ಮುದುಕ ಮುದುಕಿಯರ ಫಿಲ್ಟರ್ಗಳೊಂದಿಗೆ ವೈರಲ್ ಆಗಿರುವ ಫೇಸ್ಆ್ಯಪ್ ಇದೀಗ ಭಾರತದ ಬಳಕೆದಾರರನ್ನು ಬ್ಲಾಕ್ ಮಾಡುತ್ತಿದೆ. ಆ್ಯಂಡ್ರಾಯ್ಡ್ನ ಗೂಗಲ್ ಪ್ಲೇ ಮತ್ತು ಐಒಎಸ್ನ ಆ್ಯಪಲ್ ಪ್ಲೇ ಸ್ಟೋರ್ನಲ್ಲಿ ಈ ಆ್ಯಪ್ ಲಭ್ಯವಿದ್ದರೂ, ಬಳಸಲು ಯತ್ನಿಸುವಾಗ ದೋಷ ಕಾಣಿಸುತ್ತಿದೆ. ಫೇಸ್ಆ್ಯಪ್ ದೋಷದ ಕುರಿತು ಬಳಕೆದಾರರು ಟ್ವಿಟರ್ನಲ್ಲಿ ವರದಿ ಮಾಡಿದ್ದಾರೆ.
ಭಾರತದಿಂದ ಫೇಸ್ಆ್ಯಪ್ ಬಳಸುವ ಆ್ಯಂಡ್ರಾಯ್ಡ್ ಬಳಕೆದಾರರಿಗೆ, "ಏನೋ ತಪ್ಪಾಗಿದೆ, ದಯವಿಟ್ಟು ಮತ್ತೆ ಪ್ರಯತ್ನಿಸಿ" ("Something went wrong, Please try again") ಎಂಬ ಸಂದೇಶ ಬರುತ್ತದೆ. ಐಒಎಸ್ ಬಳಕೆದಾರರಿಗೆ, "ಎರರ್ 6 - ಕಾರ್ಯಚರಣೆಯನ್ನು ಪೂರ್ಣಗೊಳಿಸಲಾಗಲಿಲ್ಲ" ("ApiRequestError error 6 - Operation couldn't be completed") ಎಂಬ ಸಂದೇಶ ಬರುತ್ತಿದೆ. ಈ ಸಮಸ್ಯೆಯ ಕುರಿತು ಕೆಲವು ಟ್ವಿಟ್ಟರ್ ಬಳಕೆದಾರರು ವರದಿ ಮಾಡಿದ್ದಾರೆ.
ವೈರಲ್ ಆಗಿರುವ ವೃದ್ಧಾಪ್ಯದ ಫಿಲ್ಟರ್ ಸೇರಿದಂತೆ ಹಲವು ಫಿಲ್ಟರ್ಗಳನ್ನು ಹೊಂದಿರುವ ಫೇಸ್ಆ್ಯಪ್, ಕೆಲವು ದಿನಗಳಿಂದ ಟ್ರೆಂಡ್ನಲ್ಲಿದೆ. ಪ್ರತಿಯೊಬ್ಬರು ಫೇಸ್ಆ್ಯಪ್ ಮೂಲಕ ತಮ್ಮ ವೃದ್ಧಾಪ್ಯದ ಲುಕ್ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಆದರೆ ಕೆಲವು ಬಳಕೆದಾರರಿಗೆ ಈ ಆ್ಯಪ್ ಬಳಕೆ ಮಾಡುವಲ್ಲಿ ತೊಂದರೆ ಕಾಣಿಸುತ್ತಿದೆ.
ವೃದ್ಧಾಪ್ಯದ ಫಿಲ್ಟರ್ ಮಾತ್ರವಲ್ಲದೇ, ಈ ಆ್ಯಪ್ ಮೂಲಕ ಫೊಟೋದಲ್ಲಿ ನಗುವನ್ನು ಅಧಿಕಗೊಳಿಸಬಹುದು, ಹೇರ್ಸ್ಟೈಲ್ ಹಾಗೂ ಲುಕ್ ಬದಲಾಯಿಸಬಹುದು. ವೃದ್ಧಾಪ್ಯದ ಫಿಲ್ಟರ್ನಂತೆಯೇ ಮಕ್ಕಳಂತೆ ಕಾಣುವ ಫಿಲ್ಟರ್ ಕೂಡಾ ಇದರಲ್ಲಿದೆ.
ಫೇಸ್ಆ್ಯಪ್ ವಿವಾದದಲ್ಲಿ ಸಿಲುಕಿಕೊಂಡಿರುವುದು ಇದೇ ಮೊದಲಲ್ಲ. 2017ರಲ್ಲಿ ಬಳಕೆದಾರರು ತಮ್ಮ ಜನಾಂಗೀಯತೆಯನ್ನು ಬದಲಾಯಿಸುವ ಫಿಲ್ಟರ್ವೊಂದನ್ನು ಇದು ಬಿಡುಗಡೆಗೊಳಿಸಿತ್ತು. ಬಳಿಕ ಬಹಳಷ್ಟು ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ, ಈ ವಿವಾದಾತ್ಮಕ ಫಿಲ್ಟರನ್ನು ಫೇಸ್ಆ್ಯಪ್ ತೆಗೆದು ಹಾಕಿತ್ತು.