ಹೈದರಾಬಾದ್: ಕೋವಿಡ್-19 ಬಗ್ಗೆ ನೀವು ಫೇಸ್‌ಬುಕ್ ಪೋಸ್ಟ್ ಇಷ್ಟಪಟ್ಟಿದ್ದೀರಾ ಅಥವಾ ಕಮೆಂಟ್ ಮಾಡಿದ್ದೀರಾ ಅಥವಾ ನೀವು ಸುಳ್ಳು ಮಾಹಿತಿಯನ್ನು ಹರಡಿದ್ದೀರಾ ಎಂದು ನಿಮಗೆ ತಿಳಿಸಲು ಫೇಸ್‌ಬುಕ್ ಹೊಸ ಕ್ರಮವನ್ನು ಪ್ರಾರಂಭಿಸಲಿದೆ.
ಹಾನಿಕಾರಕ ಅಥವಾ ತಪ್ಪು ಮಾಹಿತಿ ಹೊಂದಿದ್ದ ಪೋಸ್ಟ್‌ಗಳನ್ನು ನೀವು ಇಷ್ಟಪಟ್ಟರೆ, ಪ್ರತಿಕ್ರಿಯಿಸಿದರೆ ಅಥವಾ ಕಮೆಂಟ್ ಮಾಡಿದರೆ ಫೇಸ್‌ಬುಕ್ ಶೀಘ್ರದಲ್ಲೇ ಬಳಕೆದಾರರಿಗೆ ಈ ಕುರಿತು ತಿಳಿಸಲಿದೆ.
ಸೋಶಿಯಲ್ ಮೀಡಿಯಾದಲ್ಲಿ ನಕಲಿ ಮಾಹಿತಿಯನ್ನು ತಡೆಯಲು ಫೇಸ್‌ಬುಕ್ ಕ್ರಮ ಕೈಗೊಂಡಿದೆ. ಮುಂಬರುವ ದಿನಗಳಲ್ಲಿ ಜನ ಎಚ್ಚರಿಕೆ ಸಂದೇಶಗಳನ್ನು ನೋಡಲಾರಂಭಿಸುತ್ತಾರೆ ಎಂದು ಫೇಸ್‌ಬುಕ್ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಮಾಹಿತಿ ಹೊರತುಪಡಿಸಿ, ಸುಳ್ಳು ಸುದ್ದಿ ಹರಡಿದರೆ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ವೈರಸ್ ಚಿಕಿತ್ಸೆಗಳು ಅಥವಾ ಗುಣಪಡಿಸುವ ನಕಲಿ ಜಾಹೀರಾತುಗಳನ್ನು ಫೇಸ್‌ಬುಕ್ ನಿಷೇಧಿಸಿದೆ.