ETV Bharat / bharat

ಓಪನ್​ ಸ್ಕೂಲಿಂಗ್​ಗೆ ಮತ್ತಷ್ಟು ಒತ್ತು.. NIOS ‘ಏಕಲವ್ಯ’ ಕೋರ್ಸ್​ ಆರಂಭ..

ಶಿಕ್ಷಣ ಸಚಿವಾಲಯವು ವೃತ್ತಿಪರ ಕೋರ್ಸ್​​ಗಳಿಗೆ ಹೆಚ್ಚಿನ ಒತ್ತು ನೀಡಲು ಏಕಲವ್ಯ ಎಂಬ ಆನ್ಲೈನ್ ಕೋರ್ಸ್​ಗಳನ್ನ ಪ್ರಾರಂಭಿಸಿದೆ. ಇದು ದ್ವಿತೀಯ ಮತ್ತು ಸೀನಿಯರ್​​ ಸೆಕೆಂಡರಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

Secondary
ವೃತ್ತಿಪರ ಶಿಕ್ಷಣಕ್ಕೆ ಒತ್ತು
author img

By

Published : Oct 26, 2020, 5:48 PM IST

ದೆಹಲಿ: ಶಿಕ್ಷಣ ಸಚಿವಾಲಯವು ನ್ಯಾಷನಲ್​ ಇನ್ಸ್​ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ​​(NIOS) ಉಪಕ್ರಮದಡಿ ಏಕಲವ್ಯ ಎಂಬ ಆನ್ಲೈನ್ ಕೋರ್ಸ್ ಪ್ರಾರಂಭಿಸಿದೆ. ಈ ಮೂಲಕ ದ್ವಿತೀಯ ಮತ್ತು ಸೀನಿಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ ಓಪನ್ ಆನ್ಲೈನ್ ಕೋರ್ಸ್​ಗಳತ್ತ ಉತ್ತೇಜಿಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಡಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 1989 ರ ನವೆಂಬರ್​ನಲ್ಲಿ ನ್ಯಾಷನಲ್ ಇನ್ಸ್​ಟಿಟ್ಯೂಟ್​ ಆಫ್ ಓಪನ್ ಸ್ಕೂಲಿಂಗ್ ಅನ್ನು ಆರಂಭಿಸಿತು.

ಏಕಲವ್ಯ ದ್ವಿತೀಯ ಮತ್ತು ಹಿರಿಯ ಮಾಧ್ಯಮಿಕ ಮಟ್ಟದಲ್ಲಿ ಸಾಮಾನ್ಯ ಮತ್ತು ಶೈಕ್ಷಣಿಕ ಕೋರ್ಸ್‌ಗಳಲ್ಲದೆ ಸಮುದಾಯ ಆಧಾರಿತ ಮತ್ತು ವೃತ್ತಿಪರ ಶಿಕ್ಷಣವನ್ನು ನೀಡಲಿದೆ. ‘ಏಕಲವ್ಯ’ ತನ್ನ ಮೂಲ ಶಿಕ್ಷಣ ಕಾರ್ಯಕ್ರಮಗಳ (ಒಬಿಇ) ಮೂಲಕ ಪ್ರಾಥಮಿಕ ಹಂತದ ಕೋರ್ಸ್‌ಗಳನ್ನು ಸಹ ನೀಡುತ್ತದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್‌ಐಒಎಸ್) ಏಕಲವ್ಯ, ಬೃಹತ್ ಮುಕ್ತ ಆನ್‌ಲೈನ್ ಕೋರ್ಸ್‌ಗಳನ್ನು (ಎಂಒಒಸಿ) ವಿಶೇಷವಾಗಿ ದ್ವಿತೀಯ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಪ್ರಾರಂಭಿಸಿತು.

ಶಾಲಾ ಮಟ್ಟದಲ್ಲಿ ಮುಕ್ತ ಮತ್ತು ದೂರಶಿಕ್ಷಣ (ಒಡಿಎಲ್) ವ್ಯವಸ್ಥೆಯ ಮೂಲಕ ತಮ್ಮ ಅಧ್ಯಯನವನ್ನು ಮುಂದುವರಿಸುತ್ತಿರುವ ವಿದ್ಯಾರ್ಥಿಗಳಿಗೆ ಈ ಆನ್‌ಲೈನ್ ಕೋರ್ಸ್‌ಗಳು ಅನುಕೂಲವಾಗಲಿವೆ.

ಇನ್ಸ್​ಟಿಟ್ಯೂಟ್​​ ನೀಡಿರುವ ಕೋರ್ಸ್‌ಗಳಿಗೆ ನೋಂದಣಿ ಮಾಡಿಕೊಳ್ಳಲು ವಿದ್ಯಾರ್ಥಿಗಳು http://mooc.nios.ac.in/mooc/ ಈ ವೆಬ್​​ಸೈಟ್​​ ಗೆ ಭೇಟಿ ನೀಡಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.