ETV Bharat / bharat

ವಿಶ್ವದ 10 ಬಿಲೇನಿಯರ್​ಗಳು... ಇವರ ಮೊದಲ ಕೆಲಸ ಏನ್​ ಗೊತ್ತಾ? - undefined

ವಿಶ್ವದ ಬಿಲೇನಿಯರ್​ ಸಾಧಕರಾದ ಅಮೇಜಾನ್​ ಸಿಇಒ ಜೆಫ್​ ಬೆಜೊನ್ಸ್ ಕೂಡ ಅರಂಭಿಕ ದಿನಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿದಿದ್ದರು. ಇಂತಹ 10 ಬಿಲೇನಿಯರ್​ಗಳ ಮಾಹಿತಿ ಇಲ್ಲಿದೆ.

ಬಿಲೇನಿಯರ್
author img

By

Published : Jul 21, 2019, 3:19 PM IST

ಹೈದ್ರಾಬಾದ್​: ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕೆಂದರೆ ಆರಂಭಿಕ ಮೆಟ್ಟಿಲುಗಳೇ ಮುಂದೆ ಭದ್ರ ಬುನಾದಿಯಾಗುತ್ತವೆ. ಅಂತೆಯೇ ವೃತ್ತಿಯ ಆರಂಭದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು, ದೊಡ್ಡ ಕಂಪನಿಗಳನ್ನ ಸ್ಥಾಪಿಸಿ ಬಿಲೇನಿಯರ್​ಗಳಾದ ಅನೇಕ ಸಾಧಕರ ಮಾಹಿತಿ ಹೀಗಿದೆ ನೋಡಿ...

ಅಂತಹ ಬಿಲೇನಿಯರ್​ ಸಾಧಕರಾದ ಅಮೇಜಾನ್​ ಸಿಇಒ ಜೆಫ್​ ಬೆಜೊನ್ಸ್ ಕೂಡ ಅರಂಭಿಕ ದಿನಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿದಿದ್ದರು. ಇಂತಹ ಬಿಲೇನಿಯರ್​ಗಳಲ್ಲಿ ಕೆಲವರ ಮಾಹಿತಿ ಇಲ್ಲಿದೆ. ವಿಶ್ವದ ಶ್ರೀಮಂತ ವ್ಯಕ್ತಿಯಾಗಿರುವ ಜೆಫ್​ ಬೆಜೊನ್ಸ್ ಮೆಕ್​ಡೋನಾಲ್ಡ್ಸ್​ನಲ್ಲಿ ಗಂಟೆಗೆ ಕೇವಲ 2.69 ಡಾಲರ್​ಗೆ ಕೆಲಸ ಮಾಡಿದ್ದರು. ಇವರು ಮೆಕ್​ಡೋನಾಲ್ಡ್ಸ್​ನ ಫಾಸ್ಟ್​​ ಫುಡ್​ ತಯಾರಿಸುವ ಕೆಲಸದಲ್ಲಿದ್ದರು. ಹಾಗೆಯೇ ಮತ್ತೋರ್ವ ಬಿಲೇನಿಯರ್​ ಮೈಕಲ್​ ಡೆಲ್ ಕೂಡ ತಮ್ಮ 12ನೇ ವಯಸ್ಸಿನಲ್ಲಿ​ ಚೈನಿಸ್​​ ರೆಸ್ಟೋರೆಂಟ್​ನಲ್ಲಿ ಡಿಶ್​ ವಾಶರ್ ಕೆಲಸ ಮಾಡಿದ್ದರು. ಇಂದು ಪ್ರಖ್ಯಾತ ಡೆಲ್​ ಕಂಪನಿ ಸಂಸ್ಥಾಪಿಸಿ, ಸಿಇಒ ಆಗಿದ್ದಾರೆ.

ವರ್ಜಿನ್​ ಗ್ರೂಪ್​ನ ರಿಚರ್ಡ್​ ಬ್ರಾನ್ಸನ್​ ಕೂಡ ತಮ್ಮ ಸಾಧನೆಗೆ ಅಡಿಯಿಟ್ಟಿದ್ದು ಕೇವಲ 16ನೇ ವಯಸ್ಸಿನಲ್ಲಿ. 1966ರಲ್ಲಿ ಸ್ಟೂಡೆಂಟ್​​​ ಮ್ಯಾಗಜಿನ್​ ಮೂಲಕ ಆರಂಭವಾದ ಇವರ ವೃತ್ತಿ ಜೀವನ ಇಂದು ಬಿಲೇನಿಯರ್​ ಆಗುವ ಮಟ್ಟಕ್ಕೆ ತಲುಪಿದೆ. ಇವರು ಕೇವಲ 100 ಪೌಂಡ್​ಗಳಿಂದ ಮ್ಯಾಗಜಿನ್​ ಶುರು ಮಾಡಿದ್ದರು.

ಇನ್ನು ಸ್ನ್ಯಾಪ್​ಚಾಟ್​ ಮೆಸ್ಸೇಜಿಂಗ್​ ಆ್ಯಪ್​ ಯಾರಿಗೆ ಗೊತ್ತಿಲ್ಲಾ ಹೇಳಿ. ಜಗತ್ತಿನಾದ್ಯಂತ ಕೋಟ್ಯಂತರ ಜನ ಉಪಯೋಗಿಸುವ ಈ ಆ್ಯಪ್ ಆರಂಭಿಸಿದ್ದು ಅಮೆರಿಕದ ಇವಾನ್ ಸ್ಪೀಗೆಲ್, ಇವರೂ ಕೂಡ ಆರಂಭದಲ್ಲಿ ಪಾನೀಯ ಬ್ರಾಂಡ್ ರೆಡ್ ಬುಲ್​ನಿಂದ ತಿರಸ್ಕರಿಸಲ್ಪಟ್ಟಿದ್ದರು.

ಇನ್ನು ಇಂದಿನ ದಿನಗಳಲ್ಲಿ ಪ್ರಯಾಣಿಕರ ಸ್ನೇಹಿಯಾಗಿರುವ ಉಬರ್ ಆ್ಯಪ್​ ಆಂಭಿಸಿದವರು ಅಮೆರಿಕನ್​ ಬಿಲೇನಿಯರ್​ ಟ್ರಾವಿಸ್​ ಕಲನಿಕ್​. ಇವರೂ ಸೇಲ್ಸ್​ಮನ್​ ಆಗಿ ಕೆಲಸ ಮಾಡಿದ್ದರು.

ಹಾಗೆಯೇ ಟೆಲ್ಸಾ ಸೋಲ್ಡ್​ ವಿಡಿಯೋ ಗೇಮ್​ ಆರಂಭಿಸಿದ ಎಲೊನ್​ ಮಸ್ಕ್​​ ಇಂದು ಬಿಲೇನಿಯರ್​ ಆಗಿದ್ದಾರೆ. ಕೇವಲ 12ನೇ ವಯಸ್ಸಿನಲ್ಲಿ ಗೇಮ್​ ಆರಂಭಿಸಿದ ಟೆಲ್ಸಾ ಮೊದ ಮೊದಲು ಸಾಕಷ್ಟು ಟೀಕೆ ಎದುರಿಸಿದ್ದರು.

ಇಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್​ ಸಿಇಒ ಆಗಿರುವ ಜಾಕ್​ ಡೊರ್ಸೆ ಮೇಲೆ ಕಂಪನಿಯೊಂದರ ಸರ್ವರ್​ ಹ್ಯಾಕ್​ ಮಾಡಿದ ಆರೋಪ ಕೇಳಿಬಂದಿತ್ತು. ಸಾಫ್ಟ್​ವೇರ್ ಡೆವಲಪ್​ ವೃತ್ತಿಯಲ್ಲಿದ್ದ ಜಾಕ್​ ಈಗ ಟ್ವಿಟ್ಟರ್ ಸಿಇಒ ಹುದ್ದೆಗೇರಿದ್ದಾರೆ.

ಇನ್ನು ​ಒರಾಕಲ್‌ನ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್​ ಕೂಡ ಮೊದಲು ಕಂಪ್ಯೂಟರ್​ ಪ್ರೋಗ್ರಾಮರ್ ಆಗಿದ್ದರು.

ಇನ್‌ಸ್ಟಾಗ್ರಾಮ್ ಆರಂಭಿಸುವುದು ಮತ್ತು ತಂತ್ರಜ್ಞಾನದ ಜಗತ್ತಿನಲ್ಲಿ ಪ್ರವೇಶಿಸುವ ಮುನ್ನ ಕೆವಿನ್​ ಸಿಸ್ಟ್ರೋಮ್​ ಕೂಡ ಕ್ಲರ್ಕ್ ಆಗಿದ್ದವರು. ಇಂದು ಇನ್‌ಸ್ಟಾಗ್ರಾಮ್‌ನ ಸಹ-ಸಂಸ್ಥಾಪಕರಲ್ಲದೆ ಬಿಲೇನಿಯರ್​ ಆಗಿದ್ದಾರೆ.

ಹಾಗೆಯೇ ಗೂಗಲ್‌ ಸಿಇಒ ಆಗಿ ಕಾರ್ಯನಿರ್ವಹಿಸಿರುವ ಅಮೆರಿಕದ ಬಿಲೇನಿಯರ್​ ಎರಿಕ್ ಸ್ಮಿತ್ ಕೂಡ ಚಿಪ್​ ತಯಾರಿಕಾ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸಿದ್ದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.