ಜಮ್ಮು (ಜಮ್ಮುಕಾಶ್ಮೀರ): ಬೆಳಗ್ಗೆ 7 ಗಂಟೆಗೆ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಮೂರು ದಿನಗಳಲ್ಲಿ ಮೂರನೇ ಬಾರಿ ಭೂಕಂಪನ ಸಂಭವಿಸಿದ್ದು ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ತಜಕಿಸ್ತಾನದಲ್ಲಿ ಭೂಕಂಪನ ಸಂಭವಿಸಿದ ಬೆನ್ನಲ್ಲೇ ಕಾಶ್ಮೀರದಲ್ಲಿ ಬಲವಾಗಿ ಭೂಮಿ ಕಂಪಿಸಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶ್ರೀನಗರ, ಕಿಶ್ತ್ವಾರ್ ಹಾಗು ದೋಡಾ ಸೇರಿದಂತೆ ಹಲವಡೆ ಭೂಮಿ ನಡುಗಿದ ಅನುಭವವಾಗಿದೆ.
ಇದನ್ನೂ ಓದಿ: ತಜಕಿಸ್ತಾನದಲ್ಲಿ ಭಾರಿ ಭೂಕಂಪ: 6.8ರಷ್ಟು ತೀವ್ರತೆ ದಾಖಲು
ಕೆಲ ದಿನಗಳ ಹಿಂದಷ್ಟೇ ಕಾಶ್ಮೀರದಲ್ಲಿ 3.9ರ ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಪ್ರಾಂತೀಯ ಆಡಳಿತದ ವರದಿಯಂತೆ 8.15ಕ್ಕೆ ಘಟನೆ ಸಂಭವಿಸಿದೆ. ಕಾಶ್ಮೀರದ ಭೂಭಾಗ ಭೂಕಂಪನ ಸೂಕ್ಷ್ಮ ಪ್ರದೇಶದಲ್ಲಿರುವ ಕಾರಣದಿಂದಾಗಿ ಅತಿ ಹೆಚ್ಚು ಅವಘಡಗಳು ಇಲ್ಲಿ ವರದಿಯಾಗುತ್ತಿವೆ.
ಅಕ್ಟೋಬರ್ 8, 2005ರಲ್ಲಿ ಕಾಶ್ಮೀರದ ಅಂತಾರಾಷ್ಟ್ರೀಯ ಗಡಿರೇಖೆಯ ಬಳಿ (ಲೈನ್ ಆಫ್ ಕಂಟ್ರೋಲ್) ಅತಿ ಪ್ರಬಲವಾದ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 7.6ರ ತೀವ್ರತೆ ದಾಖಲಾಗಿತ್ತು. ಈ ಘಟನೆಯಲ್ಲಿ ಎರಡೂ ಬದಿಗಳಲ್ಲಿ ಸುಮಾರು 80 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದರು.