ನವದೆಹಲಿ: ದೆಹಲಿ, ಕಾಶ್ಮೀರ ಉತ್ತರ ಭಾರತದ ಕೆಲವು ಪ್ರದೇಶಗಳು ಮತ್ತು ಪಾಕಿಸ್ತಾನದ ವ್ಯಾಪ್ತಿಯಲ್ಲಿ ಸಂಜೆ 4:30ರ ವೇಳೆಗೆ ಭೂಕಂಪನವಾಗಿದೆ ಎಂಬುದು ವರದಿಯಾಗಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ ನವದೆಹಲಿ, ಚಂಡೀಗಢ, ಕಾಶ್ಮೀರ ಪ್ರದೇಶಗಳು ಒಳಗೊಂಡಂತೆ ಪಾಕಿಸ್ತಾನದ ಇಸ್ಲಾಮಾಬಾದ್ ಮತ್ತು ಖೈಬೆರ್ ಫಕ್ತುನ್ ಪ್ರದೇಶದಲ್ಲೂ ಭೂಮಿ ಕಂಪಿಸಿದೆ.
ಅನನ್ಯಾ ಭಟ್ಟಚಾರ್ಯ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಭೂ ಕಂಪನದಿಂದ ಮನೆಯ ಸಾಮಗ್ರಿಗಳು ಅಲುಗಾಡುವ 9 ನಿಮಿಷಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಭೂಕಂಪನದ ಕುರಿತು ಹೆಚ್ಚಿನ ಮಾಹಿತಿ ಎದುರು ನೋಡಲಾಗುತ್ತಿದೆ.
-
#Earthquake. Video from my society.#Noida pic.twitter.com/4sz3Exh6Q6
— Ananya Bhattacharya (@ananya116) September 24, 2019 " class="align-text-top noRightClick twitterSection" data="
">#Earthquake. Video from my society.#Noida pic.twitter.com/4sz3Exh6Q6
— Ananya Bhattacharya (@ananya116) September 24, 2019#Earthquake. Video from my society.#Noida pic.twitter.com/4sz3Exh6Q6
— Ananya Bhattacharya (@ananya116) September 24, 2019
ಭೂಕಂಪನದ ಕುರಿತು ಇತ್ತೀಚಿನ ವರದಿ
ಪಾಕ್ ಆಕ್ರಮಿತ ಕಾಶ್ಮೀರ, ಭಾರತ- ಪಾಕಿಸ್ತಾನದ ಗಡಿ ವ್ಯಾಪ್ತಿಯ ಪ್ರದೇಶದಲ್ಲಿ ಸಂಜೆ 4:31ರ ವೇಳೆಗೆ 6.3 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
-
Earthquake of Magnitude:6.3, Occurred on:24-09-2019, 16:31:58 IST, Lat:32.9 N & Long: 73.7 E, Depth: 40 Km, Region: Pakistan - India (J & K ) Border region pic.twitter.com/tH6RDjGuxD
— India Met. Dept. (@Indiametdept) September 24, 2019 " class="align-text-top noRightClick twitterSection" data="
">Earthquake of Magnitude:6.3, Occurred on:24-09-2019, 16:31:58 IST, Lat:32.9 N & Long: 73.7 E, Depth: 40 Km, Region: Pakistan - India (J & K ) Border region pic.twitter.com/tH6RDjGuxD
— India Met. Dept. (@Indiametdept) September 24, 2019Earthquake of Magnitude:6.3, Occurred on:24-09-2019, 16:31:58 IST, Lat:32.9 N & Long: 73.7 E, Depth: 40 Km, Region: Pakistan - India (J & K ) Border region pic.twitter.com/tH6RDjGuxD
— India Met. Dept. (@Indiametdept) September 24, 2019
ಇದುವರೆಗಿನ ಮಾಹಿತಿ ಪ್ರಕಾರ ಯಾವುದೇ ಪ್ರಾಣಪಾಯ ಮತ್ತು ಕಟ್ಟಡ ಕುಸಿತದ ಘಟನೆಗಳು ತಿಳಿದುಬಂದಿಲ್ಲ. ಭೂಮಿಕ 40 ಕಿ.ಮೀ. ಆಳದಲ್ಲಿ 6.3 ತೀವ್ರತೆಯ ಕಂಪನ ಉಂಟಾಗಿದೆ ಎಂದು ಐಎಂಡಿ ತಿಳಿಸಿದೆ.
ಉತ್ತರ ಭಾರತದ ಪಂಜಾಬ್, ಹರಿಯಾಣ ಒಳಗೊಂಡು ಪಾಕಿಸ್ತಾನದ ಪೇಶಾವರ್, ರಾಲ್ಪಿಂಡಿ ಮತ್ತು ಲಾಹೋರ್ನಲ್ಲಿ 8-10 ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದೆ ಎಂದು ಭೂಕಂಪಶಾಸ್ತ್ರ ವಿಭಾಗ ತಿಳಿಸಿದೆ.