ರಾಯಗಢ(ಮಹಾರಾಷ್ಟ್ರ): 2017ರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿದ್ದ ಹೆಲಿಕಾಪ್ಟರ್ ಮೇಲೇರುವಾಗ ತಾಂತ್ರಿಕ ದೋಷದಿಂದ ರಭಸವಾಗಿ ನೆಲಕ್ಕೆ ಅಪ್ಪಳಿಸಿ, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಾಗಿದ್ದ ಘಟನೆ ಲಾತೂರ್ನಲ್ಲಿ ನಡೆದಿತ್ತು. ಇದೀಗ ಅಂತಹ ಮತ್ತೊಂದು ಘಟನೆ ನಡೆದಿದೆ.
ಅಹಮದನಗರದ ಖರ್ಜತ್ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾದ ಬಳಿಕ ಇನ್ನೊಂದು ಸಭೆಯಲ್ಲಿ ಭಾಗಿಯಾಗಲು ರಾಯಗಢಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಫಡ್ನವೀಸ್ ಹಾಗೂ ಮತ್ತಿತರರು ಇದ್ದ ಹೆಲಿಕಾಪ್ಟರ್ ಲ್ಯಾಂಡ್ ಮಾಡುವ ವೇಳೆ ಪೈಲಟ್ಗೆ ನಿಯಂತ್ರಣ ತಪ್ಪಿದೆ. ಆದರೆ ತದನಂತರ ನಿಯಂತ್ರಣಕ್ಕೆ ಬಂದು ಹೆಲಿಕಾಪ್ಟರ್ ಸರಿಯಾದ ಸ್ಥಳದಲ್ಲಿ ಲ್ಯಾಂಡಿಂಗ್ ಆಗಿದೆ.
ಹೆಲಿಕಾಪ್ಟರ್ ನಿಯಂತ್ರಣ ತಪ್ಪುತ್ತಿದ್ದಂತೆ ಕೆಲಹೊತ್ತು ಎಲ್ಲರಲ್ಲೂ ಆತಂಕ ಮನೆ ಮಾಡಿತ್ತು. ಅದರೆ ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಇನ್ನು 2018ರ ಜನವರಿಯಲ್ಲೂ ಫಡ್ನವೀಸ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿತ್ತು.