ETV Bharat / bharat

Fact Check: ಕೊರೊನಾ ಬಗ್ಗೆ ಹರಡುತ್ತಿದೆ ಸುಳ್ಳು ನ್ಯೂಸ್‌; ನಂಬಬೇಡಿ, ಸತ್ಯಾಸತ್ಯತೆಗಾಗಿ ಇಲ್ಲಿ ನೋಡಿ.. - Fake news in India

ವಿಶ್ವ ಆರೋಗ್ಯ ಸಂಸ್ಥೆಯಿಂದ ಲಾಕ್​ ಡೌನ್​ ಶೆಡ್ಯೂಲ್​ ಬಿಡುಗಡೆಯಾಗಿದೆ ಎಂದು ಹೇಳಲಾದ ಸುದ್ದಿಯೂ ಇತ್ತೀಚೆಗೆ ವೈರಲ್​ ಆಗುತ್ತಿದೆ. ಆದರೆ ಇದು ಅಪ್ಪಟ ಸುಳ್ಳು ಸುದ್ದಿ. ಲಾಕ್​ ಡೌನ್​ ಮುಂದುವರಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯಾಗಲೀ, ಕೇಂದ್ರ ಸರ್ಕಾರವಾಗಲಿ ಯಾವುದೇ ಅಧಿಕೃತ ಹೇಳಿಕೆ ಅಥವಾ ಅಧಿಸೂಚನೆ ಹೊರಡಿಸಿಲ್ಲ.

Fake news
ಸುಳ್ಳು ಸುದ್ದಿ
author img

By

Published : Apr 6, 2020, 7:39 PM IST

ನವದೆಹಲಿ: ಸದ್ಯ ದೇಶದಲ್ಲಿ ಕೊರೊನಾ ವೈರಸ್​ನಿಂದಾಗಿ ಲಾಕ್​ಡೌನ್​ ಜಾರಿಯಲ್ಲಿದೆ. ಈ ನಡುವೆ ಹಲವು ಸುಳ್ಳು ಸುದ್ದಿಗಳು ಹಬ್ಬುತ್ತಿದ್ದು, ಜನರು ಇವುಗಳನ್ನು ನಂಬಿ ಫಾರ್ವರ್ಡ್​ ಮಾಡುವಾಗ ಎಚ್ಚರವಿರುವ ಅಗತ್ಯವಿದೆ.

ಕೊರೊನಾ ವೈರಸ್‌ ಕುರಿತಂತೆ ಯಾವುದೇ ಜೋಕ್‌ಗಳನ್ನು ಪೋಸ್ಟ್ ಮಾಡುವ ವಾಟ್ಸ್​ಆ್ಯಪ್​ ಗ್ರೂಪ್​ ಅಡ್ಮಿನ್​ ಮತ್ತು ಗ್ರೂಪ್​ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಗ್ರೂಪ್​ ಅಡ್ಮಿನ್​ ಆ ಗ್ರೂಪ್​ ಅನ್ನು 2 ದಿನ ಕ್ಲೋಸ್​ ಮಾಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ಹರಿದಾಡುತ್ತಿದೆ. ಆದರಿದು ಸುಳ್ಳು ಸುದ್ದಿ. ಇಂತಹ ಯಾವುದೇ ಆದೇಶವನ್ನು ಸರ್ಕಾರ ಹೊರಡಿಸಿಲ್ಲ.

  • Fake message is going around on social media claiming that legal action would be taken against admin and group members who post jokes on #Coronavirus , hence group admin should close the group for 2 days.

    This is #Fake! No such order has been issued by the Government pic.twitter.com/TFB5GCH2Vg

    — PIB Fact Check (@PIBFactCheck) April 6, 2020 " class="align-text-top noRightClick twitterSection" data=" ">

ನಕಲಿ ಯುಪಿಐ ಐಡಿ ಬಗ್ಗೆ ಎಚ್ಚರವಿರಲಿ:

  • The correct UPI ID for PM CARES Fund is pmcares@sbi

    Keep your valuable contribution safe from fraudulent UPI ID's.
    Verify the genuineness before making any donations. pic.twitter.com/gMIG0vXGUN

ಕೊರೊನಾ ವೈರಸ್​ ಸಂಬಂಧ ದೇಣಿಗೆ ನೀಡುವವರಿಗಾಗಿ ಆರಂಭಿಸಲಾಗಿರುವ ಪಿಎಂ ಕೇರ್ಸ್​ ಫಂಡ್ ​(PM CARES Fund) ಗೆ ಸಂಬಂಧಿಸಿದಂತೆ ಹಲವು ನಕಲಿ ಯುಪಿಐ ಐಡಿಗಳು ಹರಿದಾಡುತ್ತಿವೆ. ಇವೆಲ್ಲಾ ನಕಲಿಯಾಗಿದ್ದು, ದೇಣಿಗೆ ನೀಡುವ ಮೊದಲು ಜನರು ಐಡಿಯನ್ನು ಸರಿಯಾಗಿ ವೆರಿಫೈ ಮಾಡಬೇಕು. ಪಿಎಂ ಕೇರ್ಸ್​ ಫಂಡ್​ನ ಸರಿಯಾದ ಯುಪಿಐ ಐಡಿ pmcares@sbi.

ಕೇಂದ್ರ ಗೃಹ ಸಚಿವರಿಗೆ ಕೊರೊನಾ ಸೋಂಕು ಹರಡಿಲ್ಲ:

  • A morphed image being shared on social media cites a prominent Hindi news channel claiming Union Home Minister @amitshah has been infected with #COVID19

    The image is #Fake and aims to spread confusion. Please do not share or forward it. pic.twitter.com/3evj8DFUiA

    — PIB Fact Check (@PIBFactCheck) April 5, 2020 " class="align-text-top noRightClick twitterSection" data=" ">

ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರಿಗೆ ಕೊರೊನಾ ಪಾಸಿಟಿವ್​ ಎಂಬ ಸುಳ್ಳು ಸುದ್ದಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಕೂಡಾ ಸುಳ್ಳು ಸುದ್ದಿ.

ಲಾಕ್​ ಡೌನ್​ ಬಗ್ಗೆಯೂ ಸುಳ್ಳು ಸುದ್ದಿ:

ವಿಶ್ವ ಆರೋಗ್ಯ ಸಂಸ್ಥೆಯಿಂದ ಲಾಕ್‌ಡೌನ್​ ಶೆಡ್ಯೂಲ್​ ಬಿಡುಗಡೆಯಾಗಿದೆ ಎಂದು ಹೇಳಲಾದ ಸುದ್ದಿಯೂ ಇತ್ತೀಚೆಗೆ ವೈರಲ್​ ಆಗುತ್ತಿದೆ. ಆದರೆ ಇದು ಕೂಡಾ ಸುಳ್ಳು ಸುದ್ದಿ. ಲಾಕ್​ ಡೌನ್​ ಮುಂದುವರಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯಾಗಲಿ ಕೇಂದ್ರ ಸರ್ಕಾರವಾಗಲಿ ಯಾವುದೇ ಅಧಿಕೃತ ಹೇಳಿಕೆ ಅಥವಾ ಅಧಿಸೂಚನೆ ಹೊರಡಿಸಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.