯ ಬೋಡ್ರಮ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ 29 ವರ್ಷದ ನಟಿ ಹಾಗೂ ನೂತನ ಸಂಸದೆ ನುಸ್ರತ್ ಜಹಾನ್ ಉದ್ಯಮಿ ನಿಖಿಲ್ ಜೈನ್ರನ್ನು ಮದುವೆಯಾಗಿದ್ದು, ಎರಡೂ ಮನೆಯ ಕುಟುಂಬಸ್ಥರು ಹಾಗೂ ಆಪ್ತರು ಭಾಗಿಯಾಗಿದ್ದರು.
-
Towards a happily ever after with Nikhil Jain ❤️ pic.twitter.com/yqo8xHqohj
— Nusrat (@nusratchirps) June 19, 2019 " class="align-text-top noRightClick twitterSection" data="
">Towards a happily ever after with Nikhil Jain ❤️ pic.twitter.com/yqo8xHqohj
— Nusrat (@nusratchirps) June 19, 2019Towards a happily ever after with Nikhil Jain ❤️ pic.twitter.com/yqo8xHqohj
— Nusrat (@nusratchirps) June 19, 2019
ಟ್ವೀಟ್ ಮೂಲಕ ಸಂಸದೆ ತಮ್ಮ ಮದುವೆಯ ವಿಚಾರವನ್ನು ತಿಳಿಸಿದ್ದಾರೆ. ತೃಣಮೂಲ ಕಾಂಗ್ರೆಸ್ನಿಂದ ಬಸಿರ್ಹತ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ನುಸ್ರತ್ 3.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.
ಖ್ಯಾತ ವಸ್ತ್ರ ವಿನ್ಯಾಸಗಾರ ಸಭ್ಯಸಾಚಿ ವಿನ್ಯಾಸ ಮಾಡಿದ್ದ ಕೆಂಪು ಲೆಹಂಗಾ ಧರಿಸಿ ನುಸ್ರತ್ ಮಿಂಚಿದರು.
ತಮ್ಮ ಮದುವೆ ಕಾರಣದಿಂದ ನುಸ್ರತ್ ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿಲ್ಲ.