ETV Bharat / bharat

ಆಟೋ ರಿಕ್ಷಾದಲ್ಲೇ ರೆಡಿ ಆಯ್ತು ಕೊರೊನಾ ಸ್ಯಾಂಪಲ್​ ಪರೀಕ್ಷಾ ಘಟಕ - ಈಶಾನ್ಯ ಭಾರತ

ಈಶಾನ್ಯ ಭಾರತದಲ್ಲೇ ಮೊಟ್ಟ ಮೊದಲ ಮೊಬೈಲ್​​ ಕೊರೊನಾ ಸ್ಯಾಂಪಲ್​ ಪರೀಕ್ಷಾ ಘಟಕ ಆರಂಭವಾಗಿದೆ. ಅಗರ್ತಲಾದಲ್ಲಿ ಹಳೆಯ ಆಟೋ ರಿಕ್ಷಾವನ್ನು ಕೊರೊನಾ ಸ್ಯಾಂಪಲ್​ ಪರೀಕ್ಷೆಯ ಘಟಕವಾಗಿ ಪರಿವರ್ತಿಸಲಾಗಿದೆ. ವಿಶೇಷ ಎಂದರೆ ಈ ಮೊಬೈಲ್ ಘಟಕ ರಚನೆಗೆ ಕೇವಲ 85 ಸಾವಿರ ರೂ. ಹಣ ವ್ಯಯವಾಗಿದೆ.

First in NE India, mobile kiosk to collect COVID-19 sample
ತ್ರಿಪುರದಲ್ಲಿ ಆಟೋ ರಿಕ್ಷಾದಿಂದ ತಯಾರಾದ ಕೊರೊನಾ ಸ್ಯಾಂಪಲ್​ ಪರೀಕ್ಷಾ ಘಟಕ
author img

By

Published : Apr 29, 2020, 10:48 PM IST

ಅಗರ್ತಲಾ (ತ್ರಿಪುರ): ದೇಶಾದ್ಯಂತ ಕೊರೊನಾ ಭೀತಿ ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ಕೊರೊನಾ ತಡೆಗೆ ಇನ್ನಿಲ್ಲದ ಕ್ರಮ ಕೈಗೊಳ್ಳುತ್ತಿವೆ. ಈ ನಡುವೆ ತ್ರಿಪುರದ ಅಗರ್ತಲಾದಲ್ಲಿ ಮೊಬೈಲ್​ ಕೊರೊನಾ ಟೆಸ್ಟಿಂಗ್ ಕಿಯೋಸ್ಕ್​ ಆರಂಭಿಸಲಾಗಿದೆ. ಅಗರ್ತಲಾದ ಸ್ಮಾರ್ಟ್ ಸಿಟಿ ಯೋಜನೆಯಡಿ ಕೊರೊನಾ ಪರೀಕ್ಷೆಗಾಗಿ ಸಂಚಾರಿ ಫೋನ್​ಬೂತ್ ಮಾದರಿಯ ವ್ಯವಸ್ಥೆ ಆರಂಭಿಸಲಾಗಿದೆ.

ಈ ವಿನ್ಯಾಸ ಯಶಸ್ವಿಯಾದರೆ, ಇನ್ನಷ್ಟು ಕಡೆ ಅಭಿವೃದ್ಧಿ ಪಡಿಸಲಾಗುವುದು ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಚಾರಿ ಪರೀಕ್ಷಾ ಘಟಕವು ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿ ಮೊದಲ ಬಾರಿಗೆ ಆರಂಭಿಸಲಾಗಿದ್ದು, ಈಗಾಗಲೇ ಜನರ ಗಂಟಲು ಮಾದರಿಯನ್ನು ಸಂಗ್ರಹಿಸಲು ಆರಂಭಿಸಿದೆ.

ಈ ಕುರಿತು ಮಾತನಾಡಿರುವ ತ್ರಿಪುರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್​ ಕುಮಾರ್, ಈ ಮೊಬೈಲ್​ ಪರೀಕ್ಷಾ ಘಟಕದಿಂದಾಗಿ ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗುಲುವ ಭೀತಿ ಇರುವುದಿಲ್ಲ. ಅಲ್ಲದೆ ಪಿಪಿಇ ಕಿಟ್​​ಗಳ ವೇಸ್ಟ್​ಗಳನ್ನು ಈ ವ್ಯವಸ್ಥೆ ಬಳಕೆಯಿಂದ ಕಡಿಮೆ ಮಾಡಬಹುದು ಎಂದಿದ್ದಾರೆ. ಈಗಾಗಲೇ ಆರಂಭಿಸಿರುವ ಯೋಜನೆಯು ಯಶಸ್ವಿಗಳಿಸಿದರೆ ಇನ್ನಷ್ಟು ಘಟಕ ತೆರೆಯುವ ಯೋಜನೆ ಇದೆ ಎಂದಿದ್ದಾರೆ.

ವಿಶೇಷ ಎಂದರೆ ಈ ಪರೀಕ್ಷಾ ಘಟಕವನ್ನು ಹಳೆಯ ಮೂರು ಚಕ್ರದ ಆಟೋ ಬಳಿಸಿ ತಯಾರಿಸಲಾಗಿದೆ. ಈ ಮೊಬೈಲ್ ಘಟಕ ರಚನೆಗೆ ಕೇವಲ 85 ಸಾವಿರ ಹಣ ವ್ಯಯವಾಗಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.