ETV Bharat / bharat

ಕಾರ್ಗಿಲ್​ನಲ್ಲಿ 4.2 ತೀವ್ರತೆಯ ಭೂಕಂಪನ - ರಿಕ್ಟರ್​ ಮಾಪಕ

ಲಡಾಖ್​ನ ಕಾರ್ಗಿಲ್​​ನಲ್ಲಿ ಇಂದು ಬೆಳಗ್ಗೆ 9.22ಕ್ಕೆ ಭೂಕಂಪನ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 4.2ರಷ್ಟು ತೀವ್ರತೆ ದಾಖಲಾಗಿದೆ.

Earthquake
ಭೂಕಂಪ
author img

By

Published : Oct 8, 2020, 10:38 AM IST

ಕಾರ್ಗಿಲ್​: ಲಡಾಖ್​ನ ಕಾರ್ಗಿಲ್​​ನಲ್ಲಿ ಮಧ್ಯಮ ತೀವ್ರತೆಯ ಭೂಕಂಪನ ಸಂಭವಿಸಿರುವುದಾಗಿ ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.

ಇಂದು ಬೆಳಗ್ಗೆ 9.22ಕ್ಕೆ ಉಂಟಾದ ಭೂಕಂಪನದ ಕೇಂದ್ರ ಬಿಂದು 10 ಕಿ.ಮೀ ಆಳದಲ್ಲಿದ್ದು, ರಿಕ್ಟರ್​ ಮಾಪಕದಲ್ಲಿ 4.2ರಷ್ಟು ತೀವ್ರತೆ ದಾಖಲಾಗಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 72 ಗಂಟೆಗಳಲ್ಲಿ ಲಡಾಖ್ ಭಾಗದಲ್ಲಿ ಸಂಭವಿಸಿದ ಎರಡನೇ ಭೂಕಂಪನ ಇದಾಗಿದೆ. ಅಕ್ಟೋಬರ್​ 6 ರಂದು 5.1 ತೀವ್ರತೆಯ ಭೂಕಂಪನ ಸಂಭವಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.