ETV Bharat / bharat

ಈಶಾನ್ಯ ರಾಜ್ಯದಲ್ಲಿ ಭೂಕಂಪ: ಮನೆಗಳಿಗೆ ಹಾನಿ, ಬಿರುಕುಬಿಟ್ಟ ರಸ್ತೆಗಳು - ಭಾರತದಲ್ಲಿ ಭೂಕಂಪ

ಮಿಜೋರಾಂನಲ್ಲಿ ಕೆಲ ದಿನಗಳಿಂದ ಭೂಕಂಪ ಸಂಭವಿಸುತ್ತಿದ್ದು, ಈ ಬಾರಿ 5.3ರಷ್ಟು ತೀವ್ರತೆ ದಾಖಲಾಗಿದೆ. ಈ ಕುರಿತು ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದು, ಅಗತ್ಯ ಕ್ರಮದ ಭರವಸೆ ನೀಡಿದ್ದಾರೆ.

Earthquake
ಭೂಕಂಪನ
author img

By

Published : Jun 22, 2020, 12:25 PM IST

ಐಜ್ವಾಲ್​ (ಮಿಜೋರಾಂ): ಈಶಾನ್ಯ ರಾಜ್ಯವಾದ ಮಿಜೋರಾಂನಲ್ಲಿ ಬೆಳಗ್ಗೆ 5.3ರಷ್ಟು ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ. ಪರಿಣಾಮವಾಗಿ ಕೆಲವು ಮನೆಗಳಿಗೆ ಹಾನಿಯಾಗಿದ್ದು, ಕೆಲ ಪ್ರದೇಶಗಳ ರಸ್ತೆಗಳು ಬಿರುಕುಬಿಟ್ಟಿವೆ.

Earthquake
ಭೂಕಂಪನ

ಭೂಕಂಪನದಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ರಾಜ್ಯ ಪರಿಸರ ವಿಜ್ಞಾನ ಮತ್ತು ಖನಿಜ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ನ್ಯಾಷನಲ್​ ಸೆಂಟರ್​ ಫಾರ್ ಸಿಸ್ಮೋಲಜಿಯ ಮಾಹಿತಿಯಂತೆ ಬೆಳಗ್ಗೆ ಮುಂಜಾನೆ 4.10ಕ್ಕೆ ಭೂಕಂಪ ಸಂಭವಿಸಿದ್ದು, ಭಾರತ - ಮಯನ್ಮಾರ್​ ಗಡಿಯ ಚಾಂಫೈ ಜಿಲ್ಲೆಯ ಝೋಖಾವ್ತಾರ್ ಪಟ್ಟಣ ಭೂಕಂಪದ ಕೇಂದ್ರ ಬಿಂದುವಾಗಿದೆ.

Earthquake
ಭೂಕಂಪನ

ಮಿಜೋರಾಂನ ರಾಜಧಾನಿ ಐಜ್ವಾಲ್​ ಸೇರಿದಂತೆ ಭೂಮಿ ನಡುಗಿದ ಅನುಭವವಾಗಿದೆ. ಈಗ ಸಂಭವಿಸಿರುವ ಹಾನಿಯ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಮಿಜೋರಾಂ ಸಿಎಂರೊಂದಿಗೆ ದೂರವಾಣಿಯಲ್ಲಿ ಮಾತನಾಡಲಾಗಿದೆ. ಅಗತ್ಯ ಕ್ರಮಕ್ಕೆ ನೆರವು ನೀಡಲಾಗುತ್ತಿದೆ ಎಂದಿದ್ದಾರೆ.

ಭಾನುವಾರವೂ ಕೂಡಾ 5.1ರ ತೀವ್ರತೆಯಲ್ಲಿ, ಜೂನ್​ 18ರಂದು 4.6ರಷ್ಟು ತೀವ್ರತೆಯಲ್ಲಿ ಮಿಜೋರಾಂನಲ್ಲಿ ಭೂಕಂಪನ ಸಂಭವಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.