ಚೆನ್ನೈ(ತಮಿಳುನಾಡು): 56 ವರ್ಷದ ಕಾಮುಕನೋರ್ವ 16 ವರ್ಷದ ಶಾಲಾ ಬಾಲಕಿಯನ್ನ ಮದುವೆಯಾಗುವುದಾಗಿ ನಂಬಿಸಿ, ಆಕೆಯ ಮೇಲೆ ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿರುವ ಘಟನೆ ತಮಿಳುನಾಡಿನ ಲಕ್ಕಪುರಂನಲ್ಲಿ ನಡೆದಿದೆ.
ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿದ್ದು, ತನ್ನ ಮನೆಯಲ್ಲೇ ಕಳೆದ ಕೆಲ ತಿಂಗಳಿಂದ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ಜತೆಗೆ ಬಾಲಕಿಗೆ ಒಂದು ಸಲ ಗರ್ಭಧಾರಣೆ ಮಾಡಿಸಿದ್ದಾನೆ. ಇದರ ಬಗ್ಗೆ ಪೋಷಕರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈಗಾಗಲೇ ವ್ಯಕ್ತಿಯ ಬಂಧನ ಮಾಡಲಾಗಿದ್ದು, ಆತನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ವ್ಯಕ್ತಿ ಪ್ಯಾಕ್ಟರಿವೊಂದರಲ್ಲಿ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದನು. ತನ್ನ ಮನೆಯ ಸಮೀಪದಲ್ಲೇ ವಾಸವಾಗಿದ್ದ 16 ವರ್ಷದ ಬಾಲಕಿ ಮೇಲೆ ಈ ಕೃತ್ಯವೆಸಗಿದ್ದಾನೆ.