ETV Bharat / bharat

ವಿಶೇಷ ಅಂಕಣ.. ಕೊರೊನಾ ವಿರುದ್ಧ ಹೋರಾಟದಲ್ಲಿ ನಾಗರಿಕರಾಗಿ ನಮ್ಮ ಜವಾಬ್ದಾರಿ ಏನು? - ಕೊರೊನಾ ವಿರುದ್ಧ ಹೋರಾಟ

ಕೆಲವು ವಿನಾಯಿತಿಗಳೊಂದಿಗೆ ಭಾರತದ ಷರತ್ತುಬದ್ಧ ಲಾಕ್‌ಡೌನ್‌ನ ಸಡಿಲಿಕೆಯು ಪ್ರತಿಯೊಬ್ಬರೂ ತಮ್ಮನ್ನು ನಾಗರಿಕ ಜವಾಬ್ದಾರಿಯ ಪ್ರಜ್ಞೆಯೊಂದಿಗೆ ಸ್ವಯಂ ಪ್ರೇರಣೆಯಿಂದ ರಕ್ಷಿಸಿಕೊಳ್ಳಬೇಕು ಎಂಬ ಸರ್ಕಾರದ ಪ್ರಾಮಾಣಿಕ ಆಶಯವನ್ನು ಪ್ರತಿಬಿಂಬಿಸುತ್ತದೆ.

Corona
ಕೊರೊನಾ
author img

By

Published : May 6, 2020, 2:21 PM IST

ಕೊರೊನಾ ಸೋಂಕಿನ ವಿರುದ್ಧ ವಿಜಯದ ಪತಾಕೆ ಹಾರಿಸಲು ಅಥವಾ ಸಾಂಕ್ರಾಮಿಕ ರೋಗದ ವಿರುದ್ಧ ಉಗ್ರ ಹೋರಾಟ ನಡೆಸಲು ಮೇ ತಿಂಗಳು ನಮ್ಮ ಪಾಲಿಕೆ ಅತ್ಯಂತ ಸಂಕೀರ್ಣವಾದ ತಿಂಗಳಾಗಿದೆ ಎಂದು ವೈದ್ಯಕೀಯ ತಜ್ಞರು ಊಹಿಸುತ್ತಿದ್ದಾರೆ. ನೀತಿ ಆಯೋಗದ ಅಂಕಿ ಅಂಶಗಳ ಪ್ರಕಾರ, ಲಾಕ್‌ಡೌನ್‌ ತೆಗೆಯಲಾಗಿದೆ ಮತ್ತು ಮೇ15ರ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ 65 ಸಾವಿರ ಮತ್ತು ಅಗಸ್ಟ್ 15ರ ವೇಳೆಗೆ 2.7 ಕೋಟಿ ತಲುಪಬಹುದು. ಸಾಂಕ್ರಾಮಿಕ ರೋಗದಿಂದ ಜನರ ಜೀವನ ಮತ್ತು ಆರ್ಥಿಕತೆಗೆ ಆಗುತ್ತಿರುವ ಹಾನಿಯನ್ನು ಪರಿಗಣಿಸಿ, ಕೇಂದ್ರ ಸರ್ಕಾರವು ಕೋವಿಡ್-19 ದಾಳಿಯನ್ನು ತಡೆಯಲು ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿತು.

ಮೊದಲನೆಯದು ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಮತ್ತೆರೆಡು ವಾರಗಳವರೆಗೆ ವಿಸ್ತರಿಸುವುದು ಮತ್ತು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಿಗೆ ವಿವರವಾದ ಮಾರ್ಗಸೂಚಿಗಳನ್ನು ನೀಡುವುದು. ಎರಡನೆಯದು ವಿಶ್ರಾಂತಿಯಿಲ್ಲದ, ಸೂಕ್ತ ವ್ಯವಸ್ಥೆ ಹೊಂದಿರದ ವಲಸೆ ಕಾರ್ಮಿಕರನ್ನು ತಮ್ಮ ಸ್ಥಳಗಳಿಗೆ ವಾಪಸ್‌ ಕಳುಹಿಸುವ ಬೇಡಿಕೆಯನ್ನು ಪರಿಗಣಿಸಿ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡುವುದು. ಪ್ರಕರಣಗಳ ಸಂಖ್ಯೆ ಹೆಚ್ಚಿರುವ ವಲಯಗಳನ್ನು ಹೊರತುಪಡಿಸಿ, ಕೆಲವು ಷರತ್ತುಗಳೊಂದಿಗೆ ಉಳಿದ ವಲಯಗಳಲ್ಲಿ ಮಾರುಕಟ್ಟೆ ಮತ್ತು ವ್ಯಾಪಾರ ಸಂಸ್ಥೆಗಳಿಗೆ ಅನುಮತಿ ನೀಡುವುದು ರಾಜ್ಯ ಸರ್ಕಾರಗಳನ್ನು ಆರ್ಥಿಕವಾಗಿ ಬಿಕ್ಕಟ್ಟಿನಿಂದ ಸ್ವಲ್ಪ ಮುಕ್ತಗೊಳಿಸುತ್ತದೆ.

ಏಪ್ರಿಲ್ 15 ಮತ್ತು ಮೇ1 ರ ನಡುವೆ ಕೆಂಪು ವಲಯಗಳ ಸಂಖ್ಯೆ 170 ರಿಂದ 130ಕ್ಕೆ ಇಳಿದಿದೆ ಎಂಬುದು ಸಂತಸದ ಸುದ್ದಿಯಾಗಿದೆ. ಆದರೆ, ಕಿತ್ತಳೆ ವಲಯಗಳ ಹೆಚ್ಚಳ 284ಕ್ಕೆ ಮತ್ತು ಅದೇ ಅವಧಿಯಲ್ಲಿ ಹಸಿರು ವಲಯಗಳ ಸಂಖ್ಯೆಯಲ್ಲಿನ ಇಳಿಕೆ ಕೊರೊನಾ ಹರಡುವಿಕೆಯ ಸುಪ್ತ ಬೆದರಿಕೆಯನ್ನು ಸೂಚಿಸುತ್ತಿದೆ. ಹದಿನೈದು ದಿನದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ದಿನಕ್ಕೆ ಸರಾಸರಿ ಒಂದು ಸಾವಿರದಂತೆ ಏರುತ್ತಿದ್ದು, ಈಗ ಕಳೆದ ಕೆಲವು ದಿನಗಳಲ್ಲಿ ಈ ಪ್ರಮಾಣ ಎರಡು ಸಾವಿರವನ್ನು ಮೀರಿದೆ.

ಯುಎಸ್, ಇಟಲಿ ಮತ್ತು ಸ್ಪೇನ್‌ಗಳಂತೆ ಭಾರತದಲ್ಲಿ ಕೊರೊನಾ ಹರಡುವುದನ್ನು ತಡೆಯಲು ಲಾಕ್‌ಡೌನ್ ಪ್ರಮುಖ ಪಾತ್ರ ವಹಿಸಿದೆ. ಭಾರತವು ಇಂದು ದೇಶಾದ್ಯಂತ 419 ಲ್ಯಾಬ್‌ಗಳೊಂದಿಗೆ ದಿನಕ್ಕೆ 75,000 ಕೊರೊನಾ ಪರೀಕ್ಷೆಗಳ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಕೆಲವು ವಿನಾಯಿತಿಗಳೊಂದಿಗೆ ಭಾರತದ ಷರತ್ತುಬದ್ಧ ಲಾಕ್‌ಡೌನ್‌ನ ಸಡಿಲಿಕೆಯು ಪ್ರತಿಯೊಬ್ಬರೂ ತಮ್ಮನ್ನು ನಾಗರಿಕ ಜವಾಬ್ದಾರಿಯ ಪ್ರಜ್ಞೆಯೊಂದಿಗೆ ಸ್ವಯಂ ಪ್ರೇರಣೆಯಿಂದ ರಕ್ಷಿಸಿಕೊಳ್ಳಬೇಕು ಎಂಬ ಸರ್ಕಾರದ ಪ್ರಾಮಾಣಿಕ ಆಶಯವನ್ನು ಪ್ರತಿಬಿಂಬಿಸುತ್ತದೆ.

ಒಟ್ಟು ದೇಶೀಯ ಉತ್ಪನ್ನದ ಹತ್ತು ಶೇಕಡಾವನ್ನು ತಮ್ಮ ಶ್ರಮದಿಂದಗಳಿಸುವ ವಲಸೆ ಕಾರ್ಮಿಕರು, ದೇಶದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಾರೆ. ಈ ಕಾರ್ಮಿಕರು ತಮ್ಮ ಕೌಶಲ್ಯಗಳಿಗೆ ಬೇಡಿಕೆ ಇರುವ ಜಾಗಗಳನ್ನು ಹುಡುಕಿಕೊಂಡು ದೇಶದ ಮೂಲೆ ಮತ್ತು ಮೂಲೆಗಳಿಗೆ ವಲಸೆ ಹೋಗುತ್ತಾರೆ. ಈ ವಲಸೆ ಕಾರ್ಮಿಕರಿಂದ ಹಳ್ಳಿಗಳಲ್ಲಿ 9.95 ಕೋಟಿ ಕುಟುಂಬಗಳು ಮತ್ತು ನಗರಗಳಲ್ಲಿ 3.56 ಕೋಟಿ ಕುಟುಂಬಗಳು ಪ್ರತಿ ತಿಂಗಳು ಹಣವನ್ನು ಪಡೆಯುತ್ತವೆ.

ಕಳೆದ 40 ದಿನಗಳ ಲಾಕ್‌ಡೌನ್ ಅಕ್ಷರಶಃ ಅವರ ಪಾಲಿಗೆ ಕರಾಳ ದಿನಗಳಾಗಿ ಪರಿಣಮಿಸಿವೆ. ಮಾಡಲು ಯಾವುದೇ ಕೆಲಸವಿಲ್ಲದೆ, ಮನೆಗೆ ಹೋಗಲು ದಾರಿ ಕಾಣದೆ, ತಮ್ಮ ಕುಟುಂಬ ಮತ್ತು ಮಕ್ಕಳ ಬದುಕುಳಿಯುವಿಕೆಯ ಬಗ್ಗೆ ತೀವ್ರ ಚಿಂತೆಪಡುವಂತೆ ಮಾಡಿದೆ. ಕೋಟಿಗಟ್ಟಲೆ ವಲಸೆ ಕಾರ್ಮಿಕರ ಸಂಕಟವನ್ನು ವ್ಯಕ್ತಪಡಿಸಲು ಪದಗಳು ಸಿಗುವುದಿಲ್ಲ. ಅಷ್ಟರ ಮಟ್ಟಿಗೆ ಅವರ ಬದುಕು ದುಸ್ಥರವಾಗಿದೆ.

ಮಹಾರಾಷ್ಟ್ರ, ಕೇರಳ ಮತ್ತು ಛತ್ತೀಸ್‌ಗಢದ ಹಾಗೂ ಬಿಹಾರ, ಪಂಜಾಬ್ ಮತ್ತು ತೆಲಂಗಾಣ ರಾಜ್ಯಗಳ ಕೋರಿಕೆಯ ಮೇರೆಗೆ ವಲಸೆ ಕಾರ್ಮಿಕರನ್ನು ಸಾಗಿಸಲು ಕೇಂದ್ರವು ವಿಶೇಷ ರೈಲುಗಳಿಗೆ ಸಾಕಷ್ಟು ವ್ಯವಸ್ಥೆ ಮಾಡಿದೆ. ಈ 'ಶ್ರಮಿಕ್ ಸ್ಪೆಷಲ್' ರೈಲುಗಳಲ್ಲಿ ಪ್ರಯಾಣಿಸಲು ಕೇಂದ್ರವು ಕೆಲವು ಷರತ್ತುಗಳನ್ನು ವಿಧಿಸಿದ್ದರೂ, ತಮ್ಮ ಸ್ವಂತ ಊರಿಗೆ ತೆರಳುವ ವಲಸೆ ಕಾರ್ಮಿಕರ ಇಂಗಿತವನ್ನು ಪೂರೈಸಿದ್ದರೂ, ಅದರ ಬೆನ್ನಲ್ಲೇ ಕೋವಿಡ್ ಹರಡುವಿಕೆಯ ಉಲ್ಬಣಗೊಳಿಸುವ ಕಳವಳ ವ್ಯಕ್ತಪಡಿಸುತ್ತಿದೆ.

ಇತ್ತೀಚೆಗೆ ಪಂಜಾಬ್ ಸರ್ಕಾರ ನಾಂದೇದ್ ಗುರುದ್ವಾರದಲ್ಲಿ ಸಿಲುಕಿದ್ದ ಸಿಖ್ ಯಾತ್ರಿಕರನ್ನು ವಾಪಸ್ ಕರೆದುಕೊಂಡು ಹೋಯಿತು. ಈ ಘಟನೆಯ ಕಾರಣದಿಂದಾಗಿ ರಾಜ್ಯದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಈಗ ಅಲ್ಲಿನ ಸರ್ಕಾರ ಆತಂಕಗೊಂಡಿದೆ. ಬಿಹಾರ ಸರ್ಕಾರಕ್ಕೂ ಇದೇ ಭಯವಿದೆ.

ಈಗಾಗಲೇ 20 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ತಮ್ಮ ಊರಿಗೆ ಮರಳಲು ತಮ್ಮ ಹೆಸರನ್ನು ದಾಖಲಿಸಿದ್ದಾರೆ. ರೈಲುಗಳಲ್ಲಿ ಹತ್ತುವ ಮೊದಲು ಎಲ್ಲಾ ಪ್ರಯಾಣಿಕರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದು ಮತ್ತು ಅವರ ಗಮ್ಯಸ್ಥಾನವನ್ನು ತಲುಪುವಾಗ ಅವರನ್ನು ಸಂಪರ್ಕತಡೆ ಕೇಂದ್ರಗಳಿಗೆ ಸಾಗಿಸುವುದು ಮುಂತಾದ ಕಾರ್ಯವಿಧಾನಗಳನ್ನು ಹೆಚ್ಚಿನ ಜವಾಬ್ದಾರಿಯಿಂದ ಕೈಗೊಳ್ಳಬೇಕು. ಸಂಕೀರ್ಣ ಮತ್ತು ಅಪಾಯಕಾರಿ ಹೆಜ್ಜೆಯೊಂದಿಗಿನ ಕಾರ್ಮಿಕರನ್ನು ಊರಿಗೆ ತಲುಪಿಸುವ ಈ ಐತಿಹಾಸಿಕ ಘಟನೆಯನ್ನು ನಿಭಾಯಿಸುವಲ್ಲಿನ ಯಾವುದೇ ಕೊರತೆಯು ದೇಶಕ್ಕೆ ಮಾರಕವೆಂದು ಸರ್ಕಾರಗಳು ಅರಿತುಕೊಳ್ಳಬೇಕು. ಮತ್ತು ಆ ಪ್ರಜ್ಞೆಯೊಂದಿಗೆ ಈ ಕಾರ್ಯವನ್ನು ನಿರ್ವಹಿಸಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.