ಶ್ರೀನಗರ: ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಉಗ್ರರು ಮತ್ತು ಭದ್ರತಾ ಪಡೆ ನಡುವೆ ಗುಂಡಿನ ಕಾಳಗ ನಡೆಯುತ್ತಿದೆ.
ಬಾರಾಮುಲ್ಲಾ ಜಿಲ್ಲೆಯ ಯೆಡಿಪೊರಾ ಮತ್ತು ಪಟ್ಟಣ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭಾರತೀಯ ಸೇನೆ, ತಕ್ಷಣವೇ ಈ ಪ್ರದೇಶವನ್ನು ಸುತ್ತುವರೆದಿದೆ. ಭಯೋತ್ಪಾದಕರು ಯೋಧರ ಮೇಲೆ ಫೈರಿಂಗ್ ಮಾಡಲು ಶುರು ಮಾಡಿದಾಗ ಭದ್ರತಾ ಪಡೆ ತಿರುಗೇಟು ನೀಡಿದೆ.
ಎನ್ಕೌಂಟರ್ ವೇಳೆ ಸೇನಾಧಿಕಾರಿಯೊಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳದಲ್ಲಿ ಗುಂಡಿನ ಚಕಮಕಿ ಮುಂದುವರೆದಿದೆ. ಉಗ್ರರನ್ನು ಹೊಸಕಿಹಾಕಲು ಹೆಚ್ಚುವರಿ ಪಡೆಗಳನ್ನು ಭಾರತೀಯ ಸೇನೆ ಸ್ಥಳಕ್ಕೆ ಕರೆಸಿಕೊಂಡಿದೆ.