ಜಮ್ಮು-ಕಾಶ್ಮೀರ: ಗೃಹ ಬಂಧನಕ್ಕೊಳಗಾಗಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಏಳು ತಿಂಗಳ ಬಳಿಕ ಬಿಡುಗಡೆಗೊಂಡಿದ್ದಾರೆ.
ನಾನೀಗ ಬಂಧಮುಕ್ತಗೊಂಡಿದ್ದೇನೆ. ಆದರೆ ಇನ್ನೂ ನಮ್ಮ ಹಲವು ನಾಯಕರು ಬಂಧನದಲ್ಲಿದ್ದಾರೆ, ಹೀಗಾಗಿ ಈ ಸ್ವಾತಂತ್ರ್ಯ ಪೂರ್ಣವಲ್ಲ ಎಂದು ಬಿಡುಗಡೆಯ ಬಳಿಕ ಅಬ್ದುಲ್ಲಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಪ್ರಧಾನಿ ಮೋದಿ ಸರ್ಕಾರ ರದ್ದುಗೊಳಿಸಿದ ವೇಳೆ ಕೇಂದ್ರದ ವಿರುದ್ಧ ದಂಗೆ ಏಳಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಕಳೆದ ಸೆಪ್ಟಂಬರ್ನಲ್ಲಿ ಕಣಿವೆ ರಾಜ್ಯದ ನಾಯಕರ ಮೇಲೆ ಗೃಹ ಬಂಧನ ಹೇರಲಾಗಿತ್ತು. ಈ ವೇಳೆ ಫಾರೂಕ್ ಅಬ್ದುಲ್ಲಾ ಅವರನ್ನು ಕಠಿಣ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಅಡಿಯಲ್ಲಿ ಬಂಧಿಸಲಾಗಿತ್ತು. ಈ ಕಾಯ್ದೆ ಯಾವುದೇ ವ್ಯಕ್ತಿಯನ್ನು ಎರಡು ವರ್ಷಗಳ ಕಾಲ ವಿಚಾರಣೆಯಿಲ್ಲದೆ ಬಂಧಿಸಲು ಅಧಿಕಾರಿಗಳಿಗೆ ಅನುವು ಮಾಡಿಕೊಡುತ್ತದೆ.