ETV Bharat / bharat

ಮೂವರು ವ್ಯಾಟ್ಸ್ಯಾಪ್​ ಹ್ಯಾಕರ್ಸ್​ ಬಂಧನ... ಕಾಲೇಜು ಕನ್ಯೆಯರೇ ಇವರ ಟಾರ್ಗೆಟ್​! - ವ್ಯಾಟ್ಸ್ಯಾಪ್​ ಹ್ಯಾಕರ್​ಗಳ ಬಂಧನ ಸುದ್ದಿ

ಕಳೆದ ಎರಡು ವರ್ಷಗಳಿಂದ ದೆಹಲಿಯ ವಿವಿಧ ಕಾಲೇಜುಗಳ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ವ್ಯಾಟ್ಸ್ಯಾಪ್ ಹ್ಯಾಕ್​ ಮಾಡಿ ಅವರಿಂದ ಹಣ ಪೀಕಿದ್ದ ಮೂವರು ವ್ಯಾಟ್ಸ್ಯಾಪ್​ ಹ್ಯಾಕರ್‌ಗಳು ಇದೀಗ ಪೊಲೀಸರ​ ಬಲೆಗೆ ಬಿದ್ದಿದ್ದಾರೆ. ವಿಶೇಷ ಅಂದ್ರೆ ಇವರ್ಯಾರು ಹತ್ತನೇ ತರಗತಿಯನ್ನು ಸಹ ಪೂರ್ಣಗೊಳಿಸಿಲ್ಲ, ಆದರೆ ಹ್ಯಾಕಿಂಗ್​ ಮಾಡೋದ್ರಲ್ಲಿ ಇವರನ್ನು ಮೀರಿಸೋರಿಲ್ಲ.

faridabad-police-arrested-three-whatsapp-hacker-including-one-lady
ವ್ಯಾಟ್ಸ್ಯಾಪ್​ ಹ್ಯಾಕರ್​ಗಳ ಬಂಧನ
author img

By

Published : Jun 21, 2020, 5:17 PM IST

ಫರಿದಾಬಾದ್/ಹರಿಯಾಣ: ಇಂದು ನಾವು ಗ್ಯಾಜೆಟ್‌ಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದೇವೆ. ಆದರೆ ಜಾಗರೂಕರಾಗಿರಿ.. ಏಕೆಂದರೆ ಸೈಬರ್ ಹ್ಯಾಕರ್‌ಗಳು ಈ ಗ್ಯಾಜೆಟ್‌ಗಳನ್ನು ಹ್ಯಾಕ್ ಮಾಡುತ್ತಾರೆ ಮತ್ತು ಖಾಸಗಿ ಚಾಟ್ ಮಾಹಿತಿಯನ್ನು ಕದಿಯುತ್ತಾರೆ. ಇದು ಬ್ಲ್ಯಾಕ್‌ ಮೇಲಿಂಗ್‌ನಂತಹ ಘಟನೆಗಳಿಗೆ ಕಾರಣವಾಗುತ್ತದೆ. ಇಂತಹದ್ದೇ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣದ ಫರಿದಾಬಾದ್ ಸೈಬರ್ ಪೊಲೀಸರು​ ವಾಟ್ಸ್ಯಾಪ್​ ಹ್ಯಾಕಿಂಗ್​ ಗ್ಯಾಂಗ್​​ ಅನ್ನು ಹೆಡೆಮುರಿ ಕಟ್ಟಿದ್ದಾರೆ.

ಈ ಗ್ಯಾಂಗ್​ನ ಖದೀಮರು ಕಾಲೇಜು ಹುಡುಗಿಯರನ್ನೇ ಗುರಿಯಾಗಿರಿಸಿಕೊಂಡು ಅವರ ವಾಟ್ಸ್ಯಾಪ್ ಹ್ಯಾಕ್​ ಮಾಡಿ ಅವರ ಖಾಸಗಿ ಚಾಟ್​​ಗಳನ್ನು ಮುಂದಿಟ್ಟುಕೊಂಡು ಅವರಿಗೆ ಬ್ಲಾಕ್​​ಮೇಲ್​ ಮಾಡುತ್ತಿದ್ದರು. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈ ಗ್ಯಾಂಗ್ ಇದುವರೆಗೆ 100 ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ವಾಟ್ಸ್ಯಾಪ್ ಹ್ಯಾಕ್​ ಮಾಡಿದೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಮನೀಶ್ ಕೇವಲ ಹತ್ತನೇ ತರಗತಿ ಪಾಸ್, ಗ್ಯಾಂಗ್‌ಗೆ ನಕಲಿ ಸಿಮ್ ನೀಡುತ್ತಿದ್ದ ಅವನ ಹೆಂಡತಿ, ಸತ್ತಾರ್ ಖಾನ್ 8 ನೇ ಕ್ಲಾಸ್​​ ಪಾಸ್.. ಈ ಗ್ಯಾಂಗ್‌ನ ಮತ್ತೋರ್ವ ಸದಸ್ಯ ಹೈಸ್ಕೂಲ್​ ಮೆಟ್ಟಿಲು ಕೂಡ ಹತ್ತಿಲ್ಲ. ಆದರೆ ಗ್ಯಾಜೆಟ್‌ ಹ್ಯಾಕಿಂಗ್​​ನಲ್ಲಿ ವೃತ್ತಿಪರ ಹ್ಯಾಕರ್‌ಗಳನ್ನು ಕೂಡ ಮೀರಿಸುವಷ್ಟು ನಿಸ್ಸೀಮರು ಈ ಹ್ಯಾಕರ್ಸ್​​.

ಈ ಗ್ಯಾಂಗ್​ ಕಾರ್ಯಾಚರಣೆ ಹೇಗಿತ್ತು?

ತಮ್ಮ ಗ್ಯಾಂಗ್​ನ ಮಹಿಳೆ ಸದಸ್ಯರನ್ನು ಮುಂದಿಟ್ಟುಕೊಂಡು ಕಾಲೇಜು ಹುಡುಗಿಯರ ಜೊತೆ ಸ್ನೇಹ ಬೆಳೆಸಿ ನಂತರ ಅವರೊಂದಿಗೆ ಸಲುಗೆ ಬೆಳೆಸಿಕೊಳ್ಳುವುದು. ನಂತರ ಅವರ ಫೋನ್​ ನಂಬರ್​​ ಪಡೆದುಕೊಳ್ಳುವುದು. ನಂತರ ಸುಲಭವಾಗಿ ವಿದ್ಯಾರ್ಥಿನಿಯರ ವಾಟ್ಸ್ಯಾಪ್​ ಹ್ಯಾಕ್​ ಮಾಡುತ್ತಿದ್ದರು.

ಈ ಗ್ಯಾಂಗ್‌ ಕಳೆದ 2 ವರ್ಷಗಳಿಂದ ಸುಮಾರು 100 ವಿದ್ಯಾರ್ಥಿನಿಯರನ್ನು ಈ ರೀತಿ ಬಲೆಗೆ ಹಾಕಿಕೊಂಡು ಅವರ ಖಾಸಗಿ ಸಂಭಾಷಣೆಗಳು, ಫೋಟೋಗಳನ್ನು ಕದಿಯುತ್ತಿದ್ದರು ಮತ್ತು ಅವುಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ Paytm ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಪೊಲೀಸರು ಹೇಳಿರುವಂತೆ ಇವರು ಲಕ್ಷಾಂತರ ರೂಪಾಯಿಗಳಿಗೆ ಬೇಡಿಕೆ ಇಡುತ್ತಿರಲಿಲ್ಲ. ಬದಲಿಗೆ 5 ರಿಂದ 10 ಸಾವಿರ ರೂಗಳಿಗಷ್ಟೇ ಬೇಡಿಕೆ ಇಡುತ್ತಿದ್ದರು. ಕಾರಣ ಇಷ್ಟೇ, ಜಾಸ್ತಿ ಹಣ ಕೇಳಿದ್ರೆ ಪೊಲೀಸರ ಬಳಿ ಹೋಗಿ ಕಂಪ್ಲೆಂಟ್​​ ಕೊಡ್ತಾರೆ. ಆಗ ಪೊಲೀಸರಿಗೆ ಸಿಕ್ಕಿಬೀಳ್ತೇವೆ ಅನ್ನೋದು. ಅದೇ ಅಲ್ಪ ಮೊತ್ತದ ಹಣ ಕೇಳಿದ್ರೆ ಕೊಟ್ಟು ಸುಮ್ಮನಾಗ್ತಾರೆ ಅಂತ ಹೀಗೆ ಮಾಡ್ತಿದ್ರು ಅಂತ ಪೊಲೀಸರು ಇವರ ಖಯಾಲಿಯನ್ನು ಬಿಚ್ಚಿಟ್ಟಿದ್ದಾರೆ.

ದೆಹಲಿ, ಫರಿದಾಬಾದ್ ಸೇರಿದಂತೆ ಹಲವೆಡೆ ಈ ಗ್ಯಾಂಗ್ ಮೇಲೆ ಡಜನ್​​ಗಟ್ಟಲೇ ಪ್ರಕರಣಗಳು ದಾಖಲಾಗಿವೆ. ಬಾಲಕಿಯೊಬ್ಬಳು ನೀಡಿದ ನಂಬರ್​​ನಿಂದ ಪೊಲೀಸರಿಗೆ ಈ ಖತರ್ನಾಕ್​​ ಗುಂಪಿನ ಸುಳಿವು ಸಿಕ್ಕಿದ್ದು , ಈ ಹ್ಯಾಕರ್ಸ್​​ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಐಪಿಸಿ 419, 420, 354 ಡಿ, 467, 468 471, 120 ಬಿ ಸೆಕ್ಷನ್ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.