ನವದೆಹಲಿ : ಮೋದಿ ಸರ್ಕಾರ ಕ್ರೌರ್ಯದ ವಿರುದ್ಧ ರೈತರು ದೃಢವಾಗಿ ನಿಂತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್‌ನಿಂದ ದೆಹಲಿಯತ್ತ ಮೆರವಣಿಗೆ ನಡೆಸುತ್ತಿದ್ದ ನೂರಾರು ರೈತರನ್ನು ಚದುರಿಸಲು ಹರಿಯಾಣ ಪೊಲೀಸರು ಜಲ ಫಿರಂಗಿ ಬಳಿಸಿದ್ದಕ್ಕಾಗಿ ಕಿಡಿ ಕಾರಿರುವ ರಾಹುಲ್ ಈ ರೀತಿ ಹೇಳಿದ್ದಾರೆ.
-
नहीं हुआ है अभी सवेरा,
— Rahul Gandhi (@RahulGandhi) November 26, 2020 " class="align-text-top noRightClick twitterSection" data="
पूरब की लाली पहचान
चिड़ियों के जगने से पहले,
खाट छोड़ उठ गया किसान
काले क़ानूनों के बादल गरज रहे गड़-गड़,
अन्याय की बिजली चमकती चम-चम
मूसलाधार बरसता पानी,
ज़रा ना रुकता लेता दम!
मोदी सरकार की क्रूरता के ख़िलाफ़ देश का किसान डटकर खड़ा है। pic.twitter.com/UMtYbKqSkM
">नहीं हुआ है अभी सवेरा,
— Rahul Gandhi (@RahulGandhi) November 26, 2020
पूरब की लाली पहचान
चिड़ियों के जगने से पहले,
खाट छोड़ उठ गया किसान
काले क़ानूनों के बादल गरज रहे गड़-गड़,
अन्याय की बिजली चमकती चम-चम
मूसलाधार बरसता पानी,
ज़रा ना रुकता लेता दम!
मोदी सरकार की क्रूरता के ख़िलाफ़ देश का किसान डटकर खड़ा है। pic.twitter.com/UMtYbKqSkMनहीं हुआ है अभी सवेरा,
— Rahul Gandhi (@RahulGandhi) November 26, 2020
पूरब की लाली पहचान
चिड़ियों के जगने से पहले,
खाट छोड़ उठ गया किसान
काले क़ानूनों के बादल गरज रहे गड़-गड़,
अन्याय की बिजली चमकती चम-चम
मूसलाधार बरसता पानी,
ज़रा ना रुकता लेता दम!
मोदी सरकार की क्रूरता के ख़िलाफ़ देश का किसान डटकर खड़ा है। pic.twitter.com/UMtYbKqSkM
ರೈತರು ರಾಜ್ಯಕ್ಕೆ ಪ್ರವೇಶಿಸದಂತೆ ಹರಿಯಾಣದ ಪಂಜಾಬ್ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಹಲವೆಡೆ ಬಹು ಹಂತದ ಬ್ಯಾರಿಕೇಡ್ ಅಳವಡಿಸಲಾಗಿದೆ. ಹರಿಯಾಣದ ಶಂಭು ಪ್ರದೇಶದ ಅಂತಾರಾಜ್ಯ ಗಡಿಯಲ್ಲಿ, ಪಂಜಾಬ್‌ನಿಂದ 'ದೆಹಲಿ ಚಲೋ ರ್ಯಾಲಿ'ಯಲ್ಲಿ ಬರುತ್ತಿದ್ದ ರೈತರನ್ನು ಚದುರಿಸಲು ಪೊಲೀಸರು ಜಲ ಫಿರಂಗಿ ಪ್ರಯೋಗಿಸಿದ್ದರು. ಈ ವೇಳೆ ರೊಚ್ಚಿಗೆದ್ದ ರೈತರು, ಪೊಲೀಸ್ ಬ್ಯಾರಿಕೇಡ್ಗಳನ್ನು ನದಿಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.
ಇದನ್ನೂ ಓದಿ: ಕೇಂದ್ರದ ವಿರುದ್ಧ ಸಿಡಿದೆದ್ದ ಅನ್ನದಾತ: ಲಕ್ಷಾಂತರ ರೈತರಿಂದ ‘ದೆಹಲಿ ಚಲೋ’
ಘಟನೆಯ ವಿಡಿಯೋವನ್ನು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಮೋದಿ ಸರ್ಕಾರದ ಕ್ರೌರ್ಯದ ವಿರುದ್ಧ ದೇಶದ ರೈತರು ದೃಢವಾಗಿ ನಿಂತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುವ ರೈತರ ಧೈರ್ಯವನ್ನು ಶ್ಲಾಘಿಸುತ್ತಾ, ಹಿಂದಿಯಲ್ಲಿ ಒಂದು ಪದ್ಯವನ್ನೂ ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.