ನವದೆಹಲಿ: ಛತಾರ್ಪುರದ ರಾಧಾ ಸೋಮಿಯಲ್ಲಿರುವ ಸರ್ದಾರ್ ಪಟೇಲ್ ಕೋವಿಡ್ ಕೇರ್ ಸೆಂಟರ್ನಿಂದ ವ್ಯಕ್ತಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇವರು ಕೇರ್ ಸೆಂಟರ್ನಿಂದ ಬಿಡುಗಡೆ ಹೊಂದಿದ ಮೊದಲ ವ್ಯಕ್ತಿ ಎಂಬುದು ಗಮನಾರ್ಹ.
ಈ ಕುರಿತು ಟ್ವೀಟ್ ಮಾಡಿರುವ ಐಟಿಬಿಪಿ, "ನವದೆಹಲಿಯ ಸರ್ದಾರ್ ಪಟೇಲ್ ಆಸ್ಪತ್ರೆಯಿಂದ ಓರ್ವ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವರಿಗೆ ಐಜಿ ಮತ್ತು ತಂಡದವರು ಗುಲಾಬಿ ನೀಡಿ ಸ್ವಾಗತಿಸಿದ್ದಾರೆ" ಎಂದು ಹೇಳಿದೆ.
ಸದ್ಯ ಇಲ್ಲಿವರೆಗೆ 147 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಶ್ವದ ಅತಿದೊಡ್ಡ ಆಸ್ಪತ್ರೆ ಇದಾಗಿದ್ದು, 10,000 ಬೆಡ್ ವ್ಯವಸ್ಥೆಯನ್ನು ಒಳಗೊಂಡಿದೆ. ಇದನ್ನು ಕೊರೊನಾ ಪೀಡಿತರ ಚಿಕಿತ್ಸೆಗೆ ಎಂದು ಕಾರ್ಯರೂಪಕ್ಕೆ ತಂದಿದೆ. ಸಂಕೀರ್ಣದ ಒಳಗೆ 1700 *700 ಚದರ ಅಡಿ ವಿಸ್ತೀರ್ಣದ ದೊಡ್ಡ ಪ್ರಾಂಗಣವಿದೆ.
ಇದನ್ನು ಜುಲೈ 6ರಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಉದ್ಘಾಟಿಸಿದ್ದರು. ಇದಕ್ಕೂ ಮೊದಲು ಜೂನ್ 27 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.