ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿಯಾಗಲಿದೆ. ಮಧ್ಯಾಹ್ನ 12:30ಕ್ಕೆ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ಕರೆದಿದೆ. ವಿಶ್ವಾದ್ಯಂತ ಹಬ್ಬಿರುವ ಕೊರೊನಾ ವೈರಸ್ ಆತಂಕದ ಮಧ್ಯೆ ನಡೆಯಲಿರುವ ಪ್ರಮುಖ ರಾಜ್ಯವೊಂದರ ಮೊದಲ ವಿಧಾನಸಭೆ ಚುನಾವಣೆ ಇದಾಗಿದೆ.
-
Election Commission's press conference to be held over #BiharElections : Sheyphali Sharan, Official Spokesperson, Election Commission of India https://t.co/Bl9jJJxGNy
— ANI (@ANI) September 25, 2020 " class="align-text-top noRightClick twitterSection" data="
">Election Commission's press conference to be held over #BiharElections : Sheyphali Sharan, Official Spokesperson, Election Commission of India https://t.co/Bl9jJJxGNy
— ANI (@ANI) September 25, 2020Election Commission's press conference to be held over #BiharElections : Sheyphali Sharan, Official Spokesperson, Election Commission of India https://t.co/Bl9jJJxGNy
— ANI (@ANI) September 25, 2020
ನವೆಂಬರ್ 29ರ ಒಳಗಡೆ ಬಿಹಾರದಲ್ಲಿ ಹೊಸ ಸರ್ಕಾರ ಅಸ್ವಿತ್ವಕ್ಕೆ ಬರಬೇಕಿದೆ. ಒಟ್ಟು ಮೂರು ಹಂತಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕಳೆದ ಬಾರಿ 5 ಹಂತಗಳಲ್ಲಿ ಚುನಾವಣೆ ನಡೆದಿತ್ತು.
ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ಬೆಂಬಲದೊಂದಿಗೆ ಮೈತ್ರಿ ಸರ್ಕಾರವನ್ನು ಮುನ್ನಡೆಸುತ್ತಿದ್ದು, ನಾಲ್ಕನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ಹುಮ್ಮಸ್ಸಿನಲ್ಲಿದ್ದಾರೆ. ಪ್ರತಿಪಕ್ಷಗಳಾದ ಆರ್ಜೆಡಿ ಮತ್ತು ಕಾಂಗ್ರೆಸ್ ಸವಾಲುಗಳನ್ನು ದಾಟಿ ನಿತೀಶ್ ಕುಮಾರ್ ಮುನ್ನಡೆಯಬೇಕಿದೆ. ಲಾಲು ಪ್ರಸಾದ್ ಯಾದವ್ ಜೈಲಿನಲ್ಲಿರುವುದು ಆರ್ಜೆಡಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ.