ಪ್ಲಾಸ್ಟಿಕ್ ಚಿಂದಿ ಆಯುವವನಾಗಿ ಬದಲಾದ ಎಂಜಿನಿಯರ್:
ಅಸ್ತವ್ಯಸ್ಥ ಕಳಾಹೀನ ಬಟ್ಟೆ ಹೇಳುತ್ತೆ ಈತ ಚಿಂದಿ ಆಯೋನು ಎಂದು. ಆದರೆ, ಈತ ಎಂಜಿನಿಯರ್ ಅನ್ನೋದು ಅಷ್ಟೇ ನಿಜ. ಅಚ್ಚರಿ ಅನ್ನಿಸ್ತಿದೆ ಅಲ್ವೇ.. ಒಡಿಶಾದ ಬಾಲಸೋರ್ ಜಿಲ್ಲೆ ಎಂಜಿನಿಯರಿಂಗ್ ಪದವೀಧರ ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮದ ಅರಿವು ಮೂಡಿಸಲು ಪ್ಲಾಸ್ಟಿಕ್ ಚಿಂದಿ ಆಯ್ತಿದಾನೆ.
ಅಭಿಮನ್ಯು ಆರಿಸಿಕೊಂಡಿರೋದು ಸಾಮಾಜಿಕ ಸೇವೆ: ಹೆಸರು ಅಭಿಮನ್ಯು ಮಿಶ್ರ. ಕೈತುಂಬ ಸಂಬಳ ಎಣಿಸುವ ಐಟಿ ಉದ್ಯೋಗ ಮಾಡದೆ ಸಾಮಾಜಿಕ ಕಳಕಳಿ ತೋರಿಸುತ್ತಿದಾನೆ. ನಿಸರ್ಗ ಮನುಷ್ಯನ ಅವಶ್ಯಕತೆ ಪೂರೈಸುತ್ತೆ ಹೊರತು ದುರಾಸೆಯನ್ನಲ್ಲ. ಹೀಗಾಹಿ ನೈಸರ್ಗಿಕ ಸಂಪನ್ಮೂಲ ಮಿತವಾಗಿ ಬಳಸಿ ಪ್ರಕೃತಿ ಉಳಿಸಬೇಕು ಅನ್ನೋದನ್ನು ಧೃಡವಾಗಿ ನಂಬಿರೋ ಅಭಿಮನ್ಯು ಹೇಳೋದಕ್ಕಿಂತ ತಾನೇ ಮೊದಲು ಪ್ರಕೃತಿ ರಕ್ಷಣೆಗೆ ಮುಂದಾಗಿದಾರೆ.
ಅಭಿಮನ್ಯು ವೇಷ ನೋಡಿ ಅವನನ್ನು ಹುಚ್ಚ ಎಂದವರೇ ಹೆಚ್ಚು: ಕಳೆದ 2 ವರ್ಷಗಳಿಂದ ಥೇಟ್ ಪ್ಲಾಸ್ಟಿಕ್ ಕಸ ಆರಿಸುವವನಾಗಿ ಬದಲಾಗಿದಾರೆ. ಬಾಟಲಿ, ವಸ್ತುಗಳನ್ನು ಮೈಮೇಲೆ ಹಾಕಿಕೊಂಡು ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಮೂಡಿಸ್ತಿದಾರೆ. ಜತೆಗೆ ವಿವಿಧ ಎನ್‌ಜಿಒಗಳು ನಡೆಸುವ ಅಭಿಯಾನಗಳಲ್ಲೂ ತೊಡಗಿಸಿಕೊಂಡಿದಾರೆ.
ಪ್ರಕೃತಿ ಹಾಳು ಮಾಡುವವರು ಬೆಟ್ಟದಷ್ಟಿದ್ರೂ ಅಭಿಮನ್ಯು ಅವರಂತಹ ಎಷ್ಟೋ ಮಂದಿ ಪರಿಸರ ಕಾಪಾಡಲು ಪಣ ತೊಟ್ಟಿದಾರೆ. ಸಾಮಾಜಿಕ ಹೊಣೆಗಾರಿಕೆಯುಳ್ಳ ಇಂತಹ ವಿದ್ಯಾವಂತರ ಸಂಖ್ಯೆ ಇನ್ನಷ್ಟು ಮತ್ತಷ್ಟು ಹೆಚ್ಚಬೇಕಿದೆ..