ನವದೆಹಲಿ: ದೇಶಾದ್ಯಂತ ಭೀತಿ ಹುಟ್ಟಿಸಿರುವ ಮಹಾಮಾರಿ ಕೊರೊನಾ ಇದೀಗ ಭಾರತೀಯ ಸೇನೆಯಲ್ಲೂ ಕಾಣಿಸಿಕೊಂಡಿದ್ದು, ಓರ್ವ ಯೋಧನಲ್ಲಿ ಕೋವಿಡ್-19 ಇರುವುದು ಕನ್ಫರ್ಮ್ ಆಗಿದೆ.
ಲಡಾಕ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಲ್ಯಾನ್ಸ್ ನಾಯಕ ಕಳೆದ ಕೆಲ ದಿನಗಳ ಹಿಂದೆ ತಮ್ಮ ಮನೆಗೆ ತೆರಳಿದ್ದರು. ಈ ವೇಳೆ ಅವರ ತಂದೆ ಜತೆ ಇರಾನ್ ತೆರಳಿ ವಾಪಸ್ ಆಗಿದ್ದರು. ಫೆ.27ರಂದು ಭಾರತಕ್ಕೆ ಇವರು ವಾಪಸ್ ಆಗಿದ್ದು, ಸೈನಿಕನ ತಂದೆಯಲ್ಲಿ ಕೋವಿಡ್ ಕಾಣಿಸಿಕೊಂಡಿತ್ತು.
ಇದಾದ ಬಳಿಕ ಲ್ಯಾನ್ಸ್ ನಾಯಕ ಮಾರ್ಚ್ 2ರಂದು ಭಾರತೀಯ ಸೇನೆಗೆ ದಾಖಲಾಗಿದ್ದರು. ಇವರ ತಂದೆಯಲ್ಲಿ ಕೊರೊನಾ ಕಾಣಿಸಿಕೊಂಡಿದ್ದು ಕನ್ಫರ್ಮ್ ಆಗುತ್ತಿದ್ದಂತೆ ಯೋಧನಿಗೂ ತಪಾಸಣೆ ಮಾಡಿಸಲಾಗಿದ್ದು, ಅವರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿರುವ ಕಾರಣ ಎಸ್ಎನ್ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.