ETV Bharat / bharat

ತಬ್ಲೀಘಿ ಜಮಾತ್​ ಸ್ಥಾಪನೆಯಾಗಿದ್ದು ಹರಿಯಾಣದಲ್ಲಿ; ಈಟಿವಿ ಭಾರತ್​ ಸಂಪೂರ್ಣ ಮಾಹಿತಿ - ಕಾಂಡ್ಲಾ ಗ್ರಾಮ

ದೆಹಲಿಯ ನಿಜಾಮುದ್ದೀನ್​ ಪ್ರದೇಶದಲ್ಲಿ ಧಾರ್ಮಿಕ ಸಮಾವೇಶ ನಡೆಸಿ ಕೊರೊನಾ ವೈರಸ್​ ವ್ಯಾಪಕವಾಗಿ ಹರಡಿದ ನಂತರ ತಬ್ಲೀಘಿ ಜಮಾತ್​ ಈಗ ಬಹಳೇ ಸುದ್ದಿಯಲ್ಲಿದೆ. ಆದರೆ ಈ ತಬ್ಲೀಘಿ ಜಮಾತ್ ಎಂದರೇನು? 1000ಕ್ಕೂ ಹೆಚ್ಚು ಜನರಿಗೆ ಮಾರಣಾಂತಿಕ ಕೋವಿಡ್​-19 ಸೋಂಕು ಹರಡಲು ಕಾರಣವಾದ ಈ ಜಮಾತ್​ ಸ್ಥಾಪಿಸಿದವರು ಯಾರು? ನಿಮ್ಮ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದೆ ಈಟಿವಿ ಭಾರತ್​.

Tablighi Jamaat founded in Haryana
Tablighi Jamaat founded in Haryana
author img

By

Published : Apr 4, 2020, 7:01 PM IST

Updated : Apr 4, 2020, 7:12 PM IST

ಹೈದರಾಬಾದ್​: ದೆಹಲಿಯ ನಿಜಾಮುದ್ದೀನ್​ ಪ್ರದೇಶದಲ್ಲಿ ಧಾರ್ಮಿಕ ಸಮಾವೇಶ ನಡೆಸಿ ಕೊರೊನಾ ವೈರಸ್​ ವ್ಯಾಪಕವಾಗಿ ಹರಡಿದ ನಂತರ ತಬ್ಲೀಘಿ ಜಮಾತ್​ ಈಗ ಬಹಳೇ ಸುದ್ದಿಯಲ್ಲಿದೆ. ಆದರೆ ಈ ತಬ್ಲೀಘಿ ಜಮಾತ್ ಎಂದರೇನು? 1000 ಕ್ಕೂ ಹೆಚ್ಚು ಜನರಿಗೆ ಮಾರಣಾಂತಿಕ ಕೋವಿಡ್​-19 ಸೋಂಕು ಹರಡಲು ಕಾರಣವಾದ ಈ ಜಮಾತ್​ ಸ್ಥಾಪಿಸಿದವರು ಯಾರು? ನಿಮ್ಮ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದೆ ಈಟಿವಿ ಭಾರತ್​.

ತಬ್ಲೀಘಿ ಜಮಾತ್​ ಎಂದರೇನು?

ತಬ್ಲೀಘಿ ಜಮಾತ್​ ಇದೊಂದು ಇಸ್ಲಾಮಿಕ್​ ಮತಪ್ರಚಾರಕ ಚಳವಳಿಯಾಗಿದೆ. ಪ್ರವಾದಿ ಮಹಮ್ಮದರ ಕಾಲದಲ್ಲಿ ಪಾಲಿಸಲಾಗುತ್ತಿದ್ದ ರೀತಿಯಲ್ಲೇ ಈಗಲೂ ಇಸ್ಲಾಂ ಧರ್ಮವನ್ನು ಮುಸಲ್ಮಾನರು ಪಾಲಿಸಬೇಕೆಂಬ ಗುರಿ ಇದರದಾಗಿದೆ. ಅದರಲ್ಲೂ ನಿರ್ದಿಷ್ಟವಾಗಿ ಧರ್ಮಾಚರಣೆಗಳು, ವೇಷ ಭೂಷಣ ಮತ್ತು ವೈಯಕ್ತಿಕ ನಡವಳಿಕೆಗಳ ವಿಷಯಗಳನ್ನು ಇದು ಪ್ರತಿಪಾದಿಸುತ್ತದೆ.

ದೇವಬಂದಿ ಇಸ್ಲಾಮಿಕ್​ ವಿದ್ವಾಂಸ ಮುಹಮ್ಮದ್ ಇಲಿಯಾಸ್ ಅಲ್​-ಕಂಧಲಾವಿ ಎಂಬುವರು ಇದನ್ನು 1926ನೇ ಇಸ್ವಿಯಲ್ಲಿ ಮೇವಾತ್​ನಲ್ಲಿ ಆರಂಭಿಸಿದರು.

ತಬ್ಲೀಘಿ ಜಮಾತ್​ ಪ್ರಾರಂಭಿಸಿದವರು ಯಾರು?

ತಬ್ಲೀಘಿ ಜಮಾತನ್ನು ಹರಿಯಾಣದ ಮೇವಾತ್​ ಪ್ರದೇಶದಲ್ಲಿ 1926 ರಲ್ಲಿ ಹಜರತ್ ಮೌಲಾನಾ ಮೊಹಮ್ಮದ್ ಇಲಿಯಾಸ್ ರಹಮತುಲ್ಲಾಹಲೇಹ ಎಂಬುವರು ಆರಂಭಿಸಿದರು. ಇವರು ಮರ್ಕಜ್ ನಿಲಾಮುದ್ದೀನ್ ಮೌಲಾನಾ ಸಾದ್​ ಅವರ ಪೂರ್ವಜರಾಗಿದ್ದಾರೆ.

ಪ್ರಸ್ತುತ ಯೋಗಿ ಆದಿತ್ಯನಾಥ್ ಆಡಳಿತವಿರುವ ಉತ್ತರ ಪ್ರದೇಶದಲ್ಲಿನ ಕಾಂಡ್ಲಾ ಗ್ರಾಮವು ಮೌಲಾನಾ ಸಾದ್​ ಅವರ ವಂಶಸ್ಥರ ಊರು ಎಂದು ಹೇಳಲಾಗಿದೆ. ನಿಜಾಮುದ್ದೀನ್​ನಲ್ಲಿರುವ ಮರ್ಕಜ್​ ಮೌಲಾನಾ ಸಾದ್​ ಕುಟುಂಬದ ಮಾಲೀಕತ್ವಕ್ಕೆ ಒಳಪಟ್ಟಿದ್ದು, ಅವರ ನಿಯಂತ್ರಣದಲ್ಲಿದೆ.

ತಬ್ಲೀಘಿ ಜಮಾತ್​ನ ಮೊದಲ ಸಮಾವೇಶ 1941 ರಲ್ಲಿ ನಡೆದಿದ್ದು, 25,000 ಜನ ಭಾಗವಹಿಸಿದ್ದರು ಎಂದು ಹೇಳಲಾಗುತ್ತದೆ. 1940 ರವರೆಗೆ ಜಮಾತ್​ನ ಕಾರ್ಯಚಟುವಟಿಕೆಗಳು ಅವಿಭಜಿತ ಭಾರತಕ್ಕೆ ಮಾತ್ರ ಸೀಮಿತವಾಗಿದ್ದವು. ನಂತರ ವರ್ಷಗಳು ಕಳೆದಂತೆ ಜಾಗತಿಕ ಮಟ್ಟದಲ್ಲಿ ಇದರ ಪ್ರಭಾವ ಬೆಳೆಯಿತು.

ಜಮಾತ್​ನ ಕಾರ್ಯವೈಖರಿ ಹೇಗಿರುತ್ತದೆ?

ಜಮಾತ್​ ಶಾಂತಿಯುತವಾಗಿ ಕೆಲಸ ಮಾಡುತ್ತದೆ ಹಾಗೂ ಜಗತ್ತಿನ ಎಲ್ಲ ಮುಸ್ಲಿಮರನ್ನು ತಲುಪುವ ಗುರಿಯನ್ನು ಹೊಂದಿದೆ. ಅಲ್ಲಾಹುವಿನ ಸಂದೇಶಗಳನ್ನು ಪ್ರಚಾರ ಮಾಡುವಂತೆ ಎಲ್ಲ ಮುಸಲ್ಮಾನರಿಗೆ ಪ್ರವಾದಿ ಮಹಮ್ಮದರು ಆದೇಶಿಸಿದ್ದು, ಇದನ್ನು ನೆರವೇರಿಸುವುದನ್ನು ತನ್ನ ಕರ್ತವ್ಯವೆಂದು ಜಮಾತ್ ತಿಳಿದುಕೊಂಡಿದೆ. ಜಮಾತ್​ನಲ್ಲಿ ಪಾಲ್ಗೊಳ್ಳುವವರು ಸ್ಥಳೀಯ ಮಸೀದಿಗಳಲ್ಲೇ ವಾಸ ಮಾಡಬೇಕೆಂದು ಜಮಾತ್​ ಸೂಚಿಸುತ್ತದೆ.

ತಬ್ಲೀಘಿ ಜಮಾತ್​ ವಿಷಯ ದಿಢೀರ್​ ಪ್ರಚಲಿತಕ್ಕೆ ಬಂದಿದ್ದು ಯಾಕೆ?

ಇಸ್ಲಾಮಿಕ್​ ಸುಧಾರಣಾವಾದಿ ಸಂಘಟನೆಯಾದ ತಬ್ಲೀಘಿ ಜಮಾತ್​ ಮಾರ್ಚ್​ 13 ರಂದು ನಿಜಾಮುದ್ದೀನ್​ನಲ್ಲಿ ಬೃಹತ್ ಸಮಾವೇಶ ಆಯೋಜಿಸಿತ್ತು. ಇದರಲ್ಲಿ ಸ್ಥಳೀಯರು ಸೇರಿದಂತೆ ಇಂಡೋನೇಶಿಯಾ, ಸೌದಿ ಅರೇಬಿಯಾ, ಕಿರ್ಗಿಸ್ತಾನ್ ಮತ್ತು ಮಲೇಶಿಯಾ ದೇಶಗಳಿಂದ ಬಂದಿದ್ದ ವಿದೇಶಿಯರು ಸೇರಿ 3,000 ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಆದರೆ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದ 1000 ಕ್ಕೂ ಹೆಚ್ಚು ಜನರಿಗೆ ಕೋವಿಡ್​-19 ಸೋಂಕು ತಗುಲಿರುವುದು ದೃಢ ಪಟ್ಟಿದ್ದು, ಎಲ್ಲೆಡೆ ಆತಂಕ ಮೂಡಿಸಿದೆ.

Last Updated : Apr 4, 2020, 7:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.