ನಾಗಪಟ್ಟಿಣಂ: ಮಗ ಪ್ರೀತಿಸಿದ್ದ ಯುವತಿ ಮೇಲೆ ತಂದೆಯೊಬ್ಬ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ನಾಗಪಟ್ಟಿಣಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಿತ್ಯಾನಂದ ಎಂಬ ವ್ಯಕ್ತಿ ಬಟ್ಟೆ ವ್ಯಾಪಾರ ಮಾಡುತ್ತಿದ್ದಾರೆ. ಆತನ ಮಗ ಎನ್.ಮುಖೇಶ್ ಕಣ್ಣನ್ 20 ವರ್ಷದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಮನೆಯಲ್ಲಿ ಒಪ್ಪಿಗೆ ಪಡೆದು ಇಬ್ಬರು ಮದುವೆಯಾಗಬೇಕೆಂದು ಆಸೆಯಿತ್ತು. ಅದರಂತೆ ಕನ್ನನ್ ತನ್ನ ಪ್ರೀತಿಯ ವಿಷಯ ತಂದೆ ನಿತ್ಯಾನಂದನಿಗೆ ತಿಳಿಸಿದ್ದಾನೆ. ಆದ್ರೆ ಇವರ ಪ್ರೀತಿ ನಿತ್ಯಾನಂದನಿಗೆ ಇಷ್ಟವಿರಲಿಲ್ಲ.
ಇನ್ನು ಮದುವೆ ವಿಷಯದ ಬಗ್ಗೆ ಮಾತನಾಡುವುದಕ್ಕೆ ಅಂತಾ ಹೇಳಿ ನಿತ್ಯಾನಂದ ಯುವತಿಯನ್ನು ಒಂಟಿಯಾಗಿ ಮನೆಗೆ ಕರೆಸಿದ್ದಾನೆ. ಬಳಿಕ ಯುವತಿಯಿಂದ ಫೋನ್ ಕಸಿದುಕೊಂಡು ತಾಳಿ ಕಟ್ಟಿ ಅತ್ಯಾಚಾರ ಎಸಗಿದ್ದಾನೆ.
ಯುವತಿಯನ್ನು ಗೃಹ ಬಂಧನದಲ್ಲಿಟ್ಟು ಎರಡು ದಿನಗಳ ಕಾಲ ನಿರಂತರ ಅತ್ಯಾಚಾರ ಎಸಗಿದ್ದಾನೆ. ಬಳಿಕ ಯುವತಿಯನ್ನು ತನ್ನ ಸ್ನೇಹಿತನ ಮನೆಯಲ್ಲಿ ಮುಚ್ಚಿಟ್ಟಿದ್ದಾನೆ. ನಡೆದ ಘಟನೆ ಬಗ್ಗೆ ತಿಳಿದ ಮಗ ಮುಖೇಶ್ ಕನ್ನನ್ ಸಂತ್ರಸ್ತೆಯನ್ನು ಕಾಪಾಡಿ ತನ್ನ ತಂದೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಈ ಘಟನೆ ಬಗ್ಗೆ ನಾಗಪಟ್ಟಿಣಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.