ETV Bharat / bharat

ಫಿಲ್ಯಾಂಡರ್​​​-ಮಹಾರಾಜ್​ ಬ್ಯಾಟಿಂಗ್​​ನಿಂದ ನಮ್ಮಲ್ಲಿರುವ ಅಹಂ ಕಡಿಮೆಯಾಗಲಿ: ಬಾವುಮಾ - ಫಿಲ್ಯಾಂಡರ್​ ಹಾಗೂ ಕೇಶವ್​ ಮಹಾರಾಜ್​

ಭಾರತದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಹರಿಣಗಳ ತಂಡದ ಬ್ಯಾಟಿಂಗ್​ ವೈಫಲ್ಯ ಮುಂದುವರಿದಿದೆ. ಇದೇ ವಿಷಯವಾಗಿ ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮನ್​ ಮಾತನಾಡಿದ್ದಾರೆ.

ಫಿಲ್ಯಾಂಡರ್​​-ಕೇಶವ್​ ಮಹಾರಾಜ್​
author img

By

Published : Oct 12, 2019, 10:53 PM IST

ಪುಣೆ: ಟೀಂ ಇಂಡಿಯಾ ವಿರುದ್ಧದ ಎರಡನೇ ಟೆಸ್ಟ್​​ ಪಂದ್ಯದಲ್ಲೂ ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕದ ಬ್ಯಾಟ್ಸಮನ್​​ಗಳು ವೈಫಲ್ಯ ಅನುಭವಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹರಿಣಗಳ ತಂಡದ ಬ್ಯಾಟ್ಸ್​ಮನ್​ ಮಾತನಾಡಿದ್ದಾರೆ.

ಟೀಂ ಇಂಡಿಯಾದ 601ರನ್​ಗಳಿಗೆ ಉತ್ತರ ನೀಡಲು ಮುಂದಾದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್​​ನಲ್ಲಿ 168ರನ್​ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 8ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇನ್ನೇನು ಉಳಿದೆರಡು ವಿಕೆಟ್​ಗಳನ್ನ 200ರ ಗಡಿಯೊಳಗೆ ಟೀಂ ಇಂಡಿಯಾ ಆಲೌಟ್​ ಮಾಡಲಿದೆ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಆದರೆ ಈ ವೇಳೆ 9ನೇ ವಿಕೆಟ್​ಗೆ ಒಂದಾದ ಫಿಲ್ಯಾಂಡರ್​ ಹಾಗೂ ಕೇಶವ್​ ಮಹಾರಾಜ್​ ತಂಡಕ್ಕೆ ಯಾರೋ ಊಹೆ ಮಾಡದ ರೀತಿಯಲ್ಲಿ ಚೇತರಿಕೆ ನೀಡಿದ್ರು. ಈ ಜೋಡಿ ಬರೋಬ್ಬರಿ 109 ರನ್​ಗಳ ಜೊತೆಯಾಟ ನೀಡಿದರು. ಫಿಲ್ಯಾಂಡರ್​​ 44ರನ್​ಗಳಿಕೆ ಮಾಡಿದರೆ, ಮಹಾರಾಜ್​ 72ರನ್​ಗಳಿಕೆ ಮಾಡಿದರು. ಹೀಗಾಗಿ ತಂಡ 275ರನ್​ಗಳಿಕೆ ಮಾಡುತ್ತದೆ. ಈ ಜೋಡಿ ವಿಕೆಟ್​ ಪಡೆದುಕೊಳ್ಳಲು ಟೀಂ ಇಂಡಿಯಾ ಬೌಲರ್​ಗಳು ಹರಸಾಹಸ ಪಡುತ್ತಾರೆ. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹರಿಣಗಳ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮನ್​ ತೆಂಬಾ ಬಾವುಮಾ ಮಾತನಾಡಿದ್ದಾರೆ.

Temba Bavuma
ಆಫ್ರಿಕಾ ತಂಡದ ಬ್ಯಾಟ್ಸ್​​ಮನ್​ಗಳು

ಕೆಳ ಕ್ರಮಾಂಕದ ಬ್ಯಾಟ್ಸ್​​ಮನ್​ಗಳು ಉತ್ತಮವಾಗಿ ಬ್ಯಾಟಿಂಗ್​ ಮಾಡಿದಾಗ ಅಗ್ರ ಕ್ರಮಾಂಕದ ಬ್ಯಾಟ್ಸ್​​ಮನ್​ಗಳಲ್ಲಿರುವ ಅಹಂ ಕಡಿಮೆಯಾಗುತ್ತದೆ. ಕೆಳ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಯಾವ ರೀತಿಯಾಗಿ ಎದುರಾಳಿಗಳನ್ನ ಎದುರಿಸಿದ್ದಾರೆ ಎಂಬುದನ್ನ ಈ ಇನ್ನಿಂಗ್ಸ್​​ನಿಂದ ನೋಡಿ ನಾವು ಕಲಿತುಕೊಳ್ಳಬೇಕಿದೆ. ನಿಜವಾಗಲೂ ನಮ್ಮಿಂದ ಉತ್ತಮವಾದ ಬ್ಯಾಟಿಂಗ್​ ಮೂಡಿ ಬರಬೇಕಾದರೆ ಕೆಳ ಕ್ರಮಾಂಕದ ಬ್ಯಾಟ್ಸ್​​ಮನ್​ಗಳಿಂದ ಕಲಿಯಬೇಕಾಗಿದ್ದು ತುಂಬಾ ಇದೆ ಎಂದಿದ್ದಾರೆ.

ಈಗಾಗಲೇ ಮುಗಿದು ಹೋಗಿರುವ ಮೊದಲ ಟೆಸ್ಟ್​ ಹಾಗೂ ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​​ನಲ್ಲಿ ನಾವು ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಆದರೆ ಮುಂದಿನ ಪಂದ್ಯಗಳಲ್ಲಿ ಅದನ್ನ ಅಳವಡಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮುಂದೆ ಇದೆ ಎಂದಿದ್ದಾರೆ.

Intro:Body:

ಫಿಲ್ಯಾಂಡರ್​​​-ಮಹಾರಾಜ್​ ಬ್ಯಾಟಿಂಗ್​​ನಿಂದ ನಮ್ಮಲ್ಲಿರುವ ಅಹಂ ಕಡಿಮೆಯಾಗಲಿ: ಬಾವುಮಾ

ಪುಣೆ: ಟೀಂ ಇಂಡಿಯಾ ವಿರುದ್ಧದ ಎರಡನೇ ಟೆಸ್ಟ್​​ ಪಂದ್ಯದಲ್ಲೂ ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕದ ಬ್ಯಾಟ್ಸಮನ್​​ಗಳು ವೈಫಲ್ಯ ಅನುಭವಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹರಿಣಗಳ ತಂಡದ ಬ್ಯಾಟ್ಸ್​ಮನ್​ ಮಾತನಾಡಿದ್ದಾರೆ. 

ಟೀಂ ಇಂಡಿಯಾದ 601ರನ್​ಗಳಿಗೆ ಉತ್ತರ ನೀಡಲು ಮುಂದಾದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್​​ನಲ್ಲಿ 168ರನ್​ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 8ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ  ಸಿಲುಕಿತು. ಇನ್ನೇನು ಉಳಿದೆರಡು ವಿಕೆಟ್​ಗಳನ್ನ 200ರಗಡಿಯೊಳಗೆ ಟೀಂ ಇಂಡಿಯಾ ಆಲೌಟ್​ ಮಾಡಲಿದೆ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಆದರೆ ಈ ವೇಳೆ 9ನೇ ವಿಕೆಟ್​ಗೆ ಒಂದಾದ ಫಿಲ್ಯಾಂಡರ್​ ಹಾಗೂ ಕೇಶವ್​ ಮಹಾರಾಜ್​ ತಂಡಕ್ಕೆ ಯಾರೋ ಊಹೆ ಮಾಡದ ರೀತಿಯಲ್ಲಿ ಚೇತರಿಕೆ ನೀಡಿದ್ರು. ಈ ಜೋಡಿ ಬರೋಬ್ಬರಿ 109ರನ್​ಗಳ ಜೊತೆಯಾಟ ನೀಡಿದರು. ಫಿಲ್ಯಾಂಡರ್​​ 44ರನ್​ಗಳಿಕೆ ಮಾಡಿದರೆ, ಮಹಾರಾಜ್​ 72ರನ್​ಗಳಿಕೆ ಮಾಡಿದರು. ಹೀಗಾಗಿ ತಂಡ 275ರನ್​ಗಳಿಕೆ ಮಾಡುತ್ತದೆ. ಈ ಜೋಡಿ ವಿಕೆಟ್​ ಪಡೆದುಕೊಳ್ಳಲು ಟೀಂ ಇಂಡಿಯಾ ಬೌಲರ್​ಗಳು ಹರಸಾಹಸ ಪಡುತ್ತಾರೆ. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹರಿಣಗಳ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮನ್​ ತೆಂಬಾ ಬಾವುಮಾ ಮಾತನಾಡಿದ್ದಾರೆ. 

ಕೆಳ ಕ್ರಮಾಂಕದ ಬ್ಯಾಟ್ಸ್​​ಮನ್​ಗಳು ಉತ್ತಮವಾಗಿ ಬ್ಯಾಟಿಂಗ್​ ಮಾಡಿದಾಗ ಅಗ್ರ ಕ್ರಮಾಂಕದ ಬ್ಯಾಟ್ಸ್​​ಮನ್​ಗಳಲ್ಲಿರುವ ಅಹಂ ಕಡಿಮೆಯಾಗುತ್ತದೆ. ಕೆಳ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಯಾವ ರೀತಿಯಾಗಿ ಎದುರಾಳಿಗಳನ್ನ ಎದುರಿಸಿದ್ದಾರೆ ಎಂಬುದನ್ನ ಈ ಇನ್ನಿಂಗ್ಸ್​​ನಿಂದ ನೋಡಿ ನಾವು ಕಲಿತುಕೊಳ್ಳಬೇಕಿದೆ. ನಿಜವಾಗಲೂ ನಮ್ಮಿಂದ ಉತ್ತಮವಾದ ಬ್ಯಾಟಿಂಗ್​ ಮೂಡಿ ಬರಬೇಕಾದರೆ ಕೆಳ ಕ್ರಮಾಂಕದ ಬ್ಯಾಟ್ಸ್​​ಮನ್​ಗಳಿಂದ ಕಲಿಯಬೇಕಾಗಿದ್ದು ತುಂಬಾ ಇದೆ ಎಂದಿದ್ದಾರೆ. 

ಈಗಾಗಲೇ ಮುಗಿದು ಹೋಗಿರುವ ಮೊದಲ ಟೆಸ್ಟ್​ ಹಾಗೂ ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​​ನಲ್ಲಿ ನಾವು ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಆದರೆ ಮುಂದಿನ ಪಂದ್ಯಗಳಲ್ಲಿ ಅದನ್ನ ಅಳವಡಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮುಂದೆ ಇದೆ ಎಂದಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.