ಕೊಲ್ಲಂ(ಕೇರಳ): ಕೊಲ್ಲಂ ಜಿಲ್ಲೆಯಲ್ಲಿ ಮೊದಲ ವಿದ್ಯುತ್ ಚಾರ್ಜಿಂಗ್ ಕೇಂದ್ರವು ಕಾರ್ಯಾಚರಣೆ ಪ್ರಾರಂಭಿಸಲು ಸಜ್ಜಾಗಿದ್ದು, ಅಧಿಕೃತ ಅನುಮೋದನೆಗಾಗಿ ಕಾಯುತ್ತಿದೆ. ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಜನರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದರಿಂದಾಗಿ ಮಾಲಿನ್ಯ ಕಡಿಮೆಯಾಗುತ್ತದೆ.
ಕೊಲ್ಲಂನಲ್ಲಿರುವ ಈ ನಿಲ್ದಾಣವನ್ನು ಇಲ್ಲಿನ ಹೈಸ್ಕೂಲ್ ಜಂಕ್ಷನ್ ಬಳಿಯ ಒಲೈಲ್ ಸೆಕ್ಷನ್ ಕಚೇರಿಯಲ್ಲಿ ಸಿದ್ಧಪಡಿಸಲಾಗಿದೆ. 80 ಕಿಲೋವಾಟ್ಸ್ ಸಾಮರ್ಥ್ಯವಿರುವ ಎರಡು ವಾಹನಗಳು ಒಂದೇ ಸಮಯದಲ್ಲಿ ವಿದ್ಯುತ್ ರಿಚಾರ್ಜ್ ಮಾಡಬಹುದು. 30 ಲಕ್ಷ ರೂ.ಗಳ ವೆಚ್ಚದಲ್ಲಿ ಈ ಸೌಲಭ್ಯವನ್ನು ಸ್ಥಾಪಿಸಲಾಗಿದ್ದು, ಎರಡು ಭರ್ತಿ ಘಟಕಗಳು ಕ್ರಮವಾಗಿ 60 ಕಿಲೋವ್ಯಾಟ್ ಮತ್ತು 20 ಕಿಲೋವ್ಯಾಟ್ ಹೊಂದಿದೆ.
ಎಲೆಕ್ಟ್ರಿಕ್ ಸ್ಕೂಟರ್‌ಗಳು 20 ಕಿ.ವ್ಯಾಟ್ ಭರ್ತಿ ಮಾಡುವ ಘಟಕದಿಂದ ವಿದ್ಯುತ್ ತುಂಬಿದರೆ, ಕಾರುಗಳು 60 ಕಿ.ವ್ಯಾ ಘಟಕದಿಂದ ಚಾರ್ಜ್ ಮಾಡಬಹುದು. ದರಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. 2022ರ ವೇಳೆಗೆ 10 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ರಾಜ್ಯ ರಸ್ತೆಗಳಿಗೆ ಬರುತ್ತವೆ ಎಂದು ಕೇರಳ ಮುಖ್ಯಮಂತ್ರಿ ಈ ಹಿಂದೆ ಹೇಳಿಕೆ ನೀಡಿದ್ದರು.
ಎಲೆಕ್ಟ್ರಿಕ್ ವಾಹನಗಳ ಬಳಕೆಯು ಪರಿಸರ ಮಾಲಿನ್ಯವನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ. ತಿರುವನಂತಪುರಂ, ಎರ್ನಾಕುಲಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಈಗಾಗಲೇ ವಿದ್ಯುತ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.