ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಪ್ರಯುಕ್ತ ಮೋದಿ ಅವರಿಗೆ ನೀಡಲಾಗಿದ್ದ ಬೆಳ್ಳಿ ಕಿರೀಟ ಮತ್ತು ಫೋಟೋ ಸ್ಟ್ಯಾಂಡ್ ಬರೋಬ್ಬರಿ ಒಂದು ಕೋಟಿ ರೂಪಾಯಿಗೆ ಹರಾಜಾಗಿವೆ.
ಮೋದಿಗೆ ಬಂದಿರುವ ಉಡುಗೊರೆಗಳನ್ನ ಸಂಸ್ಕೃತಿ ಸಚಿವಾಲಯ ಇ-ಹರಾಜಿಗೆ ಇರಿಸಿದ್ದು, ಗುಜರಾತಿ ಭಾಷೆಯಲ್ಲಿ ಒಂದು ಸಂದೇಶವಿರುವ 500 ರೂಪಾಯಿ ಮೂಲ ಬೆಲೆಯ ಮೋದಿ ಫೋಟೋ ಸ್ಟ್ಯಾಂಡ್ ಬರೋಬ್ಬರಿ ಒಂದು ಕೋಟಿ ರೂಪಾಯಿಗೆ ಹರಾಜಾಗಿದೆ. ಇನ್ನು, 18 ಸಾವಿರ ಮೂಲ ಬೆಲೆಯ ಬೆಳ್ಳಿ ಕಳಸ ಒಂದು ಕೋಟಿ ಮುನ್ನೂರು ರೂಪಾಯಿಗೆ ಹರಾಜಾಗಿದೆ.
ಶಾಲು, ಜಾಕೆಟ್ಗಳು ಸೇರಿದಂತೆ ಬರೋಬ್ಬರಿ 2,700 ವಸ್ತುಗಳನ್ನ ಸೆ.14 ರಿಂದ ಅ.3ರ ವರೆಗೆ ಹರಾಜಿಗೆ ಇರಿಸಿದ್ದು ಆಸಕ್ರಿ ಇರುವವರು www. pmmementos.gov.in ಇಲ್ಲಿಗೆ ಭೇಟಿ ನೀಡಿ ಆನ್ಲೈನ್ ಮೂಲಕ ವಸ್ತುಗಳನ್ನ ಕೊಳ್ಳಬಹುದಾಗಿದೆ. ಇನ್ನು, ಹರಾಜಿನ ಮೂಲಕ ಬಂದ ಹಣವನ್ನ ನಮಾಮಿ ಗಂಗೆ ಯೋಜನೆಗೆ ಬಳಸಲಾಗುವುದು ಎಂದು ತಿಳಿಸಲಾಗಿದೆ.