ನವದೆಹಲಿ: ಆ್ಯಪ್ ಸ್ಟೋರ್‌ಗಳಲ್ಲಿ ಲಭ್ಯವಿರುವ 'CoWIN' ಹೆಸರಿನ ಹಲವು ಮೋಸದ ಆ್ಯಪ್ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಡಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಈ ವಂಚಕ ಆ್ಯಪ್ಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಈ ಕುರಿತಾಗಿ ಅಧಿಕೃತ ಪ್ಲಾಟ್ ಪಾರ್ಮ್ ಅನ್ನು ಆರಂಭಿಸಿದ ನಂತರ ಸಮರ್ಪಕವಾಗಿ ಪ್ರಚಾರ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಕೋವಿಡ್ ಲಸಿಕೆ ಇಂಟೆಲಿಜೆನ್ಸ್ ನೆಟ್‌ವರ್ಕ್ ಶೀಘ್ರದಲ್ಲೇ ಚಿಕ್ಕದಾದ 'ಕೋವಿನ್' ಅಪ್ಲಿಕೇಶನ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಲಿದೆ. ಇದರಿಂದ ಕೋವಿಡ್ ಬಗೆಗಿನ ಎಲ್ಲಾ ಮಾಹಿತಿ ತಿಳಿಯಲಿದೆ. ಹಾಗೆಯೇ ಈ ಅಪ್ಲಿಕೇಶನ್ ಸರ್ಕಾರವು ಬೃಹತ್ ಇನಾಕ್ಯುಲೇಷನ್ ಪ್ರಕ್ರಿಯೆಯನ್ನು ಸಂಘಟಿಸಲು ಮಾತ್ರವಲ್ಲದೆ ಆರೋಗ್ಯ ಅಧಿಕಾರಿಗಳ ನೆರವಿಗೆ ಸಹಾಯಕವಾಗಲಿದೆ.
ಶೀಘ್ರದಲ್ಲೇ ಇದನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪ್ಯಾನ್ ಮತ್ತು ಬ್ಯಾಂಕ್ ಪಾಸ್‌ಬುಕ್‌ನಂತಹ ಗುರುತಿನ ದಾಖಲೆಗಳನ್ನು ಇಲ್ಲಿ ಅಪ್‌ಲೋಡ್ ಮಾಡಿದ ನಂತರ ಫಲಾನುಭವಿಗಳು ತಮ್ಮನ್ನು ನೋಂದಾಯಿಸಿಕೊಳ್ಳಬಹುದಾಗಿದೆ.