ಮುಂಬೈ (ಮಹಾರಾಷ್ಟ್ರ): ಮುಖೇಶ್ ಅಂಬಾನಿ ಒಡೆತನದ ಜಿಯೋದಲ್ಲಿ ಶೇ .9.9ರಷ್ಟು ಪಾಲು ಖರೀದಿಸಲು ಫೇಸ್‌ಬುಕ್ 5.7 ಬಿಲಿಯನ್ ಡಾಲರ್ (43,574 ಕೋಟಿ ರೂ.) ಹೂಡಿಕೆ ಮಾಡಿರುವುದಾಗಿ ಘೋಷಿಸಿದೆ.
"ಇಂದು ನಾವು 5.7 ಬಿಲಿಯನ್ ಯುಎಸ್ ಡಾಲರ್ ಅಥವಾ 43,574 ಕೋಟಿ ರೂಪಾಯಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಭಾಗವಾಗಿರುವ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ನಲ್ಲಿ ಹೂಡಿಕೆ ಮಾಡಿರುವುದಾಗಿ ಘೋಷಿಸುತ್ತಿದ್ದೇವೆ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
"ಫೇಸ್‌ಬುಕ್‌ನ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇ .9.99ರಷ್ಟು ಷೇರುಗಳನ್ನುದ ಹೊಂದಿದೆ" ಎಂದು ಇನ್ನೊಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ (ಆರ್ಐಎಲ್) ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್ ಡಿಜಿಟಲ್ ಸೇವೆಗಳನ್ನು ಹೊಂದಿದೆ. 388 ಮಿಲಿಯನ್ ಚಂದಾದಾರರನ್ನು ಹೊಂದಿರುವ ರಿಲಯನ್ಸ್ ಜಿಯೋದಲ್ಲಿ ಇದೀಗ ಫೇಸ್‌ಬುಕ್ ಹೂಡಿಕೆ ಮಾಡಿದೆ.