ETV Bharat / bharat

ಮುಂದುವರಿದ ಆನೆಗಳ ಸಾವಿನ ಸರಣಿ: ಧಮ್ತರಿಯಲ್ಲಿ ಮರಿ ಆನೆ ಸಾವು - ಜೌಗು ಪ್ರದೇಶದಲ್ಲಿ ಸಿಲುಕಿ ಆನೆ ಸಾವು ನ್ಯೂಸ್​

ಛತ್ತೀಸ್​​ಗಢದ ಧಮ್ತರಿ ಅರಣ್ಯ ವ್ಯಾಪ್ತಿಯಲ್ಲಿ ಜೌಗು ಪ್ರದೇಶದಲ್ಲಿ ಸಿಲುಕಿಕೊಂಡು ಮೇಲೇಳಲಾಗದೇ ಆನೆಮರಿಯೊಂದು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

elephant death in dhamtari
ಮರಿ ಆನೆ ಸಾವು
author img

By

Published : Jun 16, 2020, 10:53 AM IST

ರಾಯಗಢ(ಛತ್ತೀಸ್​​ಗಢ): ರಾಜ್ಯದಲ್ಲಿ ಆನೆಗಳ ಸಾವು ಮುಂದುವರೆದಿದ್ದು, ರಾಯ್​​ಗಢ ನಂತರ, ಈಗ ಧಮ್ತರಿಯಲ್ಲಿ ಮರಿ ಆನೆಯೊಂದು ಮರಣ ಹೊಂದಿರುವುದು ಬೆಳಕಿಗೆ ಬಂದಿದೆ.

elephant death in dhamtari
ಮರಿ ಆನೆ ಸಾವು

ಜೌಗು ಪ್ರದೇಶದಲ್ಲಿ ಸಿಲುಕಿಕೊಂಡು ಮೇಲೇಳಲಾಗದೇ ಆನೆಮರಿಯೊಂದು ಸಾವನ್ನಪ್ಪಿದೆ. ಉರರ್ಪುಟ್ಟಿ ಗ್ರಾಮದ ಅರಣ್ಯದಲ್ಲಿ ಈ ಘಟನೆ ನಡೆದಿದೆ. ಘಟನೆ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ.

ಸುಮಾರು 21 ಆನೆಗಳ ತಂಡವು ಗರಿಯಾಬಂದ್ ಜಿಲ್ಲೆಯಿಂದ ಧಮ್ತಾರಿವರೆಗೆ ಸಂಚಾರ ನಡೆಸುತ್ತಿದ್ದು, ಒಂದು ವಾರದಿಂದ ಈ ಆನೆಗಳ ಗುಂಪು ಧಮ್ತರಿ ಕಾಡುಗಳಲ್ಲಿ ಓಡಾಡುತ್ತಿದೆ. ಈ ಗುಂಪಿನಲ್ಲಿದ್ದ ಮರಿ ಆನೆಯೊಂದು ಈಗ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.