ETV Bharat / bharat

ಇಂಧನ ಸುಂಕ ಹೆಚ್ಚಳ ಎಫೆಕ್ಟ್​; ಶೇ 48ರಷ್ಟು ಹೆಚ್ಚುವರಿ ಎಕ್ಸೈಸ್ ತೆರಿಗೆ ಸಂಗ್ರಹ.. ! - ಅಬಕಾರಿ ಸುಂಕ

ಪ್ರಸಕ್ತ ಹಣಕಾಸು ವರ್ಷದಲ್ಲಿ ಅಬಕಾರಿ ಸುಂಕವು ಶೇ 48 ರಷ್ಟು ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ದಾಖಲೆಯ ಮಟ್ಟದಲ್ಲಿ ಹೆಚ್ಚಳವಾದ ಹಿನ್ನೆಲೆ ಅಬಕಾರಿ ಸುಂಕ ಸಂಗ್ರಹದಲ್ಲಿ ಏರಿಕೆಯಾಗಿದೆ.

ಪೆಟ್ರೋಲ್-ಡಿಸೇಲ್
ಪೆಟ್ರೋಲ್-ಡಿಸೇಲ್
author img

By

Published : Jan 17, 2021, 9:16 PM IST

ನವದೆಹಲಿ: ಕೋವಿಡ್​-19 ಸಾಂಕ್ರಾಮಿಕ ಬಿಕ್ಕಟ್ಟಿನಿಂದಾಗಿ ಬಹುತೇಕ ಎಲ್ಲ ಬಗೆಯ ತೆರಿಗೆ ಸಂಗ್ರಹಣೆಗಳಲ್ಲಿ ಇಳಿಕೆಯಾಗಿದ್ದರೂ ದೇಶದ ಎಕ್ಸೈಸ್ ಸುಂಕ ಮಾತ್ರ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 48 ರಷ್ಟು ಏರಿಕೆ ದಾಖಲಿಸಿದೆ. ಪೆಟ್ರೋಲ್ ಹಾಗೂ ಡೀಸೆಲ್​ಗಳ ಮೇಲೆ ದಾಖಲೆಯ ಹೆಚ್ಚು ಪ್ರಮಾಣದ ಎಕ್ಸೈಸ್ ಸುಂಕ ವಿಧಿಸಿದ್ದರಿಂದ, ಅವೆರಡೂ ತೈಲಗಳ ಮಾರಾಟ ಹಿಂದಿನ ಸಾಲಿಗಿಂತ ಕಡಿಮೆಯಾಗಿದ್ದರೂ ತೆರಿಗೆ ಸಂಗ್ರಹ ಮಾತ್ರ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ.

ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (ಸಿಜಿಎ) ಅಂಕಿಅಂಶಗಳ ಪ್ರಕಾರ, 2020 ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಅಬಕಾರಿ ಸುಂಕದ ಸಂಗ್ರಹ 1,96,342 ಕೋಟಿ ರೂ. ಆಗಿತ್ತು. 2019 ರಲ್ಲಿ ಇದು 1,32,899 ಕೋಟಿ ರೂ. ಇತ್ತು.

ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಕೋಶ (ಪಿಪಿಎಸಿ) ದ ಅಂಕಿಅಂಶಗಳ ಪ್ರಕಾರ, 2020 ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಡೀಸೆಲ್ ಮಾರಾಟವು 44.9 ಮಿಲಿಯನ್ ಟನ್​ನಷ್ಟಿತ್ತು.

ಪೆಟ್ರೋಲ್ ಬಳಕೆ 17.4 ಮಿಲಿಯನ್ ಟನ್​​ಗಳಷ್ಟು ಕಡಿಮೆಯಾಗಿದ್ದು, 2019 ಏಪ್ರಿಲ್-ನವೆಂಬರ್ ಅವಧಿಯಲ್ಲಿ 20.4 ಮಿಲಿಯನ್ ಟನ್ ಮಾರಾಟವಾಗಿದೆ.

ಕಳೆದ ವರ್ಷ ಮಾರ್ಚ್ ಮತ್ತು ಮೇ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯ ದಾಖಲೆಯ ಹೆಚ್ಚಳದಿಂದಾಗಿ ಅಬಕಾರಿ ಸುಂಕ ಹೆಚ್ಚಳವಾಗಿದೆ ಎಂದು ಕೈಗಾರಿಕಾ ಮೂಲಗಳು ತಿಳಿಸಿವೆ.

ಓದಿ:ಬಳಕೆದಾರರಿಗೆ ಮನವೊಲಿಸುವ ಯತ್ನ: ವಾಟ್ಸಪ್​ನಿಂದ 'ಸ್ಟೇಟಸ್' ಸಂಧಾನ

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಎರಡು ದಶಕಗಳ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಇದರ ಲಾಭ ಪಡೆಯುವ ದೃಷ್ಟಿಯಿಂದ ಸರ್ಕಾರವು ಪೆಟ್ರೋಲ್‌ ಮೇಲೆ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 13 ರೂ. ಮತ್ತು ಡೀಸೆಲ್‌ಗೆ 16 ರೂ. ಏರಿಕೆ ಮಾಡಿತ್ತು. ಪೆಟ್ರೋಲ್‌ನ ಒಟ್ಟು ಅಬಕಾರಿ ಸುಂಕವು ಪ್ರತಿ ಲೀಟರ್‌ಗೆ 32.98 ರೂ.ಗೆ ಮತ್ತು ಡೀಸೆಲ್‌ನಲ್ಲಿ ಲೀಟರ್‌ಗೆ 31.83 ರೂ.ಗೆ ಏರಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್​ಗೆ 84.70 ಮತ್ತು ಒಂದು ಲೀಟರ್ ಡೀಸೆಲ್ ಬೆಲೆ 74.88 ರೂ. ಇದೆ.

ಕೇಂದ್ರ ಅಬಕಾರಿ ಸುಂಕವು ಶೇ.39 ರಷ್ಟು ಪೆಟ್ರೋಲ್​ ಮತ್ತು ಶೇ.42.5 ರಷ್ಟು ಡೀಸೆಲ್​ನನ್ನು ಹೊಂದಿರುತ್ತದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಅನ್ನು ಪರಿಗಣಿಸಿದ ನಂತರ, ಬೆಲೆಯಲ್ಲಿನ ಒಟ್ಟು ತೆರಿಗೆ ಪ್ರಮಾಣವು ಚಿಲ್ಲರೆ ದರದಲ್ಲಿ ಮೂರನೇ ಎರಡರಷ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.