ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಸಂಬಂಧ ಶೃತಿ ಮೋದಿಯನ್ನು ಇಂದು ಹಾಗೂ ಸ್ನೇಹಿತ ಸಿದ್ಧಾರ್ಥ್ ಪಿಥಾನಿಯನ್ನು ಆಗಸ್ಟ್ 8 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದೆ.
ಪ್ರಕರಣ ಸಂಬಂಧ ಆರು ಜನರ ವಿರುದ್ಧ ಈಗಾಗಲೇ FIR ದಾಖಲಾಗಿತ್ತು. ಈ ಪೈಕಿ ನಟಿ ರಿಯಾ ಚಕ್ರವರ್ತಿ, ಶೃತಿ ಮೋದಿ ಮತ್ತು ಸಿದ್ಧಾರ್ಥ್ ಪಿಥಾನಿ ಅವರ ಹೆಸರು ಕೂಡ ಸೇರಿವೆ. ರಿಯಾ ಚಕ್ರವರ್ತಿಗೆ ಇಂದು ಇಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಈಗಾಗಲೇ ರಿಯಾ ಇಡಿ ಕಚೇರಿ ತಲುಪಿದ್ದು, ಅಧಿಕಾರಿಗಳು ವಿಚಾರಣೆ ಪ್ರಾರಂಭಿಸಿದ್ದಾರೆ.
ಶ್ರುತಿ ಮೋದಿ ಯಾರು?
ಶೃತಿ ಮೋದಿಯು ನಟಿ ರಿಯಾ ಚಕ್ರವರ್ತಿ ಮತ್ತು ಇವರ ಸಹೋದರ ಶೋಯಿಕ್ ಚಕ್ರವರ್ತಿಯ ಮಾಜಿ ಬ್ಯುಸಿನೆಸ್ ಮ್ಯಾನೇಜರ್ ಆಗಿದ್ದು, ಸುಶಾಂತ್ ಸಿಂಗ್ ಜೊತೆ ಬಹಳ ಅನ್ಯೋನ್ಯತೆಯಿಂದ ಇದ್ದರು. ಅಲ್ಲದೇ ಸುಶಾಂತ್ಗೆ ಕೂಡ ಬ್ಯುಸಿನೆಸ್ ಮ್ಯಾನೇಜರ್ ಆಗಿದ್ದರು ಎಂದು ಮೂಲಗಳು ತಿಳಿಸಿವೆ.