ಶ್ರೀನಗರ: ಜಮ್ಮು - ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದೆ. ರಾತ್ರಿ ಎರಡು ಗಂಟೆ ಸುಮಾರಿಗೆ ಭೂಮಿ ನಡುಗಿದ ಅನುಭವವಾಗಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ ಶೇ 4.3 ರಷ್ಟು ದಾಖಲಾಗಿದೆ. ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಅರುಣಾಚಲ ಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಮಂಗಳವಾರ ಭೂಕಂಪನ ಸಂಭವಿಸಿತ್ತು. ಮಂಗಳವಾರ ಅರುಣಾಚಲ ಪ್ರದೇಶದಲ್ಲಿ ಸುಮಾರು 3.4 ರಷ್ಟು ಹಾಗೂ ಹಿಮಾಚಲದಲ್ಲಿ ಶೇ 3.2 ತೀವ್ರತೆಯ ಭೂಕಂಪನವಾಗಿತ್ತು.
ಇಂದು ಕಾಶ್ಮೀರದಲ್ಲಿ ಆಗಿದೆ. ಮುಂಜಾನೆ 3.37 ಕ್ಕೆ ಲಡಾಖ್‌ನ ಕಾರ್ಗಿಲ್‌ನಲ್ಲಿ ಭೂಮಿ ನಡುಗಿದೆ. ಇದು ರಿಕ್ಟರ್ ಮಾಪನದಲ್ಲಿ ಸುಮಾರು 4.7 ತೀವ್ರತೆ ಹೊಂದಿತ್ತು ಎಂದು ಕೇಂದ್ರ ಭೂಗರ್ಭ ಇಲಾಖೆ ತಿಳಿಸಿದೆ.