ETV Bharat / bharat

ಮಾಜಿ ಸಿಎಂ ಕಲ್ಯಾಣ್​ ಸಿಂಗ್​ಗೆ ಬೆದರಿಕೆ ವಿಡಿಯೋ: ಯುವಕನ ವಿರುದ್ಧ ಎಫ್​​ಐಆರ್​

author img

By

Published : May 6, 2020, 5:13 PM IST

ವಾಟ್ಸ್​ಆ್ಯ ಪ್​ ಮೂಲಕ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್​ ಸಿಂಗ್ ಅವರಿಗೆ ಬೆದರಿಕೆ ಹಾಕಿರುವ ಆರೋಪದಡಿ ಅಪರಿಚಿತ ಯುವಕನ ವಿರುದ್ಧ ಸೈಬರ್ ಕ್ರೈಮ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಟ್ಸ್ಆ್ಯಪ್​​ನಲ್ಲಿ ಯುವಕ ಅವಹೇಳನಕಾರಿಯಾಗಿ ಮಾತನಾಡಿದಲ್ಲದೇ ಬೆದರಿಕೆ ಹಾಕಿದ್ದಾನೆ ಅಂತ ದೂರಿನಲ್ಲಿ ತಿಳಿಸಲಾಗಿದೆ.

FIR registered against unidentified youth for threatening Kalyan Singh
ಯುಪಿ ಮಾಜಿ ಸಿಎಂ ಕಲ್ಯಾಣ್​ ಸಿಂಗ್​ಗೆ ಬೆದರಿಕೆ ವಿಡಿಯೋ: ಯುವಕನ ವಿರುದ್ಧ ಎಫ್​​ಐಆರ್​

ಅಲಿಘರ್​ (ಉತ್ತರ ಪ್ರದೇಶ): ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ರಾಜಸ್ಥಾನ ಮಾಜಿ ರಾಜ್ಯಪಾಲ ಕಲ್ಯಾಣ್​​​ ಸಿಂಗ್ ವಿರುದ್ಧ ಅವಹೇಳನಕಾರಿ ವಿಡಿಯೋ ಹರಿಬಿಟ್ಟ ಹಿನ್ನೆಲೆ ಅಪರಿಚಿತ ಯುವಕನ ವಿರುದ್ಧ ಎಫ್​​ಐಆರ್ ದಾಖಲಾಗಿದೆ. ಇದೀಗ ಸೈಬರ್ ಕ್ರೈಮ್ ಅಪರಾಧ ವಿಭಾಗದಲ್ಲಿ ಈ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನೆಲೆ ಬಿಜೆಪಿ ಶಾಸಕ ರವೇಂದ್ರ ಪಾಲ್​​ ಸಿಂಗ್​ ಇಲ್ಲಿನ ಎಸ್​ಎಸ್​​​​ಪಿಗೆ ದೂರು ನೀಡಿದ್ದರು. ಅಲ್ಲದೆ ವಾಟ್ಸ್​ಆ್ಯಪ್​​ನಲ್ಲಿ ಹರಿದಾಡುತ್ತಿರುವ ವಿಡಿಯೋ ಕ್ಲಿಪ್ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಇಲ್ಲಿ ಯುವಕನೊಬ್ಬ ಕಲ್ಯಾಣ್ ಸಿಂಗ್​​ಗೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದರು ಎಂದು ಸಿವಿಲ್​ ಲೈನ್ಸ್ ಠಾಣೆಯ ಸ್ಟೇಷನ್ ಹೌಸ್​ ಅಧಿಕಾರಿ ಅಮಿತ್​ ಕುಮಾರ್ ಮಾಹಿತಿ ನೀಡಿದ್ದಾರೆ.

ಇನ್ನು ಅಖಿಲ ಭಾರತ ಲೋಧಿ ಮಹಾಸಭಾ ಅಧ್ಯಕ್ಷರು ಕೂಡ ಎಸ್​ಎಸ್​​ಪಿಗೆ ಪತ್ರ ಬರೆದಿದ್ದು, ಅಪರಿಚಿತ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಅಮಿತ್​ ಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.