ಅಮಾನವೀಯ ಕೃತ್ಯ: 9 ವರ್ಷದ ಮಗಳ ಮೇಲೆ ಕಾಮುಕ ತಂದೆಯಿಂದ ರೇಪ್ - ಶಿಮ್ಲಾದಲ್ಲಿ ಬಾಲಕಿ ಮೇಲೆ ರೇಪ್
ಹೆತ್ತ ಮಗಳ ಮೇಲೆ ಕಾಮುಕ ತಂದೆಯೋರ್ವ ಅತ್ಯಾಚಾರವೆಸಗಿರುವ ಘಟನೆ ಶಿಮ್ಲಾದಲ್ಲಿ ನಡೆದಿದ್ದು, ಇದೀಗ ಆತನ ಬಂಧನ ಮಾಡಲಾಗಿದೆ.

father raped his own daughter
ಶಿಮ್ಲಾ: 9 ವರ್ಷದ ಮಗಳ ಮೇಲೆ ಕಾಮುಕ ತಂದೆಯೋರ್ವ ಅತ್ಯಾಚಾರವೆಸಗಿರುವ ಘಟನೆ ಶಿಮ್ಲಾದಲ್ಲಿ ನಡೆದಿದೆ. ಇದೀಗ ಆರೋಪಿ ವಿರುದ್ಧ ಸೆಕ್ಷನ್ 376ರ ಅಡಿ ದೂರು ದಾಖಲಾಗಿದ್ದು, ಪೊಲೀಸರು ಬಂಧನ ಮಾಡಿದ್ದಾರೆ.
ಮೂಲತಃ ಉತ್ತರ ಪ್ರದೇಶದ ರಾಯಬರೇಲಿಯ ಕುಟುಂಬ ಸದ್ಯ ಶಿಮ್ಲಾದಲ್ಲಿ ಉಳಿದುಕೊಂಡಿದ್ದು, ಈತನ ಹೆಂಡತಿ ಕಳೆದ ಕೆಲ ತಿಂಗಳ ಹಿಂದೆ ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದಾಳೆ. ತಂದೆ ಜತೆ 9 ವರ್ಷದ ಮಗುವಿದ್ದು, ಕೆಲ ತಿಂಗಳಿಂದ ಬಾಲಕಿ ಮೇಲೆ ಕಾಮುಕ ತಂದೆ ದುಷ್ಕೃತ್ಯವೆಸಗುತ್ತಿದ್ದು, ಇದೀಗ ಘಟನೆ ಬಗ್ಗೆ ಖುದ್ದಾಗಿ ಬಾಲಕಿ ಹೇಳಿಕೊಂಡಿದ್ದಾಳೆ.
ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಕೃತ್ಯ ನಡೆದಿರುವುದು ಖಚಿತಗೊಂಡಿದೆ. ಕಾಮುಕ ವ್ಯಕ್ತಿಯ ಬಂಧನ ಮಾಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.